
ಮೊನ್ನೆಯಷ್ಟೇ ತೆಲಂಗಾಣದಲ್ಲಿ ಗಣರಾಜ್ಯೋತ್ಸವದ ಸಿದ್ಧತೆಗಾಗಿ ಶಾಲೆಗೆ ಕುರ್ಚಿಗಳನ್ನು ಸಾಗಿಸುತ್ತಿದ್ದ ಆಟೋದಿಂದ ಬಿದ್ದು 8ನೇ ತರಗತಿ ಬಾಲಕಿ ಸಾವನ್ನಪ್ಪಿದ ಘಟನೆ ಗಣರಾಜ್ಯೋತ್ಸವಕ್ಕೂ ಮುನ್ನ ದಿನ ನಡೆದಿತ್ತು. ಈ ಘಟನೆ ಮಾಸುವ ಮೊದಲೇ ಈಗ ಗಣರಾಜ್ಯೋತ್ಸವದ ಕಾರ್ಯಕ್ರಮಕ್ಕಾಗಿ ಬೀದಿಯಲ್ಲಿ ಅಳವಡಿಸಿದ ಧ್ವನಿವರ್ಧಕದ ಪೆಟ್ಟಿಗೆ(loudspeaker) ಪೆಟ್ಟಿಗೆ ಬಿದ್ದು 3 ವರ್ಷದ ಮಗುವೊಂದು ಸಾವನ್ನಪ್ಪಿದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಮುಂಬೈನ ವಿಕ್ರೋಲಿ ಎಂಬ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಭಯಾನಕ ಘಟನೆಯ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೀದಿಯಲ್ಲಿ ಕಂಬಳಿ ಮಾರಿಕೊಂಡು ಹೋಗುತ್ತಿದ್ದವನ ಎಡವಟ್ಟಿನಿಂದಾಗಿ 3 ವರ್ಷದ ಮಗು ಪ್ರಾಣ ಕಳೆದುಕೊಂಡಿದೆ.
ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಬೀದಿಯಲ್ಲಿ ಬೀದಿ ವ್ಯಾಪಾರಿಯೊಬ್ಬ ತಲೆಮೇಲೆ ಕಂಬಳಿ(rugs)ಯ ದೊಡ್ಡ ಗಂಟನ್ನು ಇಟ್ಟುಕೊಂಡು ಮಾರುತ್ತಾ ಹೋಗುತ್ತಿದ್ದಾನೆ. ಆತ ಸಾಗುತ್ತಿದ್ದ ಆ ಸಣ್ಣ ಬೀದಿಯಲ್ಲಿ ಆ ಬದಿಗೆ ಒಂದು ಈ ಬದಿಗೆ ಒಂದು ಧ್ವನಿವರ್ಧಕದ ಪೆಟ್ಟಿಗೆಯನ್ನು ಮೂರು ಕಾಲಿನ ಸ್ಟ್ಯಾಂಡ್ ಮೇಲೆ ಇಡಲಾಗಿತ್ತು. ಈ ದಾರಿಯಲ್ಲಿ ಸಾಗುತ್ತಿದ್ದ ಬೀದಿ ವ್ಯಾಪಾರಿಯ ತಲೆಯ ಮೇಲಿದ್ದ ಆ ಕಂಬಳಿಗಳ ಮೂಟೆ ಈ ಲೌಡ್‌ಸ್ಪೀಕರ್ ಬಾಕ್ಸ್‌ಗೆ ತಾಗಿದ್ದು, ಕೂಡಲೇ ಬ್ಯಾಲೆನ್ಸ್ ತಪ್ಪಿ ಅದು ಮಗುಚಿದೆ. ಅದೇ ಸಮಯಕ್ಕೆ ಆ ಬೀದಿ ವ್ಯಾಪಾರಿಯ ಹಿಂದೆ ಬರುತ್ತಿದ್ದ 3 ವರ್ಷದ ಕಂದ ಆ ಲೌಡ್ ಸ್ಪೀಕರ್ ಇದ್ದ ಪೆಟ್ಟಿಗೆಯ ಕೆಳಗೆ ಸಿಲುಕಿ ಅಪ್ಪಚ್ಚಿಯಾಗಿದ್ದಾಳೆ.
ಇದನ್ನೂ ಓದಿ: ಮುದ್ದಿನ ಗಂಡನಿಗಾಗಿ ಇಬ್ಬರು ಹೆಂಡಿರ ಗಲಾಟೆ: ಗಂಡನನ್ನು ಪಾಲು ಮಾಡಿ ಭಾನುವಾರ ವೀಕಾಫ್ ಕೊಟ್ಟ ಗ್ರಾಮದ ಮುಖಂಡರು
ಲೌಡ್ ಸ್ಪೀಕರ್‌ನ ಕೇಬಲ್ ವೈರ್‌ಗೆ ಕಂಬಳಿ ಮೂಟೆ ತಾಗಿ ಎಳೆದು ಹೋದಂತಾಗಿ ಈ ಸ್ಪೀಕರ್ ಇಟ್ಟಿದ್ದ ಸ್ಟ್ಯಾಂಡ್ ಕೆಳಗೆ ಬಿದ್ದು ಈ ಅನಾಹುತ ಸಂಭವಿಸಿದೆ. ಆದರೆ ಇದರ ಅರಿವಿಲ್ಲದ ಆ ಕಂಬಳಿ ವ್ಯಾಪಾರಿ ಸೀದಾ ಮುಂದೆ ಹೋಗಿದ್ದಾನೆ. ಅಲ್ಲೇ ಇದ್ದ ಹುಡುಗನೋರ್ವ ಗಂಭೀರ ಗಾಯಗೊಂಡ ಬಾಲಕಿಯನ್ನು ಎತ್ತಿ ರಕ್ಷಿಸಿ ಮಗುವನ್ನು ಎತ್ತಿಕೊಂಡು ಭಯದಿಂದ ಓಡಿದ್ದಾನೆ. ಬಹುಶಃ ಮಗುವಿನ ಪೋಷಕರ ಬಳಿಗೆ ಆತ ಮಗುವನ್ನು ತಲುಪಿಸಿದ್ದಾನೆ. ಗಂಭೀರ ಗಾಯಗೊಂಡ ಮಗುವನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರಾದರು ಮಗು ಬದುಕುಳಿಯಲಿಲ್ಲ. ಮಗು ಬರುತ್ತಲೇ ಸಾವನ್ನಪ್ಪಿದೆ ಎಂದು ಅಲ್ಲಿನ ವೈದ್ಯರು ಘೋಷಿಸಿದರು. ಘಟನೆಗೆ ಸಂಬಂಧಿಸಿದಂತೆ ವಿಖ್ರೋಲಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದ, ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ದಿನದಿಂದ ದಿನಕ್ಕೆ ಏರುತ್ತಲೇ ಇದೆ ಚಿನ್ನದ ದರ: ಏಮ್ಸ್ ಆಸ್ಪತ್ರೆಯ ಲಿಫ್ಟ್‌ನಲ್ಲೇ ಮಹಿಳೆಯ ಚಿನ್ನದ ಕರಿಮಣಿ ಕಸಿದ ಕಳ್ಳ: ವೀಡಿಯೋ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ