ಫ್ಲೈಒವರ್‌ನಿಂದ ಪಲ್ಟಿಯಾಗಿ ರೈಲ್ವೆ ಹಳಿಗೆ ಬಿದ್ದ ಕಾರು: ರೈಲುಗಳ ಸಂಚಾರದಲ್ಲಿ ವ್ಯತ್ಯಯ

Published : Sep 14, 2025, 04:05 PM IST
Car Plunges onto Railway Tracks

ಸಾರಾಂಶ

ವೇಗವಾಗಿ ಸಾಗುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಫ್ಲೈಒವರ್ ಮೇಲಿನಿಂದ ಕೆಳಗೆ ಉರುಳಿ ರೈಲ್ವೆ ಹಳಿಯ ಮೇಲೆ ಬಿದ್ದ ಪರಿಣಾಮ ಕೆಲ ಗಂಟೆಗಳ ಕಾಲ ರೈಲ್ವೆ ಸಂಚಾರದಲ್ಲಿ ವ್ಯತ್ಯ ಆದಂತಹ ಘಟನೆ ನಡೆದಿದೆ.

ಫ್ಲೈಒವರ್‌ನಿಂದ ಕೆಳಗುರುಳಿದ ಕಾರು: ರೈಲು ಸಂಚಾರದಲ್ಲಿ ವ್ಯತ್ಯಯ..

ನವದೆಹಲಿ: ವೇಗವಾಗಿ ಸಾಗುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಫ್ಲೈಒವರ್ ಮೇಲಿನಿಂದ ಕೆಳಗೆ ಉರುಳಿ ರೈಲ್ವೆ ಹಳಿಯ ಮೇಲೆ ಬಿದ್ದ ಪರಿಣಾಮ ಕೆಲ ಗಂಟೆಗಳ ಕಾಲ ರೈಲ್ವೆ ಸಂಚಾರದಲ್ಲಿ ವ್ಯತ್ಯ ಆದಂತಹ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ. ದೆಹಲಿಯ ಹೈದರ್‌ಪುರ ಮೆಟ್ರೋ ನಿಲ್ದಾಣದ ಸಮೀಪ ಇರುವ ಮುಕರ್ಬಾ ಚೌಕ್‌ ಫ್ಲೈಒವರ್‌ ಮೇಲೆ ವೇಗವಾಗಿ ಸಾಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಕೆಳಗಿದ್ದ ರೈಲ್ವೆ ಹಳಿಯ ಮೇಲೆ ಬಿದ್ದಿದೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಕಾರಿನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಮಯ್‌ಪುರ ಬದ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರೈಲು ಸಂಚಾರದಲ್ಲಿ ವ್ಯತ್ಯಯ:

ರಿಂಗ್ ರೋಡ್‌ನ ಕೆಳಗಿರುವ ರೈಲ್ವೆ ಟ್ರ್ಯಾಕ್‌ ಮೇಲೆ ಉರುಳಿದ ಕಾರು ತಲೆಗೆಳಗಾಗಿ ಬಿದ್ದಿತ್ತು. ಕಾರಿನ ಚಾಲಕನನ್ನು 35 ವರ್ಷದ ಸಚಿನ್ ಚೌಧರಿ ಎಂದು ಗುರುತಿಸಲಾಗಿದೆ. ಈತ ಗಾಜಿಯಾಬಾದ್‌ನ ಪ್ರತಾಪ್ ವಿಹಾರ್ ರೈಲ್ವೆ ಕಾಲೋನಿ ನಿವಾಸಿಯಾಗಿದ್ದು, ಆತನ ಹೆಗಲು ಹಾಗೂ ಮುಖಕ್ಕೆ ಗಾಯವಾಗಿದೆ. ಇದರಿಂದ ಈ ಕಾರನ್ನು ಹಳಿಯಿಂದ ತೆರವುಗೊಳಿಸುವವರೆಗೆ ಸುಮಾರು ಒಂದು ಗಂಟೆಗಳ ಕಾಲ ರೈಲು ಸಂಚಾರದಲ್ಲಿ ವ್ಯತ್ಯಾಯವಾಗಿತ್ತು. ಕಾರು ಚಾಲಕ ಚೌಧರಿ ಪೀರಾ ಗರ್ಹಿಯಿಂದ ಗಾಜಿಯಾಬಾದ್‌ನತ್ತ ಸಾಗುತ್ತಿದ್ದಾಗ ಘಟನೆ ನಡೆದಿದೆ. ಈತನ ನಿಯಂತ್ರಣ ಕಳೆದುಕೊಂಡ ಕಾರು ಮೇಲ್ಸೇತುವೆಯಿಂದ ಕೆಳಗೆ ಬಿದ್ದಿದೆ.

ಕಾರು ಪಕ್ಕದ ಪಾದಾಚಾರಿ ಮಾರ್ಗಕ್ಕೆ ಡಿಕ್ಕಿ ಹೊಡೆದು ಫ್ಲೈಒವರ್‌ನ ಕಂಬಿ ಬೇಲಿಯನ್ನು ಮುರಿದುಕೊಂಡು ಹುಲ್ಲಿನ ಇಳಿಜಾರಿನ ಮೇಲೆ ಇಳಿದು ರೈಲ್ವೆ ಹಳ್ಳಿಯ ಮೇಲೆ ಬಿದ್ದಿದ್ದರಿಂದ ಕಾರು ಚಾಲಕನ ಜೀವ ಉಳಿದಿದೆ. ಘಟನೆಯಲ್ಲಿ ಗಾಯಗೊಂಡ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದರು.

ಈ ಕಾರನ್ನು ಮೇಲೆತ್ತುವ ಸಮಯದಲ್ಲಿ ಅಧಿಕಾರಿಗಳು ಘಟನಾ ಸ್ಥಳದಲ್ಲಿ ನೀಲಿ ಬಣ್ಣದ ಮತ್ತೊಂದು ಬೈಕು ಇರುವುದು ಗಮನಕ್ಕೆ ಬಂದಿದೆ. ಆದರೆ ಈ ಘಟನೆಗೂ ಈ ಬೈಕ್‌ಗೂ ಸಂಬಂಧವಿಲ್ಲ ಆ ಬೈಕ್ ಹಿಂದಿನ ದಿನದಿಂದಲೂ ಅಲ್ಲೇ ಇತ್ತು ಎಂಬುದು ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಈ ಬೈಕ್ ಬಗ್ಗೆ ಯಾವುದೇ ಅಪಘಾತ ದೂರುಗಳು ದಾಖಲಾಗಿಲ್ಲ, ಬೈಕ್ ಮಾಲೀಕರನ್ನು ಸಂಪರ್ಕಿಸಿ ಬೈಕ್ ಕಳ್ಳತನವಾಗಿದೆಯೇ ಅಥವಾ ಇಲ್ಲಿ ಬಿಟ್ಟು ಹೋಗಲಾಗಿದೆಯೇ ಎಂಬ ಬಗ್ಗೆ ನಿರ್ಧರಿಸಲು ತನಿಖೆ ಮಾಡಲಾಗುತ್ತಿದೆ. ಎರಡೂ ಘಟನೆಗಳು ಬೇರೆ ಬೇರೆಯಾಗಿದ್ದು, ಏಕಕಾಲದಲ್ಲಿ ಸಂಭವಿಸಿಲ್ಲ ಎಂದು ಪೊಲೀಸರು ಖಚಿತಪಡಿಸಿದರು.

ಇದನ್ನೂ ಓದಿ:ಜಗತ್ತನ್ನು ತೊರೆಯುತ್ತಿದ್ದೇವೆ ಕ್ಷಮಿಸಿಬಿಡಿ... ಮಾನಸಿಕ ಅಸ್ವಸ್ಥ ಮಗನೊಂದಿಗೆ 13ನೇ ಮಹಡಿಯಿಂದ ಕೆಳಗೆ ಹಾರಿದ ತಾಯಿ

ಇದನ್ನೂ ಓದಿ::ಪತಿಯ ಶವಪೆಟ್ಟಿಗೆಯ ಮೇಲೆ ಬಿದ್ದು ಬಿಕ್ಕಳಿಸಿದ ರಾಷ್ಟ್ರೀಯವಾದಿ ಚಾರ್ಲಿ ಕಿರ್ಕ್ ಪತ್ನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್