Congress Loksabha Members: ಜನತಾ ಪ್ರಾತಿನಿಧ್ಯ (RP) ಕಾಯಿದೆ ಸೆಕ್ಷನ್ 123, ಚುನಾವಣೆಯ ಸಮಯದಲ್ಲಿ ಭ್ರಷ್ಟ ಆಚರಣೆಗಳ ಕುರಿತು ವಿವರಿಸುತ್ತದೆ. ಈ ಕಾಯಿದೆ ಪ್ರಕಾರ, ಚುನಾವಣೆ ಸಮಯದಲ್ಲಿ ಹಣ ಅಥವಾ ಭರವಸೆ ಅಥವಾ ಉಡುಗೊರೆ ನೀಡಿ ತಮ್ಮ ಪರವಾಗಿ ಪ್ರೇರೆಪಿಸುವುದು ಅಪರಾಧವಾಗುತ್ತದೆ.
ನವದೆಹಲಿ: ಕಾಂಗ್ರೆಸ್ ಚಿಹ್ನೆಯಡಿಯಲ್ಲಿ ಗೆಲುವು ಸಾಧಿಸಿರುವ ಎಲ್ಲಾ 99 ಚುನಾಯಿತ ಅಭ್ಯರ್ಥಿಗಳನ್ನು (Congress Elected Members) ಅನರ್ಹಗೊಳಿಸಬೇಕೆಂದು ದೆಹಲಿ ಮೂಲದ ವಕೀಲರೊಬ್ಬರು ಚುನಾವಣಾ ಆಯೋಗಕ್ಕೆ (Election Commission of India) ದೂರು ಸಲ್ಲಿಕೆ ಮಾಡಿದ್ದಾರೆ. ವಕೀಲ ವಿಭೋರ್ ಆನಂದ್ ಈ ಸಂಬಂಧ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದು, ವಿಷಯವನ್ನು ಗಂಭೀರವಾಗಿ ಪರಿಗಣಿಸುವಂತೆ ಆಗ್ರಹಿಸಿದ್ದಾರೆ. 1951 ರ ಸೆಕ್ಷನ್ 123(1) ಅಡಿಯಲ್ಲಿ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರದಲ್ಲಿ (Congress Elections Campaign) ತಮಗೆ ಮತ ಹಾಕಿದ್ರೆ ಒಂದು ಲಕ್ಷ ರೂಪಾಯಿ ನೀಡಲಾಗುವುದು ಎಂದು ಹೇಳಿತ್ತು. ಇದು ಮತದಾರರಿಗೆ ಲಂಚ (Bribe) ನೀಡುವದಾಗಿದೆ. ಇದು ಸಂಪೂರ್ಣ ಭ್ರಷ್ಟ ಆಚರಣೆಗಳಿಗೆ ಸಮಾನವಾಗಿದ್ದು, ಕಾಂಗ್ರೆಸ್ ಅಪರಾಧ ಎಸಗಿದೆ ಎಂದು ವಕೀಲ ವಿಭೋರ್ ಅನಂದ್ ಹೇಳುತ್ತಾರೆ.
ಜನತಾ ಪ್ರಾತಿನಿಧ್ಯ (RP) ಕಾಯಿದೆ ಸೆಕ್ಷನ್ 123, ಚುನಾವಣೆಯ ಸಮಯದಲ್ಲಿ ಭ್ರಷ್ಟ ಆಚರಣೆಗಳ ಕುರಿತು ವಿವರಿಸುತ್ತದೆ. ಈ ಕಾಯಿದೆ ಪ್ರಕಾರ, ಚುನಾವಣೆ ಸಮಯದಲ್ಲಿ ಹಣ ಅಥವಾ ಭರವಸೆ ಅಥವಾ ಉಡುಗೊರೆ ನೀಡಿ ತಮ್ಮ ಪರವಾಗಿ ಪ್ರೇರೆಪಿಸುವುದು ಅಪರಾಧವಾಗುತ್ತದೆ. ಯಾವುದೇ ವ್ಯಕ್ತಿ ತನ್ನ ಅಭ್ಯರ್ಥಿಯ ಸೂಚನೆ ಅಥವಾ ಸಮ್ಮತಿ ಮೇರೆಗೆ ಚುನಾವಣೆಗೆ ನಿಲ್ಲದಂತೆ/ ಚುನಾವಣೆಯಿಂದ ಹಿಂದೆ ಸರಿಯುವಂತೆ/ ತಮ್ಮ ಪರವಾಗಿ ಮತದಾನ ಮಾಡಲು ಒತ್ತಾಯಿಸೋದು/ ಮತದಾನ ಪ್ರಕ್ರಿಯೆಯಿಂದ ಹಿಂದೆ ಸರಿಯುವಂತೆ ಮಾಡೋದು. ಈ ಎಲ್ಲಾ ಪ್ರಕ್ರಿಯೆಯೆ ಪ್ರತಿಫಲವಾಗಿ ಉಡುಗೊರೆ/ಭರವಸೆ/ಹಣ ನೀಡುವುದು ಅಪರಾಧವಾಗುತ್ತದೆ.
ಚುನಾವಣೆ ಬಳಿಕ ಮತ್ತೊಂದು ಯಾತ್ರೆ ಘೋಷಿಸಿದ ಕಾಂಗ್ರೆಸ್
1951 ರ ಸೆಕ್ಷನ್‌ಗಳ ಅಡಿಯಲ್ಲಿ ಲಂಚ
ಕಾಂಗ್ರೆಸ್ ಪರವಾಗಿ ಮತ ಹಾಕಿದ್ರೆ ಗೆದ್ದ ನಂತರ ಮಹಿಳೆಯರ ಖಾತೆಗೆ ಒಂದು ಲಕ್ಷ ರೂಪಾಯಿ ಹಾಕಲಾಗುಗವುದು ಎಂದು ರಾಹುಲ್ ಗಾಂಧಿ ಹೇಳಿದ್ದರು. ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಗೆದ್ದ ನಂತರ ಪ್ರತಿ ತಿಂಗಳು 8,500 ರೂ.ಯಂತೆ ವಾರ್ಷಿಕವಾಗಿ 1 ಲಕ್ಷ ರೂಪಾಯಿ ಹಣ ಖಟಾಖಟ್ ಎಂದು ನಿಮ್ಮ ಖಾತೆಗೆ ಜಮೆ ಆಗುತ್ತದೆ ಎಂದು ಹಲವು ಭಾಷಣಗಳಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಕಾಂಗ್ರೆಸ್ ಹಲವು ಕಡೆ ಗ್ಯಾರಂಟಿ ಕಾರ್ಡ್‌ಗಳನ್ನು ವಿತರಣೆ ಮಾಡಿತ್ತು. ಇದು ಪ್ರಜಾಪ್ರತಿನಿಧಿ ಕಾಯ್ದೆ, 1951 ರ ಸೆಕ್ಷನ್‌ಗಳ ಅಡಿಯಲ್ಲಿ ಲಂಚ ಆಗುತ್ತೆ ಎಂಬುದನ್ನು ವಿಭೋರ್ ಆನಂದ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸೆಕ್ಷನ್ 123 ರ ಅಡಿಯಲ್ಲಿ ಅಪರಾಧ
ಜನತಾ ಪ್ರಾತಿನಿಧ್ಯ (RP) ಕಾಯಿದೆ ಸೆಕ್ಷನ್ 123 ಪ್ರಕಾರ ಚುನಾವಣೆ ಪ್ರಚಾರದಲ್ಲಿ ಭರವಸೆಗಳನ್ನು ಓದಿದ್ರೆ ಸಾಕಿತ್ತು. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮಹಿಳಾ ಮತದಾರರನ್ನು ಸೆಳೆಯಲು ಪ್ರಯತ್ನಿಸಿದರು. ಇದು ಭ್ರಷ್ಟಾಚಾರದ ನೆರಳಿನಲ್ಲಿ ಬರುತ್ತದೆ. ಮಹಿಳಾ ಮತದಾರರಿಗೆ ಲಂಚದ ಆಮಿಷವನ್ನು ನೀಡಲಾಗಿತ್ತು. ಕಾಂಗ್ರೆಸ್ ಪಕ್ಷ ಮತ್ತು ಸದಸ್ಯರು ಸೆಕ್ಷನ್ 123 ರ ಅಡಿಯಲ್ಲಿ ಅಪರಾಧ ಮಾಡಿದ್ದಾರೆ ಎಂಬುದು ಸ್ಪಷ್ಟ ಎಂದು ವಿಭೋರ್ ಆನಂದ್ ವಾದಿಸುತ್ತಾರೆ. ಅದರಲ್ಲಿಯೂ ಕಾಂಗ್ರೆಸ್ ಬಡ ಮುಸ್ಲಿಂ ಮಹಿಳಾ ಮತದಾರರನ್ನು ಸೆಳೆಯಲು ಈ ಆಮೀಷ ನೀಡಿತ್ತು. ಅಂಚೆ ಕಚೇರಿ ಮತ್ತು ಕಾಂಗ್ರೆಸ್ ಆಫಿಸ್‌ಗಳ ಮುಂದೆ ಮಹಿಳಾ ಮತದಾರರು ಹಣಕ್ಕಾಗಿ ಕ್ಯೂ ನಲ್ಲಿ ನಿಂತಿರುವ ಮಾಧ್ಯಮಗಳು ವರದಿ ಮಾಡಿವೆ ಎಂಬುದನ್ನು ವಿಭೋರ್ ಆನಂದ್ ಉಲ್ಲೇಖಿಸುತ್ತಾರೆ.
ಮೋದಿ 3.O ಸಂಪುಟದಲ್ಲಿ ಅಣ್ಣಾಮಲೈ? ಸಿಂಗಂಗೆ ಸಿಗುವ ಖಾತೆ ಯಾವುದು?
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ವಿರುದ್ಧ ಚುನಾವಣಾ ಆಯೋಗ ತನಿಖೆ ಆರಂಭಿಸಬೇಕು. ಜನತೆಗೆ ಲಂಚದ ಆಮಿಷ ನೀಡಿ ಗೆಲುವು ಸಾಧಿಸಿರುವ ಕಾಂಗ್ರೆಸ್‌ನ 99 ಸದಸ್ಯರನ್ನು ಅನರ್ಹಗೊಳಿಸಬೇಕು ಎಂದು ವಕೀಲರಾದ ವಿಭೋರ್ ಆನಂದ್ ಆಗ್ರಹಿಸುತ್ತಾರೆ.