ಮುಂದಿನ ಪ್ರಧಾನಿಯಾಗಿ ಯಾರನ್ನು ನೋಡಲು ಬಯಸುತ್ತೀರಿ, ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ? ABP Cವೋಟರ್ ನಡೆಸಿದ ಸಮೀಕ್ಷೆಯಲ್ಲಿ ಈ ಪ್ರಶ್ನೆ ಕೇಳಲಾಗಿತ್ತು. ಬಹುತೇಕ ರಾಜ್ಯಗಳು ಮೋದಿಯನ್ನೇ ಪ್ರಧಾನಿಯಾಗಿ ನೋಡಲು ಬಯಸಿದೆ. ಕರ್ನಾಟಕದಲ್ಲಿ ಶೇಕಡಾ 65 ರಷ್ಟು ಮಂದಿ ಮೋದಿ ಮತ್ತೊಮ್ಮೆ ಎಂದಿದ್ದಾರೆ.ಒಂದು ರಾಜ್ಯದಲ್ಲಿ ಮೋದಿಗಿಂತ ರಾಹುಲ್ ಗಾಂಧಿಗೆ ಹೆಚ್ಚಿನ ಮತ ಬಿದ್ದಿದೆ.
ನವದೆಹಲಿ(ಡಿ.25) ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದೆ. ಇದರ ಬೆನ್ನಲ್ಲೇ ಚುನಾವಣೆ ಪೂರ್ವ ಸಮೀಕ್ಷೆಗಳು ಲೋಕಸಭೆ ಚುನಾವಣಾ ಅಖಾಡವನ್ನು ಮತ್ತಷ್ಟು ರಂಗೇರಿಸಿದೆ. ಎಬಿಪಿ ಸಿವೋಟರ್ ನಡೆಸಿದ ಸಮೀಕ್ಷಾ ವರದಿ ಬಹಿರಂಗವಾಗಿದೆ. ಈಗ ಚುನಾವಣೆ ನಡೆದೆರೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದುಸಮೀಕ್ಷೆ ಹೇಳಿದೆ. ಇದೇ ಸಮೀಕ್ಷೆಯಲ್ಲಿ ಮುಂದಿನ ಪ್ರಧಾನಿಯಾಗಿ ಯಾರನ್ನು ನೋಡಲು ಬಯಸುತ್ತಿರಿ ಎಂಬ ಪ್ರಶ್ನೆಗೆ ಬಹುತೇಕರು ನರೇಂದ್ರ ಮೋದಿ ಎಂದು ಉತ್ತರಿಸಿದ್ದಾರೆ. ಕರ್ನಾಟಕದಲ್ಲಿ ಶೇಕಡಾ 65 ರಷ್ಟು ಮೋದಿ ಮೋದಿ ಎಂದಿದ್ದರೆ, ಶೇಕಡಾ 26 ರಷ್ಟು ಮಂದಿ ರಾಹುಲ್ ಗಾಂಧಿ ಎಂದಿದ್ದಾರೆ.
ಮುಂದಿನ ಪ್ರಧಾನಿಯಾಗಿ ಮೋದಿ ಆಗಬೇಕು ಎಂದು ಬಹುತೇಕ ರಾಜ್ಯಗಳು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಪೈಕಿ ಕರ್ನಾಟಕ ಹಾಗೂ ಬಿಹಾರದಲ್ಲಿ ರಾಹುಲ್ ಗಾಂಧಿಗೆ ಅತೀ ಕಡಿಮೆ ಮತ ಬಿದ್ದಿದೆ. ಎರಡು ರಾಜ್ಯದಲ್ಲಿ ಶೇಖಡಾ 26 ರಷ್ಟು ಮಂದಿ ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗಿ ನೋಡಲು ಬಯುತ್ತಿದ್ದೇವೆ ಎಂದಿದ್ದಾರೆ. ಕರ್ನಾಟಕದ ಶೇಕಡಾ 2 ರಷ್ಟು ಮಂದಿ ಯಾರಾದರೂ ಒಕೆ ಎಂದಿದ್ದರೆ, ಶೇಕಡಾ 7 ರಷ್ಟು ಮಂದಿ ಗೊತ್ತಿಲ್ಲ ಎಂದಿದ್ದಾರೆ.
ಲೋಕಸಭಾ ಚುನಾವಣೆ ABP Cವೋಟರ್ ಸಮೀಕ್ಷೆ, ಮತ್ತೆ ಮೋದಿ ಸರ್ಕಾರ, ಕರ್ನಾಟಕದಲ್ಲಿ 24 ಸ್ಥಾನ!
ಮುಂದಿನ ಪ್ರಧಾನಿ ಯಾರು ಅನ್ನೋ ಪ್ರಶ್ನೆಗೆ ರಾಜ್ಯವಾರು ಜನರು ನೀಡಿದ ಉತ್ತರದ ವಿವರ ಇಲ್ಲಿದೆ. ಚತ್ತೀಘಡದಲ್ಲಿ ಪ್ರಧಾನಿ ಮೋದಿಗೆ ಶೇಕಡಾ 67 ರಷ್ಟು ಮತಗಳು ಬಿದ್ದಿದ್ದರೆ, ರಾಹುಲ್ ಗಾಂಧಿಗೆ ಶೇಕಡಾ 29 ರಷ್ಟು ಮತಗಳು ಬಿದ್ದಿವೆ.ಮಧ್ಯಪ್ರದೇಶದಲ್ಲಿ ಮೋದಿಗೆ ಶೇಕಡಾ 66, ರಾಹುಲ್ ಗಾಂಧಿಗೆ ಶೇಕಡಾ 28. ರಾಜಸ್ಥಾನದಲ್ಲಿ ಮೋದಿಗೆ ಶೇಕಾಡ 65 ಹಾಗೂ ರಾಹುಲ್ ಗಾಂಧಿಗೆ ಶೇಕಡಾ 32. ಬಿಹಾರದಲ್ಲಿ ಮೋದಿಗೆ ಶೇಕಡಾ 66 ಹಾಗೂ ರಾಹುಲ್ ಗಾಂಧಿಗೆ ಶೇಕಡಾ 26. ಮಹಾರಾಷ್ಟ್ರದಲ್ಲಿ ಮೋದಿಗೆ ಶೇಕಡಾ 55, ರಾಹುಲ್ ಗಾಂಧಿಗೆ ಶೇಕಡಾ 30. ಪಶ್ಚಿಮ ಬಂಗಾಳದಲ್ಲಿ ಮೋದಿಗೆ ಶೇಕಡಾ 60, ರಾಹುಲ್ ಗಾಂಧಿಗೆ ಶೇಕಡಾ 35. ಉತ್ತರ ಪ್ರದೇಶದಲ್ಲಿ ಮೋದಿಗೆ ಶೇಕಡಾ 60 ಹಾಗೂ ರಾಹುಲ್ ಗಾಂಧಿಗೆ ಶೇಕಡಾ 30. ಇನ್ನು ತೆಲಂಗಾಣದಲ್ಲಿ ಮೋದಿಗೆ ಶೇಕಡಾ 50, ರಾಹುಲ್ ಗಾಂಧಿಗೆ ಶೇಕಡಾ 40 ರಷ್ಟು ಮಂದಿ ಮತ ಹಾಕಿದ್ದಾರೆ.
ಈ ಸಮೀಕ್ಷೆಯಲ್ಲಿ ಮತ್ತೊಂದು ಕುತೂಹಲ ಮಾಹಿತಿ ಎಂದರೆ ಪಂಜಾಬ್‌ನಲ್ಲಿ ಮೋದಿಗಿಂತ ರಾಹುಲ್ ಗಾಂಧಿಯನ್ನು ಮುಂದಿನ ಪ್ರಧಾನಿಯಾಗಿ ಜನ ನೋಡಲು ಬಯಸಿದ್ದಾರೆ. ಪಂಜಾಬ್‌ನಲ್ಲಿ ರಾಹುಲ್ ಗಾಂಧಿಗೆ ಶೇಕಡಾ 36 ಹಾಗೂ ಮೋದಿಗೆ ಶೇಕಡಾ 35 ರಷ್ಟು ಮತ ಸಿಕ್ಕಿದೆ.
ಸಾಲು ಸಾಲು ಸರ್ವೆಗಳಲ್ಲೂ ಮೋದಿಗೇ ಗೆಲುವು! ನಿಜವಾಗಲಿದೆಯಾ ಮೋದಿ ‘400’ ನಿರೀಕ್ಷೆ?
ಈಗ ಲೋಕಸಭೆ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 28 ಸ್ಥಾನಗಳ ಪೈಕಿ ಭರ್ಜರಿ 22-24 ಸ್ಥಾನ ಪಡೆಯಲಿದೆ. ಕಾಂಗ್ರೆಸ್‌ಗೆ ಕೇವಲ 4-6 ಸ್ಥಾನ ಬರುವ ನಿರೀಕ್ಷೆ ಇದೆ ಎಂದು ಎಬಿಪಿ ನ್ಯೂಸ್ ಹಾಗೂ ಸಿ-ವೋಟರ್ ಸಮೀಕ್ಷೆ ಹೇಳಿದೆ.ಇನ್ನು ಬಿಜೆಪಿ ಶೇ.52, ಕಾಂಗ್ರೆಸ್ ಶೇ.43 ಹಾಗೂ ಇತರರು ಶೇ.5 ಮತ ಗಳಿಸಬಹುದು ಎಂದು ಅದು ಅಂದಾಜಿಸಿದೆ. ಇತ್ತೀಚೆಗಷ್ಟೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡ ಪರಿಣಾಮ ಉಭಯ ಪಕ್ಷಗಳಿಗೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ ಎಂದು ಬಣ್ಣಿಸಲಾಗಿದೆ.