ಲೋಕಸಭೆ ಚುನಾವಣೆ ಪ್ರಚಾರ ಮುಗಿದ ಬಳಿಕ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಎರಡು ದಿನ ಧ್ಯಾನ!

By Santosh Naik  |  First Published May 28, 2024, 6:32 PM IST

ಲೋಕಸಭೆ ಚುನಾವಣೆಯ ಪ್ರಚಾರ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ, ದೇಶದ ದಕ್ಷಿಣ ತುದಿ ಕನ್ಯಾಕುಮಾರಿಯಲ್ಲಿ ಧ್ಯಾನ ಮಾಡಲಿದ್ದಾರೆ.


ನವದೆಹಲಿ (ಮೇ.28): ಲೋಕಸಭಾ ಚುನಾವಣಾ ಪ್ರಚಾರ ಮುಗಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು 2 ದಿನಗಳ ಕಾಲ ಆಧ್ಯಾತ್ಮಿಕ ವಿಹಾರದಲ್ಲಿ ಇರಲಿದ್ದಾರೆ. ಜೂನ್ 4 ರಂದು ಚುನಾವಣಾ ಫಲಿತಾಂಶಕ್ಕೆ ಮುಂಚಿತವಾಗಿ ಅವರು ಧ್ಯಾನ ಮಾಡಲು ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ. ಅವರು ಮೇ 30 ರ ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಧ್ಯಾನ ಮಂಟಪದಲ್ಲಿ ಧ್ಯಾನ ಮಾಡುತ್ತಾರೆ.  ಸಂಸತ್ ಚುನಾವಣೆಯ ಕೊನೆಯ ಮತ್ತು ಏಳನೇ ಹಂತ ಜೂನ್ 1 ರಂದು ನಿಗದಿಯಾಗಿದ್ದು, ಮೇ 30 ರಂದು ಪ್ರಚಾರ ಕೊನೆಗೊಳ್ಳಲಿದೆ. ಪ್ರಧಾನಿ ಮೋದಿ ಮೇ 30 ರಿಂದ ಜೂನ್ 1 ರವರೆಗೆ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ ಮತ್ತು ಸ್ವಾಮಿ ವಿವೇಕಾನಂದರು ಇದ್ದ ಅದೇ ಸ್ಥಳವಾದ ವಿವೇಕಾನಂದರ ಕಲ್ಲಿನ ಸ್ಮಾರಕದಲ್ಲಿ ಧ್ಯಾನಸ್ಥ ಸ್ಥಿತಿಗೆ ಹೋಗಲಿದ್ದಾರೆ.

ಸ್ವಾಮಿ ವಿವೇಕಾನಂದರು ದೇಶಾದ್ಯಂತ ಅಲೆದಾಡಿದ ನಂತರ ಕನ್ಯಾಕುಮಾರಿಗೆ ಆಗಮಿಸಿದ್ದರು. ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದ ಸಂಗಮ ಸ್ಥಳದಲ್ಲಿ ಮುಖ್ಯ ಭೂಭಾಗದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಬಂಡೆಯ ಮೇಲೆ ಮೂರು ದಿನಗಳ ಕಾಲ ಧ್ಯಾನ ಮಾಡಿದರು. ವಿವೇಕಾನಂದರು ಇಲ್ಲಿ ಜ್ಞಾನೋದಯವನ್ನು ಪಡೆದರು ಎಂದು ನಂಬಲಾಗಿದೆ. ಗೌತಮ ಬುದ್ಧನ ಜೀವನದಲ್ಲಿ ಸಾರನಾಥವು ಹೇಗೆ ಪ್ರಮುಖವಾಗಿದೆಯೋ ಅದೇ ರೀತಿ ಸ್ವಾಮಿ ವಿವೇಕಾನಂದರಿಗೆ ಈ ಕ್ಷೇತ್ರ ಮಹತ್ವ ಎನಿಸಿತ್ತು. ಈ ತಾಣವು ಮಹತ್ವದ ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

Tap to resize

Latest Videos

ಸ್ವಾಮಿ ವಿವೇಕಾನಂದರು ಮೂರು ದಿನಗಳ ಕಾಲ ಧ್ಯಾನ ಮಾಡಿದ ನಂತರ ಭಾರತ ಮಾತೆಯ ದರ್ಶನ ಪಡೆದ ಸ್ಥಳ ಕನ್ಯಾಕುಮಾರಿ ಎಂದು ಹೇಳಲಾಗಿದೆ. ಭಗವಾನ್‌ ಶಿವನ ನಿರೀಕ್ಷೆಯಲ್ಲಿ ಪಾರ್ವತಿ ದೇವಿಯು ಇಲ್ಲಿ ಒಂದೇ ಕಾಲಿನಲ್ಲಿ ನಿಂತು ಧ್ಯಾನ ಮಾಡಿದ್ದಳು ಎಂದೂ ಪುರಾಣಗಳು ಹೇಳುತ್ತವೆ. ಭಾರತದ ಈ ದಕ್ಷಿಣದ ತುದಿಯು ಪೂರ್ವ ಮತ್ತು ಪಶ್ಚಿಮ ಕರಾವಳಿಗಳು ಸಂಗಮಿಸುವ ಸ್ಥಳವಾಗಿದೆ ಮತ್ತು ಹಿಂದೂ ಮಹಾಸಾಗರ, ಬಂಗಾಳ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರವನ್ನು ಇಲ್ಲಿ ಸಂಧಿಸುತ್ತದೆ.

ಲೋಕ ಸಮರದ ಫಲಿತಾಂಶಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ

ಪ್ರಧಾನಿ ಮೋದಿ ಚುನಾವಣಾ ಪ್ರಚಾರದ ಕೊನೆಯಲ್ಲಿ ಆಧ್ಯಾತ್ಮಿಕ ಪ್ರಯಾಣವನ್ನು ಕೈಗೊಳ್ಳುತ್ತಾರೆ. 2019 ರಲ್ಲಿ, ಅವರು ಕೇದಾರನಾಥಕ್ಕೆ ಭೇಟಿ ನೀಡಿದ್ದರು. 2014 ರಲ್ಲಿ ಅವರು ಶಿವಾಜಿಯ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು, ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದ್ದು, ಜೂನ್ 4 ರಂದು ಫಲಿತಾಂಶ ಹೊರಬೀಳಲಿದೆ. 2019ರಲ್ಲಿ ಬಿಜೆಪಿ ಹಾಗೂ ಎನ್‌ಡಿಎ ಗೆದ್ದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನವನ್ನು ಪಡೆಯುವ ಮೂಲಕ ಅಧಿಕಾರಕ್ಕೆ ಹಿಡಿಯುವ ನಿರೀಕ್ಷೆಯಲ್ಲಿ ಬಿಜೆಪಿ ಇದೆ.

ಇದಕ್ಕಿದ್ದಂತೆ ಹೆಚ್ಚಾಯ್ತು ಜಲಪಾತದ ನೀರು; ಎದ್ನೋ ಬಿದ್ನೋ ಅಂತ ಓಡಿದ ಜನರು, ವಿಡಿಯೋ ನೋಡಿ

click me!