ಪ್ರವಾಹದಲ್ಲಿ ಕೊಚ್ಚಿ ಹೋದ ಕಾರು: ಮೂವರ ಶವಪತ್ತೆ ಮೂವರು ನಾಪತ್ತೆ

By Anusha Kb  |  First Published Jul 13, 2022, 12:50 PM IST

ಭಾರಿ ಮಳೆಗೆ ನದಿಯೊಂದು ಉಕ್ಕಿ ಹರಿದ ಪರಿಣಾಮ ಕಾರೊಂದು ನೀರಲ್ಲಿ ಕೊಚ್ಚಿ ಹೋಗಿದ್ದು, ಕಾರಿನಲ್ಲಿದ್ದ ಒಟ್ಟು ಅರೂ ಜನರಲ್ಲಿ ಮೂವರು ಸಾವನ್ನಪ್ಪಿ ಮತ್ತೆ ಮೂವರು ನಾಪತ್ತೆಯಾಗಿದ್ದಾರೆ. 


ನಾಗಪುರ: ಭಾರಿ ಮಳೆಗೆ ನದಿಯೊಂದು ಉಕ್ಕಿ ಹರಿದ ಪರಿಣಾಮ ಕಾರೊಂದು ನೀರಲ್ಲಿ ಕೊಚ್ಚಿ ಹೋಗಿದ್ದು, ಕಾರಿನಲ್ಲಿದ್ದ ಒಟ್ಟು ಅರೂ ಜನರಲ್ಲಿ ಮೂವರು ಸಾವನ್ನಪ್ಪಿ ಮತ್ತೆ ಮೂವರು ನಾಪತ್ತೆಯಾಗಿದ್ದಾರೆ. ಮೃತರಲ್ಲಿ ಹತ್ತು ವರ್ಷದ ಬಾಲಕನ್ನು ಸೇರಿದ್ದಾನೆ.  ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕೆಲ್ವಾಡ್‌ನ ನಂದಗೌಮುಖ ಎಂಬಲ್ಲಿ ಈ ದುರಂತ ಸಂಭವಿಸಿದೆ. ಉಕ್ಕಿ ಹರಿಯುತ್ತಿದ್ದ ಸಣ್ಣ ಹೊಳೆಯೊಂದನ್ನು ದಾಟುತ್ತಿದ್ದಾಗ ನೀರಿನ ರಭಸಕ್ಕೆ ಸಿಲುಕಿ ಕಾರು ಕೊಚ್ಚಿ ಹೋಗಿದ್ದು, ಮೂವರು ನಾಪತ್ತೆಯಾಗಿದ್ದು, ಮೂವರ ಶವ ಪತ್ತೆಯಾಗಿದೆ. ನಿನ್ನೆ(ಜುಲೈ 12) ಈ ಅನಾಹುತ ಸಂಭವಿಸಿದೆ. ಮೃತರೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. 

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ, ವಾಹನವು ಪ್ರವಾಹದ ನಡುವೆ ಸಿಲುಕಿಕೊಂಡಿರುವುದನ್ನು ಕಾಣಬಹುದು ಮತ್ತು ಜನಸಮೂಹವು ಏನೂ ಮಾಡಲಾಗದೇ ಅಸಹಾಯಕರಾಗಿ ಹೊಳೆಯ ಬದಿಯಲ್ಲಿ ನಿಂತಿರುವುದನ್ನು ಕಾಣಬಹುದು. ಈ ವೇಳೆ ಕೆಲವರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ದುರಂತವನ್ನು ರೆಕಾರ್ಡ್‌ ಮಾಡುತ್ತಿದ್ದಾರೆ. ಐದರಿಂದ ಆರು ಮಂದಿ ವಾಹನದಲ್ಲಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಧ್ಯಾಹ್ನ 2 ಗಂಟೆಯ ಸುಮಾರಿಗೆ ನದಿಯ ಬಲವಾದ ಹೊಡೆತಕ್ಕೆ ವಾಹನವು ಕೊಚ್ಚಿಹೋಗಿದೆ. ಸುದ್ದಿ ತಿಳಿದು ರಕ್ಷಣೆಗೆ ಇಳಿದ ತಂಡಕ್ಕೆ ಸಂಜೆ ರಕ್ಷಣಾ ಕಾರ್ಯಾಚರಣೆ ಅಂತ್ಯಗೊಳಿಸುವ ವೇಳೆ ಒಟ್ಟು ಮೂರು ಮೃತದೇಹಗಳು ಸಿಕ್ಕಿವೆ. ಇಂದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. 

| A Scorpio with passengers was washed away in water in .

The incident occurred at 2 pm today, near Savner where water was filled. The driver tried to get the Scorpio out of the water-filled culvert but the flow was too strong. pic.twitter.com/EZluG3djHo

— Mirror Now (@MirrorNow)

Tap to resize

Latest Videos

ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದು, ನಂದಗೋಮುಲ್ಕ್‌ನಿಂದ ಮಧ್ಯಪ್ರದೇಶದ ಮುಲ್ತಾಯ್‌ಗೆ ತೆರಳುತ್ತಿದ್ದಾಗ ಹೊಳೆ ಉಕ್ಕಿ ಹರಿಯುತ್ತಿದ್ದು, ಆದಾಗ್ಯೂ ಚಾಲಕ ಲೀಲಾಧರ್ ಹಿವಾರೆ ಅವರು ತುಂಬಿ ಹರಿಯುತ್ತಿರುವ ಹೊಳೆ ದಾಟುವ ಹುಚ್ಚು ಸಾಹಸಕ್ಕೆ ಮುಂದಾಗಿ ಈ ಅನಾಹುತ ನಡೆದಿದೆ ಎಂದು ವರದಿಯಾಗಿದೆ. ಪ್ರವಾಹದ  ನಡುವೆ ಲೀಲಾಧರ್‌, ಕಡಿಮ ಎತ್ತರದ ಸೇತುವೆಯ ಮೂಲಕ ಕಾರು ದಾಟಿಸಲು ಮುಂದಾಗಿದ್ದಾರೆ ಇದು ಅಪಘಾತಕ್ಕೆ ಕಾರಣವಾಯಿತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. 

ಮಂಗ್ಳೂರಲ್ಲಿ ಕಡಲಬ್ಬರ: ಬೈಕಂಪಾಡಿ ಮೀನಕಳಿಯದಲ್ಲಿ ರಸ್ತೆಯೇ ಸಮುದ್ರ ಪಾಲು..!

ಕಳೆದ 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಮಳೆಗೆ ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಜೂನ್ 1 ಮತ್ತು ಜುಲೈ 10 ರ ನಡುವೆ ಮಹಾರಾಷ್ಟ್ರದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 83 ಜನರು ಸಾವನ್ನಪ್ಪಿದ್ದಾರೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ.

ಬೀದರ್‌: ನಿರಂತರ ಮಳೆಗೆ 118 ಮನೆಗಳು ಕುಸಿತ, ಹೊಲದಲ್ಲಿ ನೀರು ನಿಂತು ಬೆಳೆ ನಾಶ

click me!