
ಪಂಜಾಬ್(ಜು.23): ಕೇಂದ್ರದ 3 ಕೃಷಿ ಕಾಯ್ದೆ ವಿರುದ್ಧ ರೈತ ಸಂಘಟನೆಗಳು ನಡೆಸುತ್ತಿರುವ ನಿರಂತರ ಪ್ರತಿಭಟನೆಗೆ ಪರ ವಿರೋಧಗಳು ಇವೆ. ಕಳೆದ ವರ್ಷ ನವೆಂಬರ್ ತಿಂಗಳಿನಿಂದ ದೆಹಲಿ ಗಡಿಯಲ್ಲಿ ಆರಂಭಗೊಂಡ ರೈತ ಪ್ರತಿಭಟನೆ ಇನ್ನೂ ನಡೆಯುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯ ಅಸಲಿ ಕತೆ ಇದೀಗ ಬಹಿರಂಗವಾಗಿದೆ. ಬಿಜೆಪಿ ವಿರುದ್ಧ ರೈತನ್ನು ಎತ್ತಿಕಟ್ಟಿರುವುದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್.
ಕೇಂದ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಲು ಕಾರಣ ಅಮರಿಂದರ್ ಸಿಂಗ್. ಈ ಮಾತನ್ನು ನಾವು ಹೇಳುತ್ತಿಲ್ಲ. ಸ್ವತಃ ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸುನೀಲ್ ಜಕಾರ್ ರೈತ ಪ್ರತಿಭಟನೆ ಹಿಂದಿನ ಕರಾಳ ಸತ್ಯ ಬಹಿರಂಗಪಡಿಸಿದ್ದಾರೆ.
"
ಬಿಜೆಪಿ ವಿರುದ್ಧ ರೈತರನ್ನು ಪ್ರಚೋದಿಸಿ , ರೈತ ಪ್ರತಿಭಟನೆಗೆ ನಾಂದಿ ಹಾಡದಿದ್ದರೆ ಅವರ(ರೈತರ) ಕೋಪವನ್ನು ಪಂಜಾಬ್‌ನಲ್ಲಿ ನಾವು ಎದುರಿಸಬೇಕಾಗಿತ್ತು. ಆದರೆ ಸಿಎಂ ಅಮರಿಂದರ್ ಸಿಂಗ್, ಕೃಷಿ ಕಾಯ್ದೆ ಹೆಸರಿನಲ್ಲಿ ರೈತರನ್ನು ಬಿಜೆಪಿ ವಿರುದ್ಧ ಪ್ರಚೋದಿಸಿ ರೈತರ ಬೃಹತ್ ಪ್ರತಿಭಟನೆಗೆ ಕಾರಣರಾದರು. ಇದು ನಮ್ಮ ಸಿಎಂ ಅವರ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ ಎಂದು ಸುನಿಲ್ ಜಕಾರ್ ಹೇಳಿದ್ದಾರೆ.
ರೈತ ಪ್ರತಿಭಟನೆ ಹಾಗೂ ರೈತ ಸಂಘಟನೆಗಳ ಬೇಡಿಕೆ ಸಾಕಷ್ಟು ಅನುಮಾನಗಳನ್ನು ಸೃಷ್ಟಿಸಿತ್ತು. ಕೃಷಿ ಕಾಯ್ದೆಯ ಯಾವ ಅಂಶ ತಿದ್ದುಪಡಿ ಮಾಡಬೇಕು ಅನ್ನೋ ಕೇಂದ್ರದ ಪ್ರಶ್ನೆಗೆ ಉತ್ತರಿಸಿದ ರೈತ ಸಂಘಟನೆ, ಸಂಪೂರ್ಣ ಕಾಯ್ದೆ ರದ್ದು ಮಾಡಲು ಪಟ್ಟು ಹಿಡಿದಿದೆ. ಈ ಕುರಿತು ರೈತರ 11 ಸಭೆಗಳನ್ನು ನಡೆಸಲಾಗಿದೆ.
ಎಲ್ಲಾ ಸಭೆಗಳು ವಿಫಲವಾಗಿದೆ. ರೈತ ಪ್ರತಿಭಟನೆ ಹೆಸರಿನಲ್ಲಿ ಟ್ರಾಕ್ಟರ್ ರ್ಯಾಲಿ ನಡೆಸಿದ ರೈತ ಸಂಘಟನೆಗಳು ಐತಿಹಾಸಿಕ ಕೆಂಪು ಕೋಟೆಗೆ ಮುತ್ತಿಗೆ ಹಾಕಿತ್ತು. ದೆಹಲಿ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿತ್ತು. ಸುಮಾರು 500ಕ್ಕೂ ಹೆಚ್ಚಿನ ಪೊಲೀಸರು ಈ ಟ್ರಾಕ್ಟರ್ ರ್ಯಾಲಿಯಲ್ಲಿ ಗಾಯಗೊಂಡಿದ್ದರು.
ಸದ್ಯ ಪ್ರತಿಭಟನೆ ಚುರುಕುಗೊಳಿಸಿರುವ ರೈತರು, ಸಂಸತ್ ಮುಂಭಾಗದಲ್ಲಿ ಪ್ರತಿಭಟನೆ ಆಯೋಜಿಸಿದ್ದರು. ಆದರೆ ಪೊಲೀಸರು ಅವಕಾಶ ನೀಡದ ಕಾರಣ ಇದೀಗ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ