ಲ್ಯಾಪ್‌ಟಾಪ್ ಚಾರ್ಜರ್‌ನ್ನು ಎಕ್ಸ್‌ಟೆನ್ಶನ್ ಬಾಕ್ಸ್‌ಗೆ ಜೋಡಿಸಲು ಪ್ರಯತ್ನಿಸುತ್ತಿದ್ದಾಗ 32 ವರ್ಷದ ವೈದ್ಯೆಯೊಬ್ಬರು ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈ: ಲ್ಯಾಪ್‌ಟಾಪ್ ಚಾರ್ಜರ್‌ನ್ನು ಎಕ್ಸ್‌ಟೆನ್ಶನ್ ಬಾಕ್ಸ್‌ಗೆ ಜೋಡಿಸಲು ಪ್ರಯತ್ನಿಸುತ್ತಿದ್ದಾಗ 32 ವರ್ಷದ ವೈದ್ಯೆಯೊಬ್ಬರು ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ಚೆನ್ನೈನಲ್ಲಿ ನಡೆದಿದೆ. ಕೇಬಲ್ ಕೈಯಲ್ಲಿ ಹಿಡಿದ ಸ್ಥಿತಿಯಲ್ಲಿ ಮಹಿಳೆ ತನ್ನ ಕೋಣೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಳು. ಚೆನ್ನೈನ ಅಯನವರಂನಲ್ಲಿರುವ ಖಾಸಗಿ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ನಾಮಕ್ಕಲ್ ಜಿಲ್ಲೆಯ ಯು ಸರನಿತಾ ಎಂದು ಪೊಲೀಸರು ಗುರುತಿಸಿದ್ದಾರೆ. ಆಕೆ ಎಂಬಿಬಿಎಸ್ ಮುಗಿಸಿ ಕೊಯಮತ್ತೂರಿನಲ್ಲಿ ಸೈಕಿಯಾಟ್ರಿಕ್ ಮೆಡಿಸಿನ್ ನಲ್ಲಿ ಎಂಡಿ ಮಾಡುತ್ತಿದ್ದಳು. ಕೊಯಮತ್ತೂರಿನಲ್ಲಿ ವೈದ್ಯರಾಗಿದ್ದ ಉದಯಕುಮಾರ್‌ರನ್ನು ಮದುವೆಯಾಗಿದ್ದರು. ದಂಪತಿಗೆ ಐದು ವರ್ಷದ ಮಗುವೂ ಇದೆ.
undefined
ಕೇರಳದಲ್ಲಿ ಕುಝಿಮಂತಿ ಬಿರಿಯಾನಿ ತಿಂದು ಮಹಿಳೆ ಸಾವು, 178 ಮಂದಿ ಆಸ್ಪತ್ರೆಗೆ ದಾಖಲು
ಅಯನಾವರಂನಲ್ಲಿರುವ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ (ಐಎಂಎಚ್) ಮತ್ತು ಎಗ್ಮೋರ್‌ನಲ್ಲಿರುವ ಮಕ್ಕಳ ಆರೋಗ್ಯ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಂದು ತಿಂಗಳ ತರಬೇತಿ ಕಾರ್ಯಕ್ರಮಕ್ಕಾಗಿ ಮೇ 1ರಂದು ಸಾರನಿತಾ ನಗರಕ್ಕೆ ಬಂದಿದ್ದರು.
ಘಟನೆ ನಡೆದ ದಿನ ಸರನಿತಾ ಬೆಳಗ್ಗೆ 10 ಗಂಟೆಗೆ ಉಪಹಾರ ಸೇವಿಸಿ ತನ್ನ ಕೋಣೆಗೆ ತೆರಳಿದ್ದರು. ಸ್ವಲ್ಪ ಸಮಯದ ನಂತರ, ಪತಿ ಅವರಿಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಬರಲ್ಲಿಲ್ಲ. ಭಾನುವಾರವಾದ್ದರಿಂದ ಆಕೆ ಹೆಚ್ಚು ನಿದ್ದೆ ಮಾಡುತ್ತಿದ್ದಾಳೆ ಎಂದು ಉದಯಕುಮಾರ್ ಮೊದಲು ಭಾವಿಸಿದ್ದರು, ಆದರೆ ಆಕೆ ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಆನ್‌ಲೈನ್‌ನಲ್ಲಿ ಇಲ್ಲದಿದ್ದಾಗ ಮತ್ತು ದೀರ್ಘಕಾಲ ಪ್ರತಿಕ್ರಿಯಿಸದಿದ್ದಾಗ ಚಿಂತೆಗೀಡಾದರು.
ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಶವವನ್ನು ರಸ್ತೆಗೆ ಎಸೆದ ಪ್ರಿಯಕರ
ಆ ನಂತರ ಉದಯಕುಮಾರ್ ಹಾಸ್ಟೆಲ್ ಮ್ಯಾನೇಜರ್‌ನ್ನು ಸಂಪರ್ಕಿಸಿ ಆಕೆಯನ್ನು ಪರೀಕ್ಷಿಸುವಂತೆ ಕೇಳಿಕೊಂಡರು. ಸಿಬ್ಬಂದಿ ಆಕೆಯ ಕೊಠಡಿಯನ್ನು ತಲುಪಿದಾಗ, ಬಾಗಿಲು ತೆರೆದುಕೊಂಡಿದ್ದು, ಸರನಿತಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿದ್ದಾರೆ. ಸಿಬ್ಬಂದಿ ತಕ್ಷಣ ವೈದ್ಯರನ್ನು ಕರೆಸಿದ್ದು, ಅವರು ಮಹಿಳೆ ಮೃತಪಟ್ಟಿರೋದನ್ನು ದೃಢಪಡಿಸಿದ್ದಾರೆ.
ಅಯನವರಂ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಇನ್ಸ್‌ಪೆಕ್ಟರ್ ಕೆ ಪರನಿನಾಥನ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಕೆಎಂಸಿಎಚ್) ಕಳುಹಿಸಿದ್ದಾರೆ.
ಸರನಿತಾ ಹಿಡಿದಿದ್ದ ಲ್ಯಾಪ್‌ಟಾಪ್ ವೈರ್ ಅನ್ನು ಏರ್ ಕೂಲರ್, ಸೆಲ್ ಫೋನ್ ಮತ್ತು ಲ್ಯಾಪ್‌ಟಾಪ್‌ಗೆ ಮುಖ್ಯ ಸ್ವಿಚ್‌ಬೋರ್ಡ್‌ಗೆ ಲಿಂಕ್ ಮಾಡಿದ ಎಕ್ಸ್‌ಟೆನ್ಶನ್ ಬಾಕ್ಸ್ ಮೂಲಕ ಸಂಪರ್ಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಬಲಗೈಗೆ ಸುಟ್ಟ ಗಾಯವಾಗಿದ್ದು, ಲ್ಯಾಪ್‌ಟಾಪ್ ಕೇಬಲ್ ಹಾನಿಗೊಳಗಾಗಿದೆ. ಈಗಾಗಲೇ ಸ್ವಿಚ್‌ಬೋರ್ಡ್‌ಗೆ ಮುಖ್ಯ ತಂತಿ ಸಂಪರ್ಕಗೊಂಡಿದ್ದರಿಂದ ಚಾರ್ಜರ್‌ನ್ನು ಪ್ಲಗ್ ಮಾಡಲು ಪ್ರಯತ್ನಿಸುವಾಗ ವಿದ್ಯುತ್ ಶಾಕ್ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ವಿದ್ಯುದಾಘಾತದಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.