ಟ್ವಿಟರ್ ಇಂಡಿಯಾ MDಗೆ ಕರ್ನಾಟಕ ಹೈಕೋರ್ಟ್ ರಿಲೀಫ್; ಬಂಧನ ಭೀತಿಯಿಂದ ಪಾರು!

By Suvarna NewsFirst Published Jul 23, 2021, 4:21 PM IST
Highlights
  • ಟ್ವಿಟರ್ ಎಂಡಿ ಹಾಗೂ ಉತ್ತರ ಪ್ರದೇಶ ಪೊಲೀಸರ ಜಟಾಪಟಿಗೆ ತಾತ್ಕಾಲಿಕ ಬ್ರೇಕ್
  • ವಿಚಾರಣೆಗೆ ಖುದ್ದು ಹಾಜರಾಗುವಂತೆ ಟ್ವಿಟರ್ MD ನೊಟೀಸ್ ನೀಡಿದ್ದ ಯುಪಿ ಪೊಲೀಸ್
  • ತನಿಖೆ ನೆಪದಲ್ಲಿ ಕಿರುಕುಳಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್

ಬೆಂಗಳೂರು(ಜು.23): ಉತ್ತರ ಪ್ರದೇಶ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಶ್ ಮಹೇಶ್ವರಿಗೆ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದೆ. ವಿಚಾರಣೆಗೆ ಖುದ್ದು ಹಾಜರಾಗುವಂತೆ ಯುಪಿ ಪೊಲೀಸರು ನೀಡಿದ್ದ ನೊಟೀಸ್ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದ ಮನೀಶ್‌ ಇದೀಗ ನಿರಾಳರಾಗಿದ್ದಾರೆ.

ವೃದ್ಧನಿಗೆ ಥಳಿತ: ಕೋಮುಬಣ್ಣ ಕೊಟ್ಟ ಟ್ವಿಟರ್, ಪತ್ರಕರ್ತರು, ಕೈ ನಾಯಕರ ವಿರುದ್ಧ FIR!

ಘಾಜಿಯಾಬಾದ್‌ನಲ್ಲಿ ಮುಸ್ಲಿಂ ವ್ಯಕ್ತಿಗೆ ಥಳಿಸಿದ ವಿಡಿಯೋ ಪ್ರಕರಣಕ್ಕೆ ಕೋಮು ಬಣ್ಣ ನೀಡಿದ ಆರೋಪಡಿ ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಇತ್ತ ಯುಪಿ ಪೋಲಿಸರು ಖುದ್ದು ಠಾಣೆಗೆ ಬಂದು ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಯುಪಿ ಪೊಲೀಸ್ ನಡೆ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದ ಮನೀಶ್, ತಾವು ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆ ಹಾಜರಾಗುವಂತೆ ಮನವಿ ಮಾಡಿಕೊಂಡಿದ್ದರು. 

ಭಾರತದ ನಕ್ಷೆ ಎಡವಟ್ಟು: ಟ್ವಿಟರ್ ಇಂಡಿಯಾ MD ಮನೀಷ್ ಮಹೇಶ್ವರಿಗೆ ಸಂಕಷ್ಟ!

ಈ ಪ್ರಕರಣ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಜಿ ನರೇಂದರ್ ನೇತೃತ್ವದ ಏಕ ಸದಸ್ಯ ಪೀಠ , ಯುಪಿ ಪೊಲೀಸರ ನೋಟಿಸ್‌ನ್ನು  ಸಿಆರ್ ಪಿಸಿ 41 A ಯಿಂಗ ಸಿಆರ್ ಪಿಸಿ 160 ಗೆ ಮಾರ್ಪಾಡು ಮಾಡಿದೆ. ಇದರಿಂದ  ಮನೀಶ್ ಮಹೇಶ್ವರಿಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಿದೆ. ಪ್ರಮುಖವಾಗಿ ಯುಪಿ ಪೊಲೀಸರ ಬಂಧನ ಭೀತಿಯಿಂದ ಮನೀಶ್ ಪಾರಾಗಿದ್ದಾರೆ.

ಭಾರತದ ಕಾನೂನಿಗೆ ತಲೆ ಬಾಗಿದ ಟ್ವಿಟರ್,ಕುಂದು ಕೊರತೆ ಅಧಿಕಾರಿ ನೇಮಕ

ಮನೀಶ್ ಮಹೇಶ್ವರಿ ಟ್ವಿಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಟ್ವಿಟರ್ ಸಂಸ್ಥೆಗೆ ಮನೀಶ್ ಮುಖ್ಯಸ್ಥರಲ್ಲ, ಆಡಳಿತದಲ್ಲೂ ಇವರ ಪಾತ್ರವಿಲ್ಲ. ಹೀಗಾಗಿ ಟ್ವಿಟರ್ ಕಂಟೆಂಟ್ ಮೇಲೆ ಇವರಿಗೆ ನಿಯಂತ್ರಣವಿರುವುದಿಲ್ಲ.  ಇಷ್ಟೇ ಅಲ್ಲ ಪ್ರಕರಣದಲಲ್ಲಿ ಮನೀಶ್ ಆರೋಪಿ ಎಂದು ಉಲ್ಲೇಖಿಸಿಲ್ಲ. ಹೀಗಾಗಿ ತನಿಖೆ ನೆಪದಲ್ಲಿ ಕಿರುಕುಳ ನೀಡಬಾರದು ಎಂದು ನ್ಯಾ.ಜಿ ನರೇಂದರ್ ಆದೇಶಿಸಿದ್ದಾರೆ.

click me!