ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನಾಳೆ ನಮ್ಮ ಸರ್ಕಾರ ಬಲಿಷ್ಠವಾದ ಬಜೆಟ್ ಮಂಡಿಸಲಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡೋದು ನಮ್ಮ ಗುರಿಯಾಗಿದೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ 3.O ಸರ್ಕಾರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಗಳವಾರ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Niramla Sitharaman) ಏಳನೇ ಬಾರಿ ಬಜೆಟ್ ಮಂಡನೆ ಮಾಡಲಿದ್ದಾರೆ. ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಬಜೆಟ್ ಹೇಗಿರಲಿದೆ ಎಂಬುದರ ಸುಳಿವನ್ನು ನೀಡಿದ್ದಾರೆ. ನಾವು ನಾಳೆ ಸುಭದ್ರವಾದ ಬಜೆಟ್ ಮಂಡಲಿಸಿದ್ದೇವೆ. 2047ರ ವಿಕಸಿತ ಭಾರತಕ್ಕಾಗಿ ನಾಳೆಯ ಬಜೆಟ್ ಮಂಡನೆಯಾಗಲಿದೆ. ಮುಂದಿನ ಐದು ವರ್ಷಗಳು ನಮ್ಮ ಸರ್ಕಾರಕ್ಕೆ ವಿಶೇಷ ದಿನಗಳಾಗಿರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ನಾವು ದೇಶವಾಸಿಗಳಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಇದು ಅಮೃತಕಾಲದ ಮಹತ್ವದ ಬಜೆಟ್ ಆಗಿದ್ದು, ಐದು ವರ್ಷಗಳ ಕಾಲ ನಮ್ಮ ಕೆಲಸದ ದಿಕ್ಕನ್ನು ನಿರ್ಧರಿಸಲಿದೆ. 2047ಕ್ಕೆ ಭಾರತ ಸ್ವತಂತ್ರ ಪಡೆದು 100 ವರ್ಷ ಪೂರೈಸಲಿದೆ. 2047ರ ವೇಳೆಗೆ ವಿಕಸಿತ ಭಾರತದ ಕನಸು ನನಸು ಮಾಡುವ ಗುರಿಗಳನ್ನು ಬಜೆಟ್ ಹೊಂದಿರಲಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನಾಳೆ ನಮ್ಮ ಸರ್ಕಾರ ಬಲಿಷ್ಠವಾದ ಬಜೆಟ್ ಮಂಡಿಸಲಿದೆ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡೋದು ನಮ್ಮ ಗುರಿಯಾಗಿದೆ ಎಂದು ಪ್ರಧಾನಿಗಳು ಹೇಳಿದರು.
undefined
ಹೂಡಿಕೆ ಪ್ರಮಾಣ ಹೆಚ್ಚಳ
ಭಾರತದ ಆರ್ಥಿಕತೆಯ ಕುರಿತು ಮಾತನಾಡಿದ ಪ್ರಧಾನಿಗಳು, ವಿಶ್ವದಲ್ಲಿಯೇ ನಮ್ಮ ದೇಶ ವೇಗವಾಗಿ ಬೆಳವಣಿಗೆಯಾಗುತ್ತಿದೆ. ನಾವು ಸತತ ಮೂರನೇ ಬಾರಿಗೆ ಶೇ.8ರ ಬೆಳವಣಿಗೆಯೊಂದಿಗೆ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯುತ್ತಿದ್ದೇವೆ. ಸಕಾರಾತ್ಮಕ ದೃಷ್ಟಿಕೋನ ಮತ್ತು ನಿರಂತರವಾಗಿ ಹೆಚ್ಚುತ್ತಿರುವ ಹೂಡಿಕೆ ಇದಕ್ಕೆ ಪುರಾವೆಯಾಗಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಒಳಗೊಳಗೇ ಏನಾಗುತ್ತಿದೆ?: ಮೋದಿ, ಅಮಿತ್ ಶಾ, ಯೋಗಿ, ಯುಪಿ ಆಟ
ಮೋದಿ ಸರ್ಕಾರದ ಕಿಂಗ್‌ಮೇಕರ್ ಗಳಿಗೆ ಸಿಗುತ್ತಾ ಬಿಗ್ ಗಿಫ್ಟ್?
ಈ ವರ್ಷ ಲೋಕಸಭಾ ಚುನಾವಣೆ ಹಿನ್ನೆಲೆ ಫೆಬ್ರವರಿ 1ರಂದು ನರೇಂದ್ರ ಮೋದಿ ನೇತೃತ್ವದ 2.O ಸರ್ಕಾರ ಮಧ್ಯಂತರ ಬಜೆಟ್ ಮಂಡನೆ ಮಾಡಿತ್ತು. ಅಂದಿನ ಹಣಕಾಸು ಸಚಿವೆಯಾಗಿದ್ದ, ಸೀತಾರಾಮನ್ ಅವರೇ ಬಜೆಟ್ ಮಂಡಿಸಿದ್ದರು. ಈ ಬಾರಿ ಸ್ಪಷ್ಟ ಬಹುಮತ ಪಡೆಯದ ಕಾರಣ ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಬಿಹಾರ ಸಿಎಂ ನಿತೀಶ್ ಕುಮಾರ್, ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮೋದಿ ಸರ್ಕಾರದ ಕಿಂಗ್‌ಮೇಕರ್ ಆಗಿದ್ದು, ತಮ್ಮ ರಾಜ್ಯಕ್ಕೆ ಹೆಚ್ಚಿನ ಅನುದಾನದ ಬೇಡಿಕೆಯನ್ನು ಪ್ರಧಾನಿಗಳ ಮುಂದೆ ಇರಿಸಲಾಗಿದ್ದಾರೆ ಎನ್ನಲಾಗಿದೆ. ಮೋದಿ 3.O ಸರ್ಕಾರದ ಮೊದಲ ಬಜೆಟ್‌ನಲ್ಲಿ ಆಂಧ್ರ ಪ್ರದೇಶ ಮತ್ತು ಬಿಹಾರಕ್ಕೆ ಹೆಚ್ಚಿನ ಅನುದಾನ ಹಂಚಿಕೆಯಾಗುವ ಸಾಧ್ಯತೆಗಳಿವೆ.
ಮತ್ತೊಂದೆಡೆ ಮೋದಿ ಸಂಪುಟದಲ್ಲಿ ಕರ್ನಾಟಕದ ಹೆಚ್‌ಡಿ ಕುಮಾರಸ್ವಾಮಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಸಂಸದರು ಸ್ಥಾನ ಪಡೆದುಕೊಂಡಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಹ ಕರ್ನಾಟಕದಿಂದಲೇ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾರಣ ಕರ್ನಾಟಕಕ್ಕೂ ಒಳ್ಳೆಯ ಅನುದಾನ ಮತ್ತು ಯೋಜನೆಗಳು ಲಭ್ಯವಾಗಬಹುದು ಎಂಬ ನಿರೀಕ್ಷೆಗಳಿವೆ.
ಉಪ ಸ್ಪೀಕರ್ ಸ್ಥಾನಕ್ಕಾಗಿ ಕಾಂಗ್ರೆಸ್ ಪಟ್ಟು; ಸರ್ವಪಕ್ಷ ಸಭೆಯಲ್ಲಿ ಏನೇನಾಯ್ತು? ಪ್ರತಿಪಕ್ಷಗಳ ಡಿಮ್ಯಾಂಡ್ ಏನು?
Sharing my thoughts at the start of the Budget Session of Parliament.https://t.co/doTLz9NDeD
— Narendra Modi (@narendramodi)