
ಭೋಪಾಲ್: ಮಹಿಳೆಯೊಬ್ಬರನ್ನು ಆಸ್ಪತ್ರೆಯ ಲಿಫ್ಟ್‌ನಲ್ಲೇ ಕಳ್ಳನೋರ್ವ ದರೋಡೆ ಮಾಡಿದ ಘಟನೆ ಭೋಪಾಲ್‌ನ ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ಈ ಭಯಾನಕ ಘಟನೆಯೂ ಆಸ್ಪತ್ರೆಯ ಲಿಫ್ಟ್‌ನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಹುಟ್ಟಿಸುತ್ತಿದೆ. ಈ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಭಯಭೀತಗೊಳಿಸಿದೆ. ವಿಡಿಯೋದಲ್ಲಿ ಕಳ್ಳ ಹಾಗೂ ಆಸ್ಪತ್ರೆಯ ಮಹಿಳಾ ಸಿಬ್ಬಂದಿ ಜೊತೆಯಾಗಿಯೇ ಲಿಫ್ಟ್‌ನಲ್ಲಿ ಬಂದಿದ್ದಾರೆ. ಕೆಲ ನಿಮಿಷದಲ್ಲಿ ಲಿಫ್ಟ್ ತೆರೆದುಕೊಂಡಿದ್ದು, ಮಹಿಳೆ ಹೋಗುವುದಕ್ಕೆ ಯತ್ನಿಸಿದ್ದ ವೇಳೆ ಲಿಫ್ಟ್‌ನಲ್ಲಿದ್ದ ಕಳ್ಳ ಆಕೆಯನ್ನು ಅಡ್ಡಹಾಕಿ, ಲಿಫ್ಟ್‌ನಲ್ಲೇ ಆಕೆಯ ಮಂಗಳಸೂತ್ರವನ್ನು ಕಸಿದುಕೊಂಡು ಅಲ್ಲಿಂದ ಓಡಿ ಹೋಗಿದ್ದಾನೆ. ಮಹಿಳೆ ಆ ಕಳ್ಳನನ್ನು ಹಿಂಬಾಲಿಸಿಕೊಂಡು ಹಿಂದೆ ಓಡಿದ್ದು, ಅಷ್ಟರಲ್ಲಿ ಆ ಕಳ್ಳ ಪಕ್ಕದಲ್ಲಿದ್ದ ಮೆಟ್ಟಿಲುಗಳ ಮೂಲಕ ಇಳಿದು ಹೊರಟು ಹೋಗಿದ್ದಾನೆ.
ಈ ಘಟನೆಯ ದೃಶ್ಯಾವಳಿ ಈಗ ನಗರದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಹೀಗೆ ಲಿಫ್ಟ್‌ನಲ್ಲಿ ದರೋಡೆಗೊಳಗಾಗಿ ಚಿನ್ನದ ಸರ ಕಳೆದುಕೊಂಡ ಮಹಿಳೆಯನ್ನು ವರ್ಷಾ ಸೋನಿ ಎಂದು ಗುರುತಿಸಲಾಗಿದೆ. ಇವರು ಭೋಪಾಲ್‌ನ ಏಮ್ಸ್ ಆಸ್ಪತ್ರೆಯ ಸ್ತ್ರೀರೋಗ ವಿಭಾಗದಲ್ಲಿ(gynaecology department) ಕೆಲಸ ಮಾಡುತ್ತಿದ್ದರು. ಲಿಫ್ಟ್‌ನಲ್ಲಿ ಬರುವಾಗ ಆ ದರೋಡೆಕೋರನ ಜೊತೆ ಇವರು ಒಬ್ಬರೇ ಇದ್ದರು. ಆಸ್ಪತ್ರೆಯ ಹಿಂಭಾಗದ ಬ್ಲಡ್ ಬ್ಯಾಂಕ್‌ನ ಬಳಿ ಇದ್ದ ಲಿಫ್ಟ್‌ನಲ್ಲಿ ಈ ಘಟನೆ ನಡೆದಿದೆ. ಮಾಸ್ಕ್ ಧರಿಸಿ ಲಿಫ್ಟ್‌ಗೆ ಎಂಟ್ರಿ ಕೊಟ್ಟ ಆ ದರೋಡೆಕೋರ ಸಹಜವಾಗಿ ಮಾತುಕತೆ ಆರಂಭಿಸಿ ಇಲ್ಲಿ ನೇತ್ರ ತಪಾಸಣೆ ವಿಭಾಗ ಯಾವ ಮಹಡಿಯಲ್ಲಿದೆ ಎಂದು ಕೇಳಿದ್ದಾನೆ.
ಆದರೆ ಲಿಫ್ಟ್ 3ನೇ ಮಹಡಿಗೆ ತಲುಪುತ್ತಿದ್ದಂತೆ ಆತ ಒಮ್ಮೆ ಲಿಫ್ಟ್‌ನಿಂದ ಹೊರಹೋಗುವಂತೆ ಮಾಡಿ ತಿರುಗಿದ್ದು, ಮಹಿಳೆಯ ಕತ್ತಿನಲ್ಲಿದ್ದ ಕರಿಮಣಿ ಸರಕ್ಕೆ ಕೈ ಹಾಕಿದ್ದಾನೆ. ಚಿನ್ನದ ಮಣಿಗಳಿದ್ದ ಕರಿಮಣಿ ಸರವನ್ನು ಆತ ಕಿತ್ತುಕೊಂಡು ಎಸ್ಕೇಪ್ ಆಗಿದ್ದಾನೆ. ಈ ವೇಳೆ ವರ್ಷಾ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಅವರನ್ನು ಹಿಂದಕ್ಕೆ ತಳ್ಳಿದ ಆತ ಲಿಫ್ಟ್‌ನಿಂದ ಹೊರಬಂದು ಮೆಟ್ಟಿಲುಗಳ ಮೂಲಕ ಕೆಳಗೆ ಓಡಿದ್ದಾನೆ. ಮಂಗಳಸೂತ್ರದೊಂದಿಗೆ ಆತ ಎಸ್ಕೇಪ್ ಆಗಿದ್ದು, ಅದರ ಜೊತೆಗೆ ಇದ್ದ ಮುತ್ತಿನ ಸರ ಆತನ ಕೈನಿಂದ ಜಾರಿ ಕೆಳಗೆ ಬಿದ್ದಿದೆ.
ಇದನ್ನೂ ಓದಿ:
ಶಿವ ಪಾರ್ವತಿಯ ಮದುವೆಯಾದ ತ್ರಿಯುಗಿನಾರಾಯಣ ದೇಗುಲದಲ್ಲಿ ಹಿಮಪಾತದ ನಡುವೆಯೂ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ
ಈ ಘಟನೆ ನಡೆಯುವ ವೇಳೆ ಲಿಫ್ಟ್‌ನಲ್ಲಿ ಒಬ್ಬರೇ ಒಬ್ಬರು ಭದ್ರತಾ ಸಿಬ್ಬಂದಿ ಇರಲಿಲ್ಲ. ಇದಾದ ನಂತರ ಮಹಿಳೆ ಅಳುತ್ತಲೇ ಲಿಫ್ಟ್ ಪಕ್ಕ ನಡುಗುತ್ತಾ ಕುಳಿತಿದ್ದು, ದೈನಂದಿನ ಓಡಾಟದಲ್ಲಿದ್ದ ಸಿಬ್ಬಂದಿಯೊಬ್ಬರು ಅವರನ್ನು ಗಮನಿಸಿ ಹಿರಿಯ ಅಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ. ಈ ಸಂಬಂಧ ಬಾಗ್ಸೇವಾನಿಯಾ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಾಗಿದೆ, ಆದರೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಈ ಘಟನೆ ಭಾನುವಾರ ನಡೆದಿದೆ.
ಇದನ್ನೂ ಓದಿ: ಶಿವ ದೇವಾಲಯದ ಕಳಶದ ಮೇಲೆ ಅರ್ಧಚಂದ್ರ: ಕಾಶಿ ವಿಶ್ವನಾಥ ದೇಗುಲದಲ್ಲಿ ಸೆರೆಯಾದ ಅಪರೂಪದ ದೃಶ್ಯ
ಪ್ರಾಥಮಿಕ ತನಿಖೆಯ ಪ್ರಕಾರ, ಭಾನುವಾರವಾದ ಕಾರಣ ಕಡಿಮೆ ಜನಸಂದಣಿಯನ್ನು ಗುರುತಿಸಿಕೊಂಡು ಆರೋಪಿ ಐಪಿಡಿ ಗೇಟ್ ಮೂಲಕ ಪರಾರಿಯಾಗಿದ್ದಾರೆ. ದಾಳಿಕೋರ ತನ್ನ ಮುಖವನ್ನು ಮರೆಮಾಡಿರುವುದರಿಂದ ಆತನನ್ನು ಗುರುತಿಸುವುದು ಕಷ್ಟ ಎಂದು ಭದ್ರತಾ ಸಿಬ್ಬಂದಿ ಹೇಳಿದ್ದಾರೆ. ಏಮ್ಸ್ ಕ್ಯಾಂಪಸ್‌ನಲ್ಲಿ ಈ ಹಿಂದೆಯೂ ಸಣ್ಣಪುಟ್ಟ ಕಳ್ಳತನಗಳು ವರದಿಯಾಗಿವೆ. ಆದರೆ ಲಿಫ್ಟ್‌ನೊಳಗೆ ಮಹಿಳೆಯನ್ನು ಗುರಿಯಾಗಿಸಿಕೊಂಡು ನಡೆದ ಚಿನ್ನದ ಸರ ಕಳ್ಳತನದ ಮೊದಲ ಪ್ರಕರಣ ಇದಾಗಿದೆ.
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಇಂತಹ ಕಳ್ಳತನ ದರೋಡೆ ಪ್ರಕರಣಗಳು ಹೆಚ್ಚುವುದಕ್ಕೆ ಕಾರಣವಾಗಿದೆ. ಪ್ರಕರಣದಿಂದಾಗಿ ಇನ್ನು ಜನರು ಚಿನ್ನದ ಸರ ಹಾಕಿಕೊಂಡು ರಸ್ತೆಯಲ್ಲಿ ನಡೆದಾಡದಂತಹ ಸ್ಥಿತಿ ನಿರ್ಮಾಣವಾದರು. ಅಚ್ಚರಿ ಇಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ