
ಕೋಯಿಕ್ಕೋಡ್: ಕೇವಲ ಒಂದು ರೂಪಾಯಿಗೆ ಶೂ ಕೊಡ್ತೀವಿ ಅಂತಾ ಅಂಗಡಿಯೊಂದು ಕೊಟ್ಟ ಆಫರ್, ಕೇರಳದ ಕೋಯಿಕ್ಕೋಡ್‌ನಲ್ಲಿ ದೊಡ್ಡ ಗಲಾಟೆಗೆ ಕಾರಣವಾಗಿದೆ. ಈ ಸುದ್ದಿ ಕೇಳಿ ಜನ ರಾತ್ರಿಯಿಂದಲೇ ಅಂಗಡಿ ಮುಂದೆ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಕೊನೆಗೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಇಲ್ಲಿನ 'ಟ್ರೆಂಡ್ ಫ್ಯಾಕ್ಟರಿ' ಹೆಸರಿನ ಶೂ ಅಂಗಡಿ, ತನ್ನ ಉದ್ಘಾಟನೆ ದಿನದಂದು ಒಂದು ರೂಪಾಯಿಗೆ ಶೂ ನೀಡುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತು ನೀಡಿತ್ತು. ಈ ಆಫರ್‌ಗಾಗಿ ಸಾವಿರಾರು ಜನ, ಅದರಲ್ಲೂ ಹೆಚ್ಚಾಗಿ ಯುವಕ-ಯುವತಿಯರು, ಬೆಳಗಿನ ಜಾವ 3 ಗಂಟೆಯಿಂದಲೇ ಅಂಗಡಿ ಮುಂದೆ ಬಂದು ಕಾಯುತ್ತಿದ್ದರು.
ಎರಡು ದಿನಗಳ ಹಿಂದೆಯೇ ನಾವು ಜಾಹೀರಾತು ನೋಡಿದ್ದೆವು. ಆದರೆ, ಬೆಳಿಗ್ಗೆ 10 ಗಂಟೆಗೆ ಆಫರ್ ಶುರು ಅಂತ ಹೇಳಿ, ಮುಂಚೆಯೇ ಕೆಲವರಿಗೆ ಕೊಟ್ಟು ಮುಗಿಸಿಬಿಟ್ಟಿದ್ದಾರೆ. ಇದು ಸರಿಯಲ್ಲ ಎಂದು ಯುವಕರು ಆಕ್ರೋಶ ವ್ಯಕ್ತಪಡಿಸಿದರು. ಒಂದು ರೂಪಾಯಿ ನೋಟು ಹಿಡಿದು ಬಂದಿದ್ದ ನಮಗೆ ಮೋಸ ಆಗಿದೆ ಎಂದು ಹಲವರು ದೂರಿದರು.
ಜನರು ಚದುರಿ ಹೋಗದಿದ್ದಾಗ, ಪೊಲೀಸರು ಲಾಠಿ ಬೀಸಿದ್ದಾರೆ. ಇದರಿಂದ ಕೋಪಗೊಂಡ ಯುವಕರು ಪೊಲೀಸರ ವಿರುದ್ಧವೇ ಘೋಷಣೆ ಕೂಗಿದರು. ಗಲಾಟೆ ಹೆಚ್ಚಾಗುತ್ತಿದ್ದಂತೆ, ಅಂಗಡಿ ಮಾಲೀಕರು 'ಇಂದು ಅಂಗಡಿ ತೆರೆಯುವುದಿಲ್ಲ' ಎಂದು ಬೋರ್ಡ್ ಹಾಕಿದರು. ಸದ್ಯ ಪೊಲೀಸರು ಅಂಗಡಿ ಮಾಲೀಕರನ್ನು ವಶಕ್ಕೆ ಪಡೆದು, ಜನರನ್ನು ಅಲ್ಲಿಂದ ಕಳುಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ