ಮುಖ್ಯಮಂತ್ರಿಗೆ ತಣ್ಣಗಾದ ಟೀ ನೀಡಿದ ಸಿಬ್ಬಂದಿ, ಶೋಕಾಸ್ ನೋಟಿಸ್ ಜಾರಿ!

Published : Jul 13, 2022, 11:31 AM IST
ಮುಖ್ಯಮಂತ್ರಿಗೆ ತಣ್ಣಗಾದ ಟೀ ನೀಡಿದ ಸಿಬ್ಬಂದಿ, ಶೋಕಾಸ್ ನೋಟಿಸ್ ಜಾರಿ!

ಸಾರಾಂಶ

ತಣ್ಣಗಿರುವ ಟೀ, ಕಳಪೆ ಗುಣಟ್ಟದ ತಿಂಡಿ ನೀಡಿದ ಸಿಬ್ಬಂದಿ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಗರಂ ಸಿಬ್ಬಂದಿಗೆ 3 ದಿನದಲ್ಲಿ ಉತ್ತರಿಸಲು ನೋಟಿಸ್

ಭೋಪಾಲ್(ಜು.13): ಬೆಳ್ಳಂಬೆಳಗ್ಗೆ ಚುನಾವಣಾ ಪ್ರಚಾರ ಕಾರ್ಯ ಮುಗಿಸಿ ಬಂದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್‌ಗೆ ತಣ್ಣಗಾಗಿರುವ ಚಹಾ ಹಾಗೂ ಕಳಪೆ ಗುಣಮಟ್ಟದ ಉಪಹಾರ ನೀಡಿದ ಘಟನೆ  ಖಜರಾಹೋ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪರಿಣಾಮ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು 3 ದಿನದಲ್ಲಿ ಉತ್ತರಿಸಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸೂಚಿಸಲಾಗಿದೆ. ಆದರೆ ಈ ಶೋಕಾಸ್ ನೋಟಿಸ್‌ಗೆ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ನೋಟಿಸ್ ಹಿಂಪಡೆಯಲಾಗಿದೆ.   ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರಕ್ಕಾಗಿ ಶಿವರಾಜ್ ಸಿಂಗ್ ಚವ್ಹಾಣ್ ಖಜರಾಹೋ ಸಮೀಪ ವಲಯಕ್ಕೆ ತೆರಳಿದ್ದಾರೆ. ಇಲ್ಲಿ ಪ್ರಚಾರ ಕಾರ್ಯ ಮುಗಿಸಿದ ಖಜರಾಹೋ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಶಿವರಾಜ್ ಸಿಂಗ್ ಚವ್ಹಾಣ್‌ಗೆ ಜೂನಿಯರ್ ಸಪ್ಲೈ ಆಫೀಸರ್ ರಾಕೇಶ್ ಕನೌಹಾ ತಣ್ಣಗಾಗಿರುವ ಚಹಾ ಹಾಗೂ ಕಳಪೆ ಗುಣಮಟ್ಟದ ಉಪಾಹರ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.  ತಣ್ಣಗಾಗಿರುವ ಚಹಾ ಕುಡಿಯದ ಮುಖ್ಯಮಂತ್ರಿ ಅಲ್ಲಿಂದ ಎದ್ದು ಹೋಗಿದ್ದಾರೆ. ಇದರಿಂದ ಸಿಎಂ ಕಚೇರಿ ಅಧಿಕಾರಿಗಳು ಖಜರಾಹೋ ಜಿಲ್ಲಾಡಳಿತಕ್ಕೆ ನೋಟಿಸ್ ನೀಡಿತ್ತು. ಆದರೆ ಈ ನಡೆಗೆ ಭಾರಿ ವಿರೋಧ ವ್ಯಕ್ತವಾದ ಕಾರಣ ನೋಟಿಸ್ ಹಿಂಪಡೆಯಲಾಗಿದೆ.

ಸ್ಥಳೀಯ ಜಿಲ್ಲಾಧಿಕಾರಿಗೆ ನೋಟಿಸ್ ನೀಡಲಾಗಿತ್ತು. ಈ ನೋಟಿಸ್‌ನಲ್ಲಿ ನಿಮಗೆ ಮುಖ್ಯಮಂತ್ರಿ ಭೇಟಿ ಹಾಗೂ ಉಪಹಾರ ಕುರಿತು ಮೊದಲೇ ಸೂಚನೆ ನೀಡಲಾಗಿತ್ತು. ವಿಐಪಿಗೆ ನೀಡಬೇಕಿರುವ ಕನಿಷ್ಠ ಸೌಲಭ್ಯವನ್ನು ನೀಡಲು ಸ್ಥಳೀಯ ಜಿಲ್ಲಾಡಳಿತ ವಿಫಲವಾಗಿದೆ. ಮುಖ್ಯಮಂತ್ರಿಗೆ ನೀಡಿದ ಚಹಾ ತಣ್ಣಗಾಗಿತ್ತು. ಇನ್ನು ಉಪಹಾರ ಕಳಪೆ ಗುಣಮಟ್ಟದ್ದಾಗಿತ್ತು. ಇದು ವಿಐಪಿ ಪ್ರೋಟೋಕಾಲ್ ಉಲ್ಲಂಘನೆಯಾಗಿದೆ. ಇದು ಸ್ಥಳೀಯ ಜಿಲ್ಲಾಡಳಿತಕ್ಕೆ ಕಪ್ಪು ಚುಕ್ಕೆಯಾಗಿದೆ ಎಂದಿದೆ. ಇಷ್ಟೇ ಅಲ್ಲ ವಿಐಪಿ ಉಪಹಾರದಲ್ಲಿ ಈ ರೀತಿಯ ಅಚಾತುರ್ಯ ನಡೆದಿರುವುದು ಹೇಗೆ? ಈ ಕುರಿತು ಯಾಕೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಂಡಿಲ್ಲ, ಮೂರು ದಿನಗಳಲ್ಲಿ ಈ ನೋಟಿಸ್‌ಗೆ ಉತ್ತರಿಸುವಂತೆ ಸ್ಥಳೀಯ ಜಿಲ್ಲಾಡಳಿತವನ್ನು ಕೋರಲಾಗಿತ್ತು.

 

Kundalpur and Bandakpur : ಭಾರತದ ಈ ಎರಡು ನಗರ "ಪವಿತ್ರ ಪ್ರದೇಶ" ಎಂದು ಘೋಷಣೆ, ಮದ್ಯ, ಮಾಂಸ ನಿಷೇಧ!

ಆದರೆ ಈ ನೋಟಿಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕಾರಣ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಸಿಎಂಗಾಗಿ ಮಾಡಿದ ಚಹಾ ತಣ್ಣಗಾಗಿದೆ ಎಂದರೆ ಸಿಎಂ ತಡಮಾಡಿ ಬಂದಿದ್ದಾರೆ ಎಂದರ್ಥ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಬಂದು, ಟಿ ತಣ್ಣಗಾಗಿದ್ದರೆ, ಬಿಸಿ ಮಾಡಿದರೆ ಆಯ್ತು, ಅಥಾ ಬೇರೆ ಚಹಾ ಮಾಡಲು ಸೂಚಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ನೋಟಿಸ್ ರದ್ದು ಮಾಡಲಾಗಿದೆ. 

ಮಧ್ಯಪ್ರದೇಶ ಬಿಜೆಪಿ ಸರ್ಕಾರದ ವಿಐಪಿ ಸಂಸ್ಕೃತಿಯನ್ನು ಮತ್ತೊಂದು ಮಜಲಿಗೆ ಕೊಂಡೊಯ್ದಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ರಾಜ್ಯದ ಜನರು ಪಡಿತರ ಅಕ್ಕಿ, ಧವಸ ದಾನ್ಯಗಳು ಸಿಗದೆ ಪರದಾಡುತ್ತಿದ್ದಾರೆ. ಆದರೆ ಮುಖ್ಯಮಂತ್ರಿಗೆ ತಣ್ಣಗಿರುವ ಚಹಾ ನೀಡಲಾಗಿದೆ ಎಂದು ನೋಟಿಸ್ ನೀಡಲಾಗಿದೆ. ರಾಜ್ಯದ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದು ಜನರು ಅರ್ಥಮಾಡಿಕೊಳ್ಳುತ್ತಿದ್ದಾರೆ.  ಜನರಿಗೆ ತುರ್ತು ಆ್ಯಂಬುಲೆನ್ಸ್ ಸೇವೆಗಳು ಲಭ್ಯವಾಗುತ್ತಿಲ್ಲ. ಆದರೆ ಮುಖ್ಯಮಂತ್ರಿಗೆ ಚಹಾ ಮುಖ್ಯವಾಗಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ನರೇಂದ್ರ ಸಾಲುಜಾ ಹೇಳಿದ್ದಾರೆ.

 

ಹಸುಗಳು, ಸಗಣಿ, ಗೋಮೂತ್ರವು ಆರ್ಥಿಕತೆಗೆ ವೇಗ ನೀಡುತ್ತವೆ: ಸಿಎಂ ಶಿವರಾಜ್ ಸಿಂಗ್ ಚೌಹಾಣ್!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!