
ಅಮರಾವತಿ: ಗೊತ್ತುಗುರಿ ಇಲ್ಲದ ಗ್ಯಾರಂಟಿ ಯೋಜನೆಗಳ ಜಾರಿ ರಾಜ್ಯಗಳ ಆರ್ಥಿಕತೆಗೆ ಪೆಟ್ಟು ನೀಡುತ್ತಿರುವ ಬಗ್ಗೆ ಆರ್‌ಬಿಐ, ಸುಪ್ರೀಂಕೋರ್ಟ್‌ನ ಎಚ್ಚರಿಕೆ ನಡುವೆಯೇ, 2024-25ರ ಇಡೀ ಹಣಕಾಸು ವರ್ಷದಲ್ಲಿ ಆಂಧ್ರಪ್ರದೇಶ ಸರ್ಕಾರ ಕೇವಲ 8 ದಿನ ಹೊರತುಪಡಿಸಿ ಉಳಿದ ಅಷ್ಟೂ ದಿನಗಳ ಅವಧಿಯಲ್ಲಿ ಒಟ್ಟಾರೆ 1.72 ಲಕ್ಷ ಕೋಟಿ ರು.ನಷ್ಟು ಸಾಲ ಇಲ್ಲವೇ ಮುಂಗಡ ಪಡೆದು ಕಾರ್ಯನಿರ್ವಹಿಸಿತ್ತು ಎಂಬ ವಿಷಯ ಬೆಳಕಿಗೆ ಬಂದಿದೆ.
ಶುಕ್ರವಾರ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಮಂಡಿಸಿದ ಸಿಎಜಿ ವರದಿಯಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ವರದಿ ಅನ್ವಯ 2024-25ರಲ್ಲಿ ಆಂಧ್ರ ಸರ್ಕಾರ ಆರ್‌ಬಿಐ ಬಳಿ ಯಾವುದೇ ಸಾಲ ಅಥವಾ ಮುಂಗಡ ಪಡೆಯದೇ ಕೇವಲ 8 ದಿನ ಮಾತ್ರವೇ ಕನಿಷ್ಠ ನಗದು ಬಾಕಿ ಹೊಂದಿತ್ತು. ಸರ್ಕಾರದ ವಿತ್ತೀಯ ಕೊರತೆ ಪ್ರಮಾಣವು 'ವಿತ್ತೀಯ ಹೊಣೆಗಾರಿಕೆ ಮತ್ತು ಬಜೆಟ್ ನಿರ್ವಹಣೆ ಮಿತಿ'ಯಾದ ರಾಜ್ಯ ಜಿಡಿಪಿಯ ಶೇ.2.7ರ ಮೀತಿ ದಾಟಿ ಶೇ.3.75 ತಲುಪಿದ ಪರಿಣಾಮ ರಾಜ್ಯ ಸರ್ಕಾರವು ತನ್ನ ದೈನಂದಿನ ಕಾರ್ಯನಿರ್ವಹಣೆಗೆ ಸಾಲ ಪಡೆಯಬೇಕಾದ ಪರಿಸ್ಥಿತಿಗೆ ತಲುಪಿತ್ತು. ಇದು ರಾಜ್ಯದ ಬಡ್ಡಿ ಹೊರೆಯನ್ನು ಹೆಚ್ಚಿಸಿತು ಎಂದು ವರದಿ ಹೇಳಿದೆ.
ಇದನ್ನೂ ಓದಿ: ಸೌದಿ ಅರೇಬಿಯಾದ ಜೊತೆ ಒಪ್ಪಂದ ಮಾಡಿ ಅಡಕತ್ತರಿಯಲ್ಲಿ ಸಿಲುಕಿದ ಪಾಕಿಸ್ತಾನ: ಇರಾನ್‌ನಿಂದ ದಾಳಿಯ ಭೀತಿ
2024ರಲ್ಲಿ ಸರ್ಕಾರವು 71 ದಿನಗಳ ಅವಧಿಯಲ್ಲಿ ಸ್ಪೆಷನ್ ಡ್ರಾಯಿಂಗ್ ಫೆಸಿಲಿಟಿ ಬಳಸಿ 42,004 ಕೋಟಿ ರು. ಸಾಲ ಪಡೆದು 188 ಕೋಟಿ ರು. ಬಡ್ಡಿ ಕಟ್ಟಿತ್ತು. ವೇಯ್ಸ್ ಆ್ಯಂಡ್ ಮೀನ್ಸ್ ಅಡ್ವಾನ್ಸ್ ರೂಪದಲ್ಲಿ 179 ದಿನಗಳ ಅವಧಿಯಲ್ಲಿ 73897 ಕೋಟಿ ರು. ಸಾಲ ಪಡೆದು ಅದಕ್ಕೆ 82 ಕೋಟಿ ರು. ಬಡ್ಡಿ ಪಾವತಿಸಿತ್ತು. ಜೊತೆಗೆ 107 ದಿನಗಳಂದು ಒಟ್ಟು 56631 ಕೋಟಿ ರು. ಓವರ್ ಡ್ರಾಫ್ಟ್ ಪಡೆದು ಅದಕ್ಕೆ 32 ಕೋಟಿ ರು. ಬಡ್ಡಿ ಪಾವತಿಸಿತ್ತು ಎಂದು ಸಿಎಜಿ ವರದಿ ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಟಿಡಿಪಿ ನಾಯಕರು, ರಾಜ್ಯದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಿತ್ತು 2024ರ ಜೂ.1ರಂದು. ಅಷ್ಟರಲ್ಲಾಗಲೇ ಹಿಂದಿನ ಸರ್ಕಾರ 38000 ಕೋಟಿ ರು. ಸಾಲ ಪಡೆದಿತ್ತು. ಅವರು ಉಳಿಸಿ ಹೋಗಿದ್ದ ಹೊರೆಯನ್ನು ತೀರಿಸಲು ನಾವು ಸಾಲ ಮಾಡಬೇಕಾಗಿ ಬಂತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಲಿಂಡರ್ ಬೆಲೆ ಹೆಚ್ಚಳ ಶರಣಾಗತಿಯ ಫಲ: ಮೋದಿ ಅವಧಿಯಲ್ಲಿ ದೇಶ 218 ಲಕ್ಷ ಕೋಟಿ ಸಾಲ: ಸಿದ್ದರಾಮಯ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ