ಇದು ಶಾಂತಿಯ ಗೂಡು: ಮುಸ್ಲಿಂ ಮಕ್ಕಳಿಂದ ಶ್ಲೋಕ, ಹಿಂದೂ ಮಕ್ಕಳಿಂದ ಉರ್ದು ಹಾಡು!

Published : Jan 26, 2020, 03:01 PM IST
ಇದು ಶಾಂತಿಯ ಗೂಡು: ಮುಸ್ಲಿಂ ಮಕ್ಕಳಿಂದ ಶ್ಲೋಕ, ಹಿಂದೂ ಮಕ್ಕಳಿಂದ ಉರ್ದು ಹಾಡು!

ಸಾರಾಂಶ

ಹಿಂದೂ ವಿದ್ಯಾರ್ಥಿಗಳ ಬಾಯಲ್ಲಿ ಉರ್ದು ಹಾಡು, ಮುಸ್ಲಿಂ ಮಕ್ಕಳ ಬಾಯಲ್ಲಿ ಶ್ಲೋಕ| ಕೋಮು ಸೌಹಾರ್ದತೆಯ ಪಾಠ ಕಲಿಸುತ್ತಿದೆ ಈ ಮದರಸಾ| ಮುಸ್ಲಿಂ ಸಮುದಾಯ ಮಾತ್ರವಲ್ಲ ಸಮಾಜವೂ ಉದ್ದಾರವಾಗಬೇಕು ಎಂಬುವುದೇ ಇಲ್ಲಿನ ಹಿರಿಯರ ಆಶಯ

ಲಹಾಬಾದ್[ಜ.26]: ಪೌರತ್ವ ಕಾಯ್ದೆ, NRC ಮೊದಲಾದ ವಿಚಾರಗಳಿಂದ ಹಿಂದೂ ಮುಸಲ್ಮಾನರ ನಡುವೆ ಒಂದು ರೀತಿ ಬಿರುಕು ಮೂಡಲಾರಂಭಿಸಿದೆ. ಹೀಗಿರುವಾಗ ಗೋಡಾ ಜಿಲ್ಲೆಯ ವಜೀರ್ ಗಂಜ್ ಹೊಸ ಭಾಷ್ಯ ಬರೆಯುತ್ತಿದೆ. ಇಲ್ಲಿನ ಒಂದು ಮದರಸಾದಲ್ಲಿ ಹಿಂದೂ ಮಕ್ಕಳು ಉರ್ದು ಕಲಿಯುತ್ತಿದ್ದರೆ, ಮುಸ್ಲಿಂ ಮಕ್ಕಳ ಕಂಠದಲ್ಲಿ 'ಸಂಸ್ಕೃತ ಶ್ಲೋಕ'  ಗುನುಗುಡುತ್ತಿದೆ.

ಸಂಸ್ಕೃತ ಹಾಗೂ ಉರ್ದು ಕಲಿಯುವ ವಿಚಾರದಲ್ಲಿ ಸರ್ಕಾರ ಹಾಗು ಹಲವಾರು ಸಂಸ್ಥೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗಿರುವಾಗ ವಜೀರ್ ಗಂಜ್ ನ ಈ ಮದರಸಾ ತನ್ನ ವಿನೂತನ ಪ್ರಯೋಗದಿಂದ ಚರ್ಚೆಯಲ್ಲಿದೆ. ಇಲ್ಲಿ ಹಿಂದೂ ವಿದ್ಯಾರ್ಥಿಗಳ ಸಂಖ್ಯೆ ಕೂಡಾ ಬಹಳಷ್ಟಿದೆ. ವಿಕಾಸ್ ಖಂಡ್ ನಲ್ಲಿರುವ ಮದರಸಾ ಗುಲ್ಶನ್- ಎ- ಬಾಗ್ದಾದ್ ಮುಸ್ಲಿಂ ಮವಿದ್ಯಾರ್ಥಿಗಳಿಗೆ ಸಂಸ್ಕೃತ ಶಿಕ್ಷಣ ನೀಡಿ ಭಿನ್ನವಾಗಿ ಗುರುತಿಸಿಕೊಂಡಿದೆ. 

ಇಲ್ಲಿ ಸುಮಾರು 230 ವಿದ್ಯಾರ್ಥಿಗಳಿದ್ದು, 30ಕ್ಕೂ ಅಧಿಕ ಹಿಂದೂ ವಿದ್ಯಾರ್ಥಿಗಳು ಉರ್ದು ಕಲಿಯುತ್ತಿದ್ದರೆ, 50ಕ್ಕೂ ಅಧಿಕ ಮುಸ್ಲಿಂ ಮಕ್ಕಳು ಸಂಸ್ಕೃತ ಕಲಿಯುವಲ್ಲಿ ನಿರತರಾಗಿದ್ದಾರೆ. ಇಷ್ಟೇ ಅಲ್ಲ, ಇಲ್ಲಿನ ಹಿಂದೂ ಹಾಗೂ ಮುಸ್ಲಿಂ ಮಕ್ಕಳು ಉರ್ದು ಹಾಗೂ ಸಂಸ್ಕೃತ ಹೊರತುಪಡಿಸಿ ಪಾರ್ಸಿ, ಹಿಂದಿ, ಆಂಗ್ಲ, ಗಣಿತ ಹಾಗೂ ವಿಜ್ಞಾನವನ್ನೂ ಕಲಿಯುತ್ತಿದ್ದಾರೆ. 

ಮದರಸಾ ಎಂದ ಕೂಡಲೇ ಜನ ಸಾಮಾನ್ಯರಲ್ಲಿ ಉರ್ದು, ಅರೇಬಿಕ್ ಸಂಬಂಧಿಸಿದ ಶಿಕ್ಷಣ ನೀಡಬಹುದೆಂಬ ಅಭಿಪ್ರಾಯ ಹುಟ್ಟಿಕೊಳ್ಳುತ್ತದೆ. ಹೀಗಿರುವಾಗ ಮುಸ್ಲಿಂ ಸಂಪ್ರದಾಯದ ಅಭಿವೃದ್ಧಿಯೊಂದಿಗೆ ಸಮಾಜದ ಏಳಿಗೆ ಕೂಡಾ ಮುಖ್ಯ ಎಂಬುವುದು ಇಲ್ಲಿನ ಮುಸಲ್ಮಾನರ ಮಾತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು
India Latest News Live: ಆಯೋಧ್ಯೆಯ ಬಾಬ್ರಿ ಮಸೀದಿಯನ್ನೇ ಹೋಲುವಂತಹ ಮಸೀದಿಗೆ ಶಂಕು ಸ್ಥಾಪನೆ