ಭೀಕರ ಮಳೆ, ಪ್ರವಾಹಕ್ಕೆ ರಾಯಘಡದಲ್ಲಿ ಭೂಕುಸಿತ; 36 ಸಾವು,6 ಜಿಲ್ಲೆಯಲ್ಲಿ ರೆಡ್ ಅಲರ್ಟ್!

Published : Jul 23, 2021, 05:36 PM IST
ಭೀಕರ ಮಳೆ, ಪ್ರವಾಹಕ್ಕೆ ರಾಯಘಡದಲ್ಲಿ ಭೂಕುಸಿತ; 36  ಸಾವು,6 ಜಿಲ್ಲೆಯಲ್ಲಿ ರೆಡ್ ಅಲರ್ಟ್!

ಸಾರಾಂಶ

ಮಹಾರಾಷ್ಟ್ರದಲ್ಲಿ ಭೀಕರ ಮಳೆಯಿಂದ ಪ್ರವಾಹ ಸೃಷ್ಟಿ ರಾಯಘಡದಲ್ಲಿ ಭೂಕುಸಿತಕ್ಕೆ 36 ಮಂದಿ ಸಾವು ಕರ್ನಾಟಕದ ಹಲವೆಡೆ ಪ್ರವಾಹ, ತಗ್ಗು ಪ್ರದೇಶ ಮುಳುಗುಡೆ

ಮಹಾರಾಷ್ಟ್ರ(ಜು.23): ಈ ಬಾರಿ ಮುಂಗಾರು ಪ್ರವೇಶ ಕೊಂಚ ತಡವಾದರೂ ಅಬ್ಬರ ಹಿಂದಿಗಿಂತ ಜೋರಾಗಿದೆ. ಭಾರತದ ಹಲವು ರಾಜ್ಯಗಳಲ್ಲಿ ಭೀಕರ ಪ್ರವಾಹ ಸೃಷ್ಟಿಯಾಗಿದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿದೆ. ಜಲಾಶಯ ಅಪಾಯದ ಮಟ್ಟ ಮೀರಿದೆ. ಸತತ ಮಳೆ ಹಾಗೂ ಪ್ರವಾಹಕ್ಕೆ ಮಹಾರಾಷ್ಟ್ರದ ರಾಯಘಡದಲ್ಲಿ ಭೂಕುಸಿತ ಸಂಭವಿಸಿದೆ.

ನವಲಗುಂದ: ಬೆಣ್ಣೆಹಳ್ಳದಲ್ಲಿ ಸಿಲುಕಿರುವ 200 ಕುರಿ, 7 ಕುರಿಗಾಯಿಗಳ ರಕ್ಷಣೆಗೆ ಕಾರ್ಯಾಚರಣೆ

ರಾಯಘಡದ 3 ಕಡೆ ಭೂಕುಸಿತ ಸಂಭವಿಸಿದೆ. ಒಂದು ಭಾಗದಲ್ಲಿ 32 ಮತೃದೇಹಗಳನ್ನು ಹೊರಕ್ಕೆ ತೆಗೆಯಲಾಗಿದ್ದು ಇನ್ನುಳಿದ 2 ಕಡೆ 3 ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ. NDRF, ಭಾರತೀಯ ಸೇನೆ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. 

ಮುಂಬೈನಿಂದ 250 ಕಿ.ಮೀ ದೂರದಲ್ಲಿರುವ ರತ್ನಗಿರಿ ಜಿಲ್ಲೆಯಲ್ಲೂ ಭಾರಿ ಮಳೆಯಾಗಿದೆ.  ನೌಕಾಪಡೆಯ ಎರಡು ರಕ್ಷಣಾ ತಂಡಗಳು, 12 ಸ್ಥಳೀಯ ಪರಿಹಾರ ತಂಡಗಳು, ಕೋಸ್ಟ್‌ಗಾರ್ಡ್‌ನಿಂದ ಎರಡು, ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (NDRF)ಗಳನ್ನು ನಿಯೋಜಿಸಲಾಗಿದೆ. ನೌಕಾಪಡೆಯು ರಬ್ಬರ್ ದೋಣಿಗಳು, ಲೈಫ್ ಜಾಕೆಟ್‌ ಮೂಲಕ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಹಲವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. 

ರಾಜ್ಯದಲ್ಲಿ ಭಾರೀ ಮಳೆ : 12 ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ, ಭೂ ಕುಸಿತ

ಮಹಾರಾಷ್ಟ್ರದ 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.  ಮಹಾರಾಷ್ಟ್ರ ಕರಾವಳಿ ಕೊಂಕಣದ ರಾಯಘಡ, ರತ್ನಗಿರಿ ಹಾಗೂ ಸಿಂಧುದರ್ಗ್ ಜಿಲ್ಲೆ, ಪಶ್ಚಿಮ ಮಹಾರಾಷ್ಟ್ರದ ಪುಣೆ, ಸತಾರಾ, ಕೊಲ್ಹಾಪುರ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ರೆಡ್ ಅಲರ್ಟ್ ಘೋಷಿಸಿದೆ. 

ಕೊಲ್ಹಾಪುರ ಸೇರಿದಂತೆ ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಮಳೆ ಸುರಿಯುತ್ತಿರುವುದರಿಂದ, ಕರ್ನಾಟಕದ ಬೆಳಗಾವಿ ಸೇರಿದಂತೆ ಗಡಿ ಭಾಗದಲ್ಲಿ ಪ್ರವಾಹ ಉಂಟಾಗಿದೆ. ಮುಂಬೈ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ