ಬ್ರಿಟಿಷರ ಕಾಲದ ಐತಿಹಾಸಿಕ .303 ರೈಫಲ್‌ಗೆ ಗುಡ್ ಬೈ ಹೇಳಿದ ಪೊಲೀಸ್ ಇಲಾಖೆ!

Suvarna News   | Asianet News
Published : Jan 26, 2020, 01:35 PM IST
ಬ್ರಿಟಿಷರ ಕಾಲದ ಐತಿಹಾಸಿಕ  .303 ರೈಫಲ್‌ಗೆ ಗುಡ್ ಬೈ ಹೇಳಿದ ಪೊಲೀಸ್ ಇಲಾಖೆ!

ಸಾರಾಂಶ

ಐತಿಹಾಸಿಕ .303 ರೈಫಲ್’ಗೆ ಗುಡ್ ಬೈ ಹೇಳಿದ ಯುಪಿ ಪೊಲೀಸ್| ಬ್ರಿಟಿಷ್ ಭಾರತದ ಹೆಮ್ಮೆಯ .303 ರೈಫಲ್| .303 ರೈಫಲ್ ಬಳಕೆ ನಿಲ್ಲಿಸಿದ ಉತ್ತರ ಪ್ರದೇಶ ಪೊಲೀಸರು| ಆಧುನಿಕ ಬಂದೂಕು ದಾಸ್ತಾನಿನ ಮೊರೆ ಹೋದ ಯುಪಿ ಪೊಲೀಸರು| ಆಂತರಿಕ ಭದ್ರತೆಗೆ ಪೊಲೀಸರ ಅಚ್ಚುಮೆಚ್ಚಿನ .303 ರೈಫಲ್| 1945ರಲ್ಲಿ ಉತ್ತರಪ್ರದೇಶ ಪೊಲೀಸ್ ಇಲಾಖೆಗೆ .303 ರೈಫಲ್ ಪರಿಚಯ| .303 ರೈಫಲ್ ಇತಿಹಾಸ ಮೆಲಕು ಹಾಕಿದ ಮಾಜಿ ಡಿಜಿಪಿ ಬ್ರಿಜ್ ಲಾಲ್|

ಲಕ್ನೋ(ಜ.26): .303 ರೈಫಲ್ ಭಾರತೀಯ ಪೊಲೀಸರ ಹೆಮ್ಮೆಯ ಪ್ರತೀಕ. ಸ್ವಾತಂತ್ರ್ಯ ಪೂರ್ವದಿಂದಲೂ ಆಂತರಿಕ ಭದ್ರತೆಗೆ ಪೊಲೀಸರು ಮೆಚ್ಚಿಕೊಂಡಿದ್ದ .303 ರೈಫಲ್, ಬ್ರಿಟಿಷ್ ಭಾರತದ ಕೊಡುಗೆ.

ಈ ಐತಿಹಾಸಿಕ .303 ರೈಫಲ್’ಗೆ ಇದೀಗ ಉತ್ತರಪ್ರದೇಶದ ಪೊಲೀಸ್ ಇಲಾಖೆ ಗುಡ್ ಬೈ ಹೇಳಿದೆ. ಈ ಮೂಲಕ ಹಲವಾರು ದಶಕಗಳಿಂದ ಪೊಲೀಸರ ಹೆಗಲ ಮೇಲೆ ರಾರಾಜಿಸುತ್ತಿದ್ದ .303 ರೈಫಲ್ ಇದೀಗ ಇತಿಹಾಸ ಸೇರಿದೆ. 

ಹೌದು, 71ನೇ ಗಣರಾಜ್ಯೋತ್ಸವದ ಅಂಗವಾಗಿ .303 ರೈಫಲ್’ಗಳಿಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ಉತ್ತರಪ್ರದೇಶ ಪೊಲೀಸ್ ಇಲಾಖೆ ಬಂದಿದೆ.

ಆಧುನಿಕ ಭಾರತದ ಭದ್ರತೆಗೆ .303 ರೈಫಲ್ ಸೂಕ್ತವಲ್ಲ ಎಂಬ ನಿರ್ಣಯಕ್ಕೆ ಬಂದಿರುವ ಯುಪಿ ಪೊಲೀಸ್ ಇಲಾಖೆ, ಇದರ ಬದಲು ಆಧುನಿಕ ಬಂದೂಕುಗಳ ದಾಸ್ತಾನಿನ ಮೊರೆ ಹೋಗಿದೆ.

ಚೀನಾ ಗಡಿಯ ಯೋಧರಿಗೆ 73000 ಅಮೆರಿಕನ್‌ ರೈಫಲ್‌

ಈ ಕುರಿತು ಮಾಹಿತಿ ನೀಡಿರುವ ಯುಪಿಯ ಮಾಜಿ ಪೊಲೀಸ್ ಮಹಾ ನಿರ್ದೇಶಕ ಬ್ರಿಜ್ ಲಾಲ್, ಐತಿಹಾಸಿಕ .303 ರೈಫಲ್’ಗಳ ಬಳಕೆ ನಿಲ್ಲಿಸಿರುವುದು ಖೇದಕರವಾದರೂ, ಇಲಾಖೆಯ ಆಧುನೀಕರಣ ಪ್ರಕ್ರಿಯೆಗೆ ಇದು ಅನಿವಾರ್ಯ ನಿರ್ಧಾರ ಎಂದು ಹೇಳಿದ್ದಾರೆ.

ತಮ್ಮ ಸೇವಾ ಅವಧಿಯಲ್ಲಿ .303 ರೈಫಲ್’ಗಳನ್ನು ಬಳಸಿ ಹಲವು ಅಪಾರಾಧ ಪ್ರಕರಣಗಳನ್ನು ಮಟ್ಟ ಹಾಕಿದ್ದರ ಕುರಿತು ಮಾಜಿ ಡಿಜಿಪಿ ಬ್ರಿಜ್ ಲಾಲ್ ಮೆಲುಕು ಹಾಕಿದ್ದಾರೆ.

.303 ಬೋಲ್ಟ್ ಆಕ್ಷನ್ ಪುನರಾವರ್ತಿತ ವ್ಯವಸ್ಥೆಯ ರೈಫಲ್ ಆಗಿದ್ದು, ಒಂದು ಬಾರಿ ಗುಂಡನ್ನು ಹೊಡೆದು ಬಳಿಕ ಮತ್ತೆ ಬೋಲ್ಟ್’ನ್ನು ಹಿಂದಕ್ಕೆ ಎಳೆದು ಮತ್ತೊಂದು ಗುಂಡನ್ನು ತುಂಬಿ ಹೊಡೆಯಬೇಕು.

ಒಟ್ಟು 5 ಕೆಜಿ ತೂಕದ .303 ರೈಫಲ್ ಉತ್ತರಪ್ರದೇಶವೂ ಸೇರಿದಂತೆ ಭಾರತೀಯ ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿದ್ದಂತೂ ಸುಳ್ಳಲ್ಲ.

ಮೋದಿ ಕೈಯಲ್ಲಿ ಅಸ್ಸಾಲ್ಟ್ ರೈಫಲ್: ಸಿಕ್ಕ ಬಲಕ್ಕೆ ಸೈನಿಕರಿಗೆ ಖುಷಿಯಾಗಿದೆ ಫುಲ್!

1945ರಲ್ಲಿ ಅಂದಿನ ಬ್ರಿಟಷ್ ಆಡಳಿತ ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ .303 ರೈಫಲ್’ಗಳನ್ನು ಪರಿಚಯಿಸಿತು. ಇದಕ್ಕೂ ಮೊದಲು ಈ ರೈಫಲ್’ಗಳನ್ನು ಕೇವಲ ಬ್ರಿಟಿಷ್ ಭಾರತದ ಸೇನೆಯಲ್ಲಿ ಮಾತ್ರ ಬಳಸಲಾಗುತ್ತಿತ್ತು.

ಬಳಿಕ ಹಂತ ಹಂತವಾಗಿ ದೇಶದ ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಗೆ .303 ರೈಫಲ್’ಗಳನ್ನು ಪರಿಚಯಿಸಲಾಯಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು