ಮಹಿಳಾ ಬಲ: ಗಣರಾಜ್ಯೋತ್ಸವ ಪರೇಡ್ ಮುನ್ನಡೆಸಿದ ಕ್ಯಾಪ್ಟನ್ ತಾನ್ಯಾ!

Suvarna News   | ANI
Published : Jan 26, 2020, 04:39 PM ISTUpdated : Jan 26, 2020, 05:15 PM IST
ಮಹಿಳಾ ಬಲ: ಗಣರಾಜ್ಯೋತ್ಸವ ಪರೇಡ್ ಮುನ್ನಡೆಸಿದ ಕ್ಯಾಪ್ಟನ್ ತಾನ್ಯಾ!

ಸಾರಾಂಶ

ಸೇನೆಯಲ್ಲಿ ವೃದ್ಧಿಸುತ್ತಿದೆ ಮಹಿಳಾ ಬಲ| ಗಣರಾಜ್ಯೋತ್ಸವ ಪರೇಡ್’ನಲ್ಲಿ ಗಮನ ಸೆಳೆದ ಕ್ಯಾ. ತಾನ್ಯಾ ಶೆರ್ಗಿಲ್|  ಕಾರ್ಪ್ಸ್ ಆಫ್ ಸಿಗ್ನಲ್ಸ್‌’ನ ತುಕಡಿ ಮುನ್ನಡೆಸಿದ ಕ್ಯಾ. ತಾನ್ಯಾ| ಆರ್ಮಿ ಡೇ ಪೆರೇಡ್‌ನಲ್ಲಿ ಅಡ್ಜುಟಂಟ್ ಆಗಿ ನೇಮಕಗೊಂಡಿದ್ದ ಕ್ಯಾ. ತಾನ್ಯಾ| 

ನವದೆಹಲಿ(ಜ.26): ಈ ಬಾರಿಯ ಗಣರಾಜ್ಯೋತ್ಸವ ದೇಶದ ಮಹಿಳಾ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದ್ದು ವಿಶೇಷ. ಆಧುನಿಕ ಮಹಿಳೆ ಈ ದೇಶದ ಗಡಿ ಕಾಯುವಲ್ಲಿ ಸಶಕ್ತಳಾಗಿದ್ದಾಳೆ ಎಂಬ ಸಂದೇಶ ರಾಜ್‌ಪಥ್ ದಿಂದ ರವಾನೆಯಾಗಿದೆ.

ಕ್ಯಾಪ್ಟನ್ ತಾನ್ಯಾ ಶೆರ್ಗಿಲ್ ನವದೆಹಲಿಯಲ್ಲಿ ನಡೆದ 71ನೇ ಗಣರಾಜ್ಯೋತ್ಸವದಲ್ಲಿ ಕಾರ್ಪ್ಸ್ ಆಫ್ ಸಿಗ್ನಲ್ಸ್‌’ನ ತುಕಡಿಯನ್ನು ಮುನ್ನಡೆಸಿ ಇತಿಹಾಸ ನಿರ್ಮಿಸಿದ್ದಾರೆ.

ಹಿಮ ಪರ್ವತ ಗೆದ್ದ ಯೋಧರು: 17 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದರು!

ಕಾರ್ಪ್ಸ್ ಆಫ್ ಸಿಗ್ನಲ್ಸ್‌’ನ ತುಕಡಿ ರಾಷ್ಟ್ರಪತಿಗಳ ಸಮ್ಮುಖ ಬರುತ್ತಿದ್ದಂತೇ ಸಭಿಕರೆಲ್ಲಾ ಎದದು ನಿಂತು ಚಪ್ಪಾಳೆ ತಟ್ಟಿದ್ದು ವಿಶೇಷವಾಗಿತ್ತು. ಕ್ಯಾಪ್ಟನ್ ತಾನ್ಯಾ ಶೆರ್ಗಿಲ್ ಈ ತುಕಡಿಯ ಸಂಚಾಲಕರಾಗಿದ್ದರು.

ಉಗ್ರಾತಂಕ ನಡುವೆಯೇ 71ನೇ ಗಣರಾಜ್ಯೋತ್ಸವ!

ಈ ತಿಂಗಳ ಆರಂಭದಲ್ಲಿ ಆರ್ಮಿ ಡೇ ಪೆರೇಡ್‌ನಲ್ಲಿ ಅಡ್ಜುಟಂಟ್ ಆಗಿ ತಾನ್ಯಾ ಶೆರ್ಗಿಲ್ ಆಯ್ಕೆಯಾಗಿದ್ದರು. ಅಡ್ಜುಟಂಟ್ ಆಗಿ ಆಯ್ಕೆಗೊಂಡ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಯನ್ನು ಕ್ಯಾಪ್ಟನ್ ತಾನ್ಯಾ ಶೆರ್ಗಿಲ್ ಮುಡಿಗೇರಿಸಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!