ರಸ್ತೆಯೊಂದರಲ್ಲಿ ನಡೆದು ಹೋಗುತ್ತಿದ್ದ ಒಂಟೆಗೆ ವೇಗವಾಗಿ ಬಂದ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂಟೆಗೆ ಗಂಭೀರ ಗಾಯಗಳಾಗಿದ್ದಲ್ಲದೇ ಒಂಟೆ ಕಾರಿನ ಮುಂಭಾಗದೊಳಗೆ ನುಗ್ಗಿ ಹೋಗಿ ಸಿಲುಕಿಕೊಂಡು ನೋವಿನಿಂದ ಚೀರಾಡಿದ ಘಟನೆ ಮರಳುಗಾಡು ರಾಜ್ಯ ರಾಜಸ್ಥಾನದಲ್ಲಿ ನಡೆದಿದೆ.
ರಾಜಸ್ಥಾನ: ರಸ್ತೆಯೊಂದರಲ್ಲಿ ನಡೆದು ಹೋಗುತ್ತಿದ್ದ ಒಂಟೆಗೆ ವೇಗವಾಗಿ ಬಂದ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂಟೆಗೆ ಗಂಭೀರ ಗಾಯಗಳಾಗಿದ್ದಲ್ಲದೇ ಒಂಟೆ ಕಾರಿನ ಮುಂಭಾಗದೊಳಗೆ ನುಗ್ಗಿ ಹೋಗಿ ಸಿಲುಕಿಕೊಂಡು ನೋವಿನಿಂದ ಚೀರಾಡಿದ ಘಟನೆ ಮರಳುಗಾಡು ರಾಜ್ಯ ರಾಜಸ್ಥಾನದಲ್ಲಿ ನಡೆದಿದೆ.
ಜೂನ್8 ರ ರಾತ್ರಿ ಈ ಘಟನೆ ನಡೆದಿದ್ದು, ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಕಾರಿನ ಮುಂಭಾಗದ ಗ್ಲಾಸ್ ಅಥವಾ ವಿಂಡ್‌ಶೀಲ್ಡ್ ಸಂಪೂರ್ಣ ಒಡೆದು ಹೋಗಿದ್ದು, ಒಂಟೆ ಆ ಜಾಗದಲ್ಲಿ ಕಾರಿನೊಳಗೆ ನುಗ್ಗಿ ಹೋಗಿದೆ. ಈ ಇಕ್ಕಟ್ಟಿನ ಜಾಗದಲ್ಲಿ ಕಾರಿನಿಂದ ಹೊರಗೆಬರಲಾಗದೇ ಒಂಟೆ ಅರಚುತ್ತಿರುವ ವೀಡಿಯೋ ವೈರಲ್ ಆಗಿದೆ.
ಮೇಕೆ, ಕತ್ತೆ, ಒಂಟೆ ಹಾಲಿನ ಐಸ್ ಕ್ರೀಮ್ ಉತ್ಪಾದಿಸಿ ವರ್ಷಕ್ಕೆ 12 ಕೋಟಿ ಗಳಿಸುತ್ತಿದ್ದಾರೆ ಆಂಧ್ರದ ಈ ಉದ್ಯಮಿ
ಒಂಟೆ ದೈತ್ಯ ಪ್ರಾಣಿಯಾಗಿದ್ದು, ಅದರ ಭಾರ ತಡೆಯಲಾಗದೆ ಕಾರಿನ ಬೊನೆಟ್ ಕೂಡ ನಜ್ಜುಗುಜ್ಜಾಗಿದೆ. ಅಪಘಾತದ ರಭಸಕ್ಕೆ ಕಾರಿನಲ್ಲಿ ಒಂಟೆ ಸಿಲುಕಿ ಹೋಗಿದ್ದು, ಬಳಿಕ ಸ್ಥಳೀಯರ ನೆರವಿನಿಂದ ಅಪಘಾತ ನಡೆದ ಸ್ವಲ್ಪ ಹೊತ್ತಿನ ಬಳಿಕ ಒಂಟೆಯನ್ನು ಹೊರತೆಗೆಯಲಾಗಿದೆ. ಒಂಟೆಗೆ ಸ್ವಲ್ಪ ಗಾಯವಾಗಿದೆ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಕಾರಿನಲ್ಲಿದ್ದವರಿಗೂ ಗಾಯಗಳಾಗಿವೆ. ಆದರೆ ಯಾರ ಪ್ರಾಣಕ್ಕೆ ಅಪಾಯವಾಗಿಲ್ಲ, ಒಂಟೆಯ ಹಿಂಗಾಲುಗಳು ಕಾರಿನಿಂದ ಹೊರಗೆ ಬಂದಿರುವುದು ವೀಡಿಯೋದಲ್ಲಿ ಕಾಣಿಸುತ್ತಿದೆ. ಆದರೆ ದೇಹದ ಉಳಿದ ಭಾಗ ಕಾರಿನೊಳಗೆ ನುಗ್ಗಿ ಹೋಗಿ ಸಿಲುಕಿಕೊಂಡಿದ್ದು, ಇದರಿಂದ ನೋವು ತಾಳಲಾಗದೇ ಒಂಟೆ ಅರಚಾಡಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಯಾವುದೇ ತಳ್ಳುಗಾಡಿಗೆ ಈ ಒಂಟೆಯನ್ನು ಕಟ್ಟಿರಲಿಲ್ಲ, ಸಾಮಾನ್ಯವಾಗಿ ಇಂತಹ ಗಾಟಿಗಳನ್ನು ಎಳೆದೊಯ್ಯುವ ಒಂಟೆಗಳಿಗೆ ರೇಡಿಯಂ ಸ್ಟಿಕ್ಕರ್‌ಗಳನ್ನು ಅಳವಡಿಸಲಾಗುತ್ತದೆ. ಆದರೆ ಇಲ್ಲಿ ಯಾವುದೇ ರೇಡಿಯಂ ಸ್ಟಿಕ್ಕರ್‌ಗಳು ಇರದ ಕಾರಣ ರಸ್ತೆಯಲ್ಲಿ ವೇಗವಾಗಿ ಬರುತ್ತಿದ್ದ ಕಾರಿಗೆ ಒಂಟೆ ಇರುವುದು ಕಾಣಿಸದೇ ಡಿಕ್ಕಿ ಹೊಡೆದಿದೆ. ಹಿಂದಿನಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೇಲೆ ಹಾರಿದಂತಾಗಿ ಒಂಟೆ ಸೀದಾ ಬಂದು ಕಾರಿನ ಮೇಲೆ ಬಿದ್ದಿದೆ. ಈ ವೀಡಿಯೋ ಈಗ ವೈರಲ್ ಆಗಿದೆ.
ಹೆಚ್ಚು ವೇತನದ ಆಸೆ ತೋರಿಸಿ ವಿಜಯಪುರದ ಇಬ್ಬರ ಯುವಕರಿಗೆ ಕುವೈತ್‌ನಲ್ಲಿ ಒಂಟೆ ಕಾಯೋ ಕೆಲ್ಸ!
राजस्थान : हनुमानगढ़ जिले में ऊंट और कार का एक्सीडेंट। कार की विंड स्क्रीन में फंसा ऊंट, चोटिल हुआ। कार वाले सेफ हैं। pic.twitter.com/IhQPxmF0l9
— Sachin Gupta (@SachinGuptaUP)
ವಿಶ್ವದ ಅತಿ ಎತ್ತರದ ಜಿಪ್ ಲೈನಲ್ಲಿ ಒಂಟೆಯ ಒಂಟಿ ಸವಾರಿ !