* ಕೇಂದ್ರ ಸರ್ಕಾರಕ್ಕೆ ಲಸಿಕಾಕರಣ ಸಮಿತಿ ಶಿಫಾರಸು
* ಕೇವಲ ಕೊರೋನಾ ಕಾರಣಕ್ಕೆ ಒಂದು ಮಗುವೂ ಸಾವನ್ನಪ್ಪಿಲ್ಲ
* ಮಕ್ಕಳು ಹೆಚ್ಚು ಬಾಧಿತರಾಗಿಲ್ಲ, ಲಸಿಕೆ ಬೇಡ
ನವದೆಹಲಿ(ಡಿ.22): ಒಮಿಕ್ರೋನ್(Omicron) ಪರಿಣಾಮ ಮಕ್ಕಳಿಗೂ(Children) ಲಸಿಕೆ ಮತ್ತು ಹಿರಿಯರಿಗೆ ಬೂಸ್ಟರ್ ಡೋಸ್ ನೀಡಬೇಕೆಂಬ ಕೂಗು ಕೇಳಿಬರುತ್ತಿವ ಬೆನ್ನಲ್ಲೇ, ‘ಸದ್ಯಕ್ಕೆ ಮಕ್ಕಳಿಗೆ ಲಸಿಕೆ ನೀಡುವ ಅಗತ್ಯವಿಲ್ಲ’ ಎಂದು ಲಸಿಕೆ ಕುರಿತಾದ ಕೇಂದ್ರ ಸರ್ಕಾರದ ಸಮಿತಿ(Central Government) ಅಭಿಪ್ರಾಯಪಟ್ಟಿದೆ ಹಾಗೂ ತನ್ನ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿದೆ. ಮಂಗಳವಾರ ಪ್ರತಿಕ್ರಿಯಿಸಿದ ಲಸಿಕಾಕರಣ(Vaccination) ಕುರಿತ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (NTAIG) ಸದಸ್ಯ ಡಾ. ಜಯಪ್ರಕಾಶ್ ಮುಳಿಯಿಲ್ ಅವರು, ‘ಕೋವಿಡ್(Covid-19) ಹಾವಳಿ ಇದ್ದರೂ ಮಕ್ಕಳಿಗೆ ತೊಂದರೆ ಆಗಿಲ್ಲ. ಹೀಗಾಗಿ ಮಕ್ಕಳಿಗೆ ಸದ್ಯಕ್ಕೆ ಲಸಿಕೆ ಬೇಡ ಎಂದು ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ’ ಎಂದರು.
‘ಕ್ಯಾನ್ಸರ್(Cancer), ಬ್ಲಡ್ ಕ್ಯಾನ್ಸರ್(Blood Cancer) ಮತ್ತು ಇನ್ನಿತರ ರೋಗಗಳಿಗೆ ತುತ್ತಾಗಿದ್ದ ಕೊರೋನಾ(Coronavirus) ಪೀಡಿತ ಮಕ್ಕಳು ಸಾವನ್ನಪ್ಪಿದ್ದಾರೆ. ಆದರೆ, ಈ ಸಾವುಗಳನ್ನು ಕೋವಿಡ್‌ಗೆ ಸಾವು ಎನ್ನಲಾಗದು. ಕೊರೋನಾ ಕಾರಣಕ್ಕೆ ದೇಶದಲ್ಲಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಒಂದೇ ಒಂದು ಮಗುವೂ ಬಲಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ತುರ್ತಾಗಿ ಮಕ್ಕಳಿಗೆ ಲಸಿಕೆ ನೀಡುವ ಅನಿವಾರ್ಯತೆ ಇಲ್ಲ ಎಂಬ ಅಭಿಪ್ರಾಯವನ್ನು ಸರ್ಕಾರಕ್ಕೆ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.
Vaccination: ದೇಶದ 44 ಕೋಟಿ ಮಕ್ಕಳಿಗೆ ಲಸಿಕೆ ನೀಡುವ ಯೋಜನೆ ಸಿದ್ಧ!
ಮಕ್ಕಳಿಗಾಗಿ ಈಗಾಗಲೇ ಭಾರತದಲ್ಲಿ(India)ಕೋವ್ಯಾಕ್ಸಿನ್(Covaxin) ಹಾಗೂ ಝೈಕೋವ್-ಡಿ ಲಸಿಕೆಗಳಿಗೆ ಅನುಮೋದನೆ ದೊರಕಿದ್ದರೂ ಇನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡಲು ಹಸಿರು ನಿಶಾನೆ ಲಭಿಸಿಲ್ಲ.
2 ವರ್ಷ ಮೇಲಿನ ಮಕ್ಕಳಿಗೂ ಬಂತು ವ್ಯಾಕ್ಸಿನ್: ಕೋವ್ಯಾಕ್ಸಿನ್ ಲಸಿಕೆಗೆ ಗ್ರೀನ್ ಸಿಗ್ನಲ್!
ಕೊರೋನಾ(Coronavirus) ಲಗ್ಗೆ ಇಟ್ಟಾಗಿನಿಂದಲೂ ಹೆತ್ತವರಿಗೆ ಮಕ್ಕಳ ಕಾಳಜಿ ಬಹಳಷ್ಟು ಕಾಡಿತ್ತು. ಅಲ್ಲದೇ ಕೊರೋನಾ ನಿಯಂತ್ರಿಸಲು ಲಸಿಕೆ(Vaccine) ಬಂದಿದ್ದರೂ, ಮಕ್ಕಳಿಗೆ ಲಸಿಕೆ ತಯಾರಾಗದ ವಿಚಾರ ಮತ್ತಷ್ಟು ತಲೆಕೆಡಿಸಿಕೊಳ್ಳುವಂತೆ ಮಾಡಿತ್ತು. ಆದರೀಗ ಈ ಎಲ್ಲಾ ಚಿಂತೆ ಕೊನೆಯಾಗುವ ಸಮಯ ಸನ್ನಿಹಿತವಾಗಿದೆ.
ಹೌದು 2 - 18 ವರ್ಷ ವಯೋಮಾನದ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ನೀಡಲು ಡಿಸಿಜಿಐ(Drugs Standard Control Organisation) ಒಪ್ಪಿಗೆ ನೀಡಿರುವುದಾಗಿ ವರದಿ ತಿಳಿಸಿತ್ತು. ಈ ಮೂಲಕ ಕೋವ್ಯಾಕ್ಸಿನ್ ಮುಖ್ಯವಾಗಿ ಮಕ್ಕಳಿಗೆ ನೀಡಬಹುದಾದ ದೇಶದ ಮೊದಲ ಕೋವಿಡ್ ಲಸಿಕೆಯಾಗಲಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸೆಪ್ಟೆಂಬರ್‌ನಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವಾಕ್ಸಿನ್‌ನ ಹಂತ -2 ಮತ್ತು ಹಂತ -3 ಪ್ರಯೋಗಗಳನ್ನು ಪೂರ್ಣಗೊಳಿಸಿತು ಮತ್ತು ಈ ತಿಂಗಳ ಆರಂಭದಲ್ಲಿ ಈ ದತ್ತಾಂಶವನ್ನು ಡ್ರಗ್ಸ್ ಮತ್ತು ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಗೆ ಸಲ್ಲಿಸಿತ್ತು.
ಈ ದತ್ತಾಂಶಗಳ ಆಧಾರದ ಮೇಲೆ ವಿವರವಾಗಿ ಚರ್ಚೆ ನಡೆದ ಬಳಿಕ 2 ರಿಂದ 18 ವಯೋಮಾನದವರಿಗೆ ಕೊವ್ಯಾಕ್ಸಿನ್ ಲಸಿಕೆಯನ್ನು ನೀಡಲು ಸಮಿತಿಯು ಶಿಫಾರಸು ಮಾಡಿದೆ. ಮಕ್ಕಳಿಗೆ ಕೊವ್ಯಾಕ್ಸಿನ್ ಲಸಿಕೆಯ ಎರಡು ಡೋಸ್ ನೀಡಲಾಗುವುದು. ಮೊದಲ ಡೋಸ್ ಮತ್ತು ಎರಡನೇ ಡೋಸ್ ನಡುವೆ 20 ದಿನಗಳ ಅಂತರವಿರಬೇಕು ಎನ್ನಲಾಗಿದೆ.
ನವೆಂಬರ್- ಡಿಸಂಬರ್ ಅಂತ್ಯಕ್ಕೆ ಮಕ್ಕಳಿಗೆ ಲಸಿಕೆ ಸಾಧ್ಯತೆ: ಡಾ. ಸುಧಾಕರ್
ಡಿಸಿಜಿಐ ಅಧಿಕೃತ ಮಾಹಿತಿಯ ನಿರೀಕ್ಷೆ
ಅತ್ತ ತಜ್ಞರ ಸಮಿತಿಯ ಶಿಫಾರಸ್ಸಿಗೆ ಮನ್ನಣೆ ನೀಡಿರುವ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ 2-18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ಸಂಸ್ಥೆಯ ಕೋವ್ಯಾಕ್ಸಿನ್ ಕೋವಿಡ್ ಲಸಿಕೆ ನೀಡಲು ಅನುಮೋದನೆ ನೀಡಿದೆ ಎನ್ನಲಾಗಿದೆಯಾದರೂ ಈ ಕುರಿತು ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಈ ಕುರಿತಂತೆ ವಿಷಯ ತಜ್ಞರ ಸಮಿತಿಯ ಸಭೆಯಲ್ಲಿ ಇಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದು, ಮಕ್ಕಳಿಗೂ ಕೊರೋನಾ ಲಸಿಕೆ ನೀಡಲು ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ. ಇನ್ನು ಅತ್ತ ಇತರ ಕಂಪನಿಗಳು ಕೂಡಾ ಮಕ್ಕಳಿಗೆ ನೀಡುವ ಲಸಿಕೆ ಕುರಿತು ವೈದ್ಯಕೀಯ ಸಂಶೋಧನೆಯ(Medical Research) ಪ್ರಯೋಗದಲ್ಲಿ ತೊಡಗಿವೆ ಎಂದು ವರದಿ ತಿಳಿಸಿದೆ.