ಗಲ್ವಾನ್ ಕಣಿವೆಯಲ್ಲಿ 40 ಚೀನಾ ಯೋಧರು ಹತ: ಮಾಹಿತಿ ಬಿಚ್ಚಿಟ್ಟಾತನಿಗೆ 8 ತಿಂಗಳು ಜೈಲು!

By Suvarna NewsFirst Published Jun 1, 2021, 1:06 PM IST
Highlights

* ವರ್ಷದ ಹಿಂದೆ ಗಾಲ್ವಾನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆ

* ಹಿಂಸಾತ್ಮಕ ಘರ್ಷಣೆಯಲ್ಲಿ ಹತರಾದ ಯೋಧರ ಸಂಖ್ಯೆ ಮುಚ್ಚಿಟ್ಟಿದ್ದ ಚೀನಾ

* ಚೀನಾ ಮಾಹಿತಿ ಬಯುಲು ಮಾಡಿದ ಬ್ಲಾಗರ್‌ಗೆ ಎಂಟು ವರ್ಷ ಜೈಲು

ಬೀಜಿಂಗ್(ಜೂ.01): ಜೂನ್ 2020ರಲ್ಲಿ ಗಲ್ವಾನ್‌ ಕಣಿಬವೆಯಲ್ಲಿ ಭಾರತ ಹಾಗೂ ಚೀನಾ ಯೋಧರ ನಡುವೆ ನಡೆವಿನ ಹಿಂಸಾತ್ಮಕ ಸಂಘರ್ಷಕ್ಕೆ ಸಂಬಂಧಿಸೊದ ಸತ್ಯ ಹೊರ ಹಾಕಿದ ಚೀನಾದ ಫರ್ವ ಬ್ಲಾಗರ್‌ಗೆ ಎಂಟು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಚೀನಾ ಸರ್ಕಾರ ಈ ಬಗ್ಗೆ ಕ್ರಮ ವಹಿಸಿದ ಬಳಿಕ ಆತನಿಗೆ ಜೈಲು ಶಿಕ್ಷೆಯಾಗಿದೆ. ಈ ಬ್ಲಾಗರ್, ಉಭಯ ದೇಶಗಳ ನಡುವಿನ ಸಂಘರ್ಷದಲ್ಲಿ ಚೀನಾದ ಸುಮಾರು 40 ಸೈನಿಕರು ನಿಧನರಾಗಿದ್ದರೆಂಬ ವಿಚಾರ ಬಹಿರಂಗಪಡಿಸಿದ್ದರು. ಆದರೆ ಚೀನಾ ಇದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಇನ್ನು ಈ ಬ್ಲಾಗರ್ ಚೀನಾದ ಸೈನಿಕರು ಹಾಗೂ ಹುತಾತ್ಮರ ಹೆಸರು ಹಾಳು ಮಾಡುವ ಯತ್ನ ನಡೆಸಿದ್ದಾರೆಂಬ ಆರೋಪದಡಿ ಜೈಲು ಶಿಕ್ಷೆ ವಿಧಿಸಲಾಗಿದೆ.

ಚೀನಾ ಗಡಿಯಲ್ಲಿ ಭಾರತೀಯ ಯೋಧರ ಸಖತ್ ಡ್ಯಾನ್ಸ್; ವಿಡಿಯೋ ವೈರಲ್!

ನೂತನ ರಕ್ಷಣಾ ಕಾನೂನಿನಡಿ ಶಿಕ್ಷೆ ಅನುಭವಿಸಿದ ಮೊದಲ ವ್ಯಕ್ತಿ

ಮಾರ್ಚ್ನಲ್ಲಿ ಚೀನಾ ನೂತನ ರಕ್ಷಣಾ ಕಾನೂನು ಜಾರಿಗೊಳಿಸಿತ್ತು. ಚೀನಾದ Sina Weibo ಮೈಕ್ರೋ ಬ್ಲಾಗಿಂಗ್‌ ಅಕೌಂಟ್‌ನ ಬ್ಲಾಗರ್ ಚಾವು ಜಿಮಿಂಗ್ ಈ ಕಾನೂನಿನಡಿ ಶಿಕ್ಷೆಗೀಡಾದ ಮೊದಲ ವ್ಯಕ್ತಿಯಾಗಿದ್ದಾರೆ. ಇವರು 25 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್‌ಗಳನ್ನು ಹೊಂದಿದ್ದಾರೆ. ನಾನ್‌ಜಿಂಗ್ ಜಿಯಾನಯೆ ಪೀಪಲ್ಸ್ ಕೋರ್ಟ್ 38 ವರ್ಷದ ಈ ಬ್ಲಾಗರ್‌ಗೆ ಶಿಕ್ಷೆ ವಿಧಿಸಿದೆ. ಅಲ್ಲದೇ ಈ ಅಪರಾಧಕ್ಕಾಗಿ ಆನ್‌ಲೈನ್ ಪ್ಲಾಟ್‌ಫಾರಂ ಹಾಗೂ ನ್ಯಾಷನಲ್ ಮಿಡಿಯಾದಲ್ಲಿ ಹತ್ತು ದಿನದೊಳಗೆ ಕ್ಷಮೆ ಯಾಚಿಸಬೇಕು ಎಂದೂ ಆದೇಶಿಸಿದೆ. ಇನ್ನು ಈ ಬ್ಲಾಗರ್‌ ಕಾನೂನು ವಿಭಾಗದ ಪದವೀಧರ ಕೂಡಾ ಹೌದು.

ಶತ್ರು ರಾಷ್ಟ್ರದ ಬೆದರಿಕೆ ಎದುರಿಸಲು ಭಾರತದ ಮಿಲಿಟರಿ ಶಕ್ತಿ ರೂಪಾಂತರಗೊಳ್ಳಬೇಕು: ರಾವತ್!

ಬ್ಲಾಗರ್‌ ಬರೆದಿದ್ದೇನು?

ಚೀನಾದ ಕಮ್ಯುನಿಸ್ಟ್ ಪಾರ್ಟಿಯ ಪೀಪಲ್ಸ್ ಡೈಲಿ ಪತ್ರಿಕೆ ಕೋರ್ಟ್‌ನ ವಿಚಾರಣೆ ಬಗ್ಗೆ ವರದಿ ಪ್ರಕಟಿಸಿದೆ. ಇದರ ಅನ್ವಯ ಫೆಬ್ರವರಿ 19 ರಂದು ಎರಡು ಪೋಸ್ಟ್ ಮಾಡೆಲಾಗಿತ್ತು. ಇದಕ್ಕಾಗಿ ಬ್ಲಾಗರ್‌ನ್ನು ದೋಷಿ ಎಂದು ಪರಿಗಣಿಸಲಾಗಿದೆ. ಚೀನಾ ಯೋಧರ ಸಾಮರ್ಥ್ಯದ ಬಗ್ಗೆ ಸವಾಲೆತ್ತಿದ್ದ ಚಾವೂ ಗಲ್ವಾನ್ ಕಣಿವೆ ಸಂಘರ್ಷದಲ್ಲಿ ನಾಲಗ್ಕಲ್ಲ, ನಲ್ವತ್ತು ಯೋಧರು ಮೃತಪಟ್ಟಿದ್ದಾರೆಂದಿದ್ದರು. ಅವರನ್ನು ಮಾರ್ಚ್ 1 ರಂದು ಬಂಧಿಸಲಾಗಿತ್ತು.

click me!