ಕಸದ ತೊಟ್ಟಿಯಲ್ಲಿ ಸಿಕ್ಕ ಐದು ಲಕ್ಷ ಮೌಲ್ಯದ ವಜ್ರದ ನೆಕ್ಲೇಸನ್ನು ಮಾಲೀಕನಿಗೆ ಹಿಂತಿರುಗಿಸುವ ಮೂಲಕ ಚೆನ್ನೈ ನಗರಪಾಲಿಕೆಯ ಪೌರ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ.
ಚೆನ್ನೈ: ಕಸದ ತೊಟ್ಟಿಯಲ್ಲಿ ಸಿಕ್ಕ ಐದು ಲಕ್ಷ ಮೌಲ್ಯದ ವಜ್ರದ ನೆಕ್ಲೇಸನ್ನು ಮಾಲೀಕನಿಗೆ ಹಿಂತಿರುಗಿಸುವ ಮೂಲಕ ಚೆನ್ನೈ ನಗರಪಾಲಿಕೆಯ ಪೌರ ಕಾರ್ಮಿಕರು ಪ್ರಾಮಾಣಿಕತೆ ಮೆರೆದಿದ್ದಾರೆ. ಚೆನ್ನೈನ ನಿವಾಸಿಯಾದ ದೇವರಾಜ್ ಎಂಬುವವರ ತಾಯಿ ತಮ್ಮ ಮೊಮ್ಮಗಳ ಮದುವೆಗಾಗಿ ಈ ಡೈಮಂಡ್ ನೆಕ್ಲೇಸನ್ನು ಮಾಡಿಸಿದ್ದರು. ಆದರೆ ಈ ನೆಕ್ಲೇಸ್ ಆಕಸ್ಮಿಕವಾಗಿ ಕಸದ ಬುಟ್ಟಿ ಸೇರಿದೆ. ಕೆಲವೊಮ್ಮೆ ಚಿನ್ನಾಭರಣಗಳು ಕಳೆದು ಹೋಗಿ ಎಷ್ಟೋ ಸಮಯದ ನಂತರ ಅದು ಕಳೆದು ಹೋಗಿರುವುದು ಮನೆಯವರ ಗಮನಕ್ಕೆ ಬರುತ್ತದೆ. ಆದರೆ ಇಲ್ಲಿ ಅದೃಷ್ಟವಶಾತ್ ಮನೆಯವರಿಗೆ ವಜ್ರದ ನೆಕ್ಲೇಸ್ ಕಾಣೆಯಾದ ಸಮಯದಲ್ಲೇ ಅದು ಕಳೆದು ಹೋಗಿರುವುದು ಗಮನಕ್ಕೆ ಬಂದಿದ್ದು ಎಲ್ಲೆಡೆ ಹುಡುಕಲು ಶುರು ಮಾಡಿದ್ದಾರೆ.
ಅಲ್ಲದೇ ಪೌರ ಕಾರ್ಮಿಕರಿಗೂ ಈ ಬಗ್ಗೆ ಮಾಹಿತಿ ನೀಡಿ ಹುಡುಕಲು ಹೇಳಿದ್ದಾರೆ. ಇದಾದ ನಂತರ ಚೆನ್ನೈ ನಗರದ ಕಸ ಸಾಗಣೆ ಗುತ್ತಿಗೆ ಪಡೆದಿರುವ ಸಂಸ್ಥೆ ಹಾಗೂ ಅದರ ಕಾರ್ಮಿಕರಾದ ಜೆ ಅಂಥೋನಿಸ್ವಾಮಿ, ಚಾಲಕ ಅರ್ಬೇಸರ್ ಸುಮೀತ್ ಸೇರಿದಂತೆ ಎಲ್ಲರೂ ದೇವರಾಜ್ ಮನೆ ಸಮೀಪದ ಕಸದ ತೊಟ್ಟಿಯಲ್ಲಿ ವಜ್ರದ ನೆಕ್ಲೇಸ್‌ಗಾಗಿ ತೀವ್ರವಾಗಿ ಹುಡುಕಾಟ ನಡೆಸಿದಾಗ ಕಡೆಗೂ ನೆಕ್ಲೇಸ್ ಸಿಕ್ಕಿದೆ. ಕಸದ ತೊಟ್ಟಿಯಲ್ಲಿ ಹೂವಿನ ಹಾರದ ಜೊತೆಗೆ ಈ ನೆಕ್ಲೇಸ್ ಸಿಕ್ಕಿ ಹಾಕಿಕೊಂಡಿತ್ತು. ಇದಾದ ನಂತರ ದೇವರಾಜ್ ಅವರು ತನ್ನ ನೆಕ್ಲೇಸ್ ಹುಡುಕಿ ಕೊಡುವಲ್ಲಿ ಸಹಾಯ ಮಾಡಿದ ಪೌರ ಕಾರ್ಮಿಕರು ಹಾಗೂ ಕಸ ಸಾಗಣೆ ಸಂಸ್ಥೆಯ ಸಿಬ್ಬಂದಿಗೆ ಕೃತಜ್ಞತೆ ತಿಳಿಸಿದ್ದಾರೆ.
undefined
ರಸ್ತೆ ಬದಿ ಬಿದ್ದು ಸಿಕ್ಕ 25 ಲಕ್ಷ ರೂ. ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ
ರಿಕ್ಷಾದಲ್ಲಿ ಬಿಟ್ಟೋಗಿದ್ದ 1.6 ಲಕ್ಷದ ನೆಕ್ಲೇಸ್ ಹಿಂದಿರುಗಿಸಿದ ಆಟೋ ಚಾಲಕ