ಮುದ್ದಾದ ಗೂಬೆಗಳ ಫ್ರಿ ವೆಡ್ಡಿಂಗ್‌ ಫೋಟೋಶೂಟ್ ... ಇಂಟರ್‌ನೆಟ್‌ನಲ್ಲಿ ವೈರಲ್

Suvarna News   | Asianet News
Published : Jan 20, 2022, 05:55 PM IST
ಮುದ್ದಾದ ಗೂಬೆಗಳ ಫ್ರಿ ವೆಡ್ಡಿಂಗ್‌ ಫೋಟೋಶೂಟ್ ... ಇಂಟರ್‌ನೆಟ್‌ನಲ್ಲಿ ವೈರಲ್

ಸಾರಾಂಶ

  ಗೂಬೆಗಳ ಮುದ್ದಾದ ಫೋಟೋ ಇಂಟರ್‌ನೆಟ್‌ನಲ್ಲಿ ವೈರಲ್‌ ವೆಡ್ಡಿಂಗ್‌ ಫೋಟೋ ಶೂಟ್ ಎಂದ ಐಎಫ್‌ಎಸ್‌ ಅಧಿಕಾರಿ ಅಶ್ವಿನ್ ಕೆಂಕರೆ ಕ್ಲಿಕ್ಕಿಸಿದ ಸುಂದರ ಫೋಟೋಗಳು

ಜೋಡಿ ಗೂಬೆಗಳ ಮುದ್ದು ಮುದ್ದು ಫೋಟೋಗಳು ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದ್ದು, ಈ ಸುಂದರ ಫೋಟೋಗಳಿಗೆ ನೆಟ್ಟಿಗರು ವಾಹ್‌ ಎಂದಿದ್ದಾರೆ. 
ಐಎಫ್‌ಎಸ್‌ ಅಧಿಕಾರಿ (IFS officer) ಮಧುಮಿತಾ ( Madhu Mitha) ಈ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿದ್ದು, ಇದು ಪ್ರೀ ವೆಡ್ಡಿಂಗ್‌ ಫೋಟೋ ಶೂಟ್ ಆಗಿರಬಹುದು ಎಂದು ಬರೆದು ಫೋಟೋ ಶೇರ್‌ ಮಾಡಿದ್ದಾರೆ. 

ಪ್ರೀ ವೆಡ್ಡಿಂಗ್ ಫೋಟೋಶೂಟ್‌ಗಳ ವಿಷಯಕ್ಕೆ ಬಂದರೆ, ಉಳಿದವರಿಗಿಂತ ಭಿನ್ನವಾಗಿರಲು ಜೋಡಿಗಳು ವಿವಿಧ ತಯಾರಿ ನಡೆಸುವುದು ಸಾಮಾನ್ಯ. ಇದಕ್ಕಾಗಿ ಅವರು ಏನೇನೋ ಕಸರತ್ತುಗಳನ್ನು ಕೂಡ ನಡೆಸುತ್ತಿರುತ್ತಾರೆ. ಆದರೆ ಈ ಬಾರಿ ವಿಶೇಷ ಅತಿಥಿಗಳ ಫೋಟೋಶೂಟ್‌ ನೆಟ್ಟಿಗರ ಹೃದಯ ಗೆದ್ದಿದೆ. 

ಮರದ ಕೊಂಬೆಯೊಂದರ ಮೇಲೆ ಕುಳಿತು, ಎರಡು ಪಕ್ಷಿಗಳು ಒಟ್ಟಿಗೆ ಕುಚುಕುಚು ಮಾಡುತ್ತಿರುವುದು ಈ ಫೋಟೋಗಳಲ್ಲಿ ಕಂಡು ಬಂದಿದೆ. ಒಂದು ಶಾಟ್‌ಗಾಗಿ ಕ್ಯಾಮೆರಾವನ್ನು ನೇರವಾಗಿ ನೋಡುವುದರಿಂದ ಹಿಡಿದು, ತುಟಿಗಳ ಮೇಲೆ ಮುತ್ತಿಕ್ಕಿದಂತೆ ಕಾಣುವವರೆಗೆ ಎರಡು ಎಳೆಯ ಗೂಬೆಗಳು ಪ್ರೀತಿ ಮಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಫೊಟೋಗಳು ಪ್ರೀತಿ ಮತ್ತು ವಾತ್ಸಲ್ಯದಿಂದ ಹೊರಹೊಮ್ಮಿವೆ.

ಮರ ಏರಿ ಕುಳಿತ ವಲಸೆ ಹಕ್ಕಿಗಳು... ಮನಮೋಹಕ ದೃಶ್ಯ ವೈರಲ್

ಮಹಾರಾಷ್ಟ್ರ(Maharashtra) ದ ಭಂಡಾರಾ ( Bhandara)ದ ತೆಗೆದ ಫೋಟೋಗಳು ಇವಾಗಿದ್ದು, ಎರಡು ಜೋಡಿ ಹಕ್ಕಿಗಳ ಪ್ರೇಮ ಕ್ಯಾಮರಾದಲ್ಲಿ ಸೆರೆಯಾಗಿವೆ. ಅಶ್ವಿನ್ ಕೆಂಕರೆ (Ashwin Kenkare) ಅವರು ತೆಗೆದ ಫೋಟೋಗಳನ್ನು ಮೊದಲು ಇಂಡಿಯನ್ ಬರ್ಡ್ಸ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು ಮತ್ತು ನಂತರ ಇತರ ಸಾಮಾಜಿಕ ಜಾಲತಾಣಗಳಲ್ಲಿಯೂ ಇದು ವೈರಲ್ ಆಯ್ತು.

ಫ್ಲೆಮಿಂಗೋ ಹಕ್ಕಿಗಳ ಹೆರಿಗೆ ಕೇಂದ್ರವಾದ Rann of Kutch... ಡ್ರೋನ್‌ ಕ್ಯಾಮರಾದಲ್ಲಿ ಸೆರೆಯಾಯ್ತ ಮೋಹಕ ದೃಶ್ಯ

ಥೂ ಗೂಬೆಗಳ ಅಂತ ಯಾರಿಗಾದರೂ ನೀವು ಬೈದಿರಬಹುದು ಅಥವಾ  ಯಾರಾದರೂ ಬೈದಿರುವುದನ್ನು ನೀವು ಕೇಳಿರಬಹುದು. ಹಾಗಂತ ಗೂಬೆ ಅಂದ್ರೆ ಚೆನ್ನಾಗಿಲ್ದೇ ಇರೋದು ಎಂಬ ಮನಸ್ಥಿತಿಯೂ ನಿಮಗಿರಬಹುದು ಆದರೆ ಈ ಫೋಟೋಗಳನ್ನು ನೀವು ನೋಡಿದರೆ ಗೂಬೆಗಳು ಇಷ್ಟು ಮುದ್ದಾಗಿರುತ್ತವಾ ಎಂದು  ನೀವು ಅಚ್ಚರಿ ಪಡೋದಂತು ಗ್ಯಾರಂಟಿ ಜೊತೆಗೆ ಗೂಬೆ ಅಂತ ಬೈದ್ರೆ ಬೇಜಾರು ಆಗ್ಬೇಕಾಗಿಲ್ಲ ಅಲ್ವಾ.


ರಾತ್ರಿ ಅಂಗಡಿ ಮುಚ್ಚಿ ಮುಂಜಾನೆ ಅಂಗಡಿ ಬಾಗಿಲನ್ನು ತೆಗೆಯಲು ಹೋದಾಗ ಅಂಗಡಿಯ ಮುಂಭಾಗ ಕಾವಲುಗಾರನಂತೆ ಕುಳಿತಿದ್ದ ಗೂಬೆಯೊಂದನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಹಾಸನದ ಸಕಲೇಶಪುರದಲ್ಲಿ ಕೆಲ ವರ್ಷಗಳ ಹಿಂದೆ ನಡೆದಿತ್ತು. ಪಟ್ಟಣದ ಜನನಿಬಿಡ ಬಿ.ಎಂ, ರಸ್ತೆಯಲ್ಲಿರುವ ನ್ಯಾಷನಲ್‌ ಟ್ರೇಡರ್ಸ್‌ ಮಾಲೀಕ ಜಮೀಲ್‌ ಅಹಮ್ಮದ್‌ ತಮ್ಮ ಅಂಗಡಿಯನ್ನು ತೆರೆಯಲು ಮುಂಜಾನೆ ಹೋದಾಗ ಗೂಬೆಯೊಂದು ಕುಳಿತಿರುವುದು ನೋಡಿ ಚಕಿತಗೊಂಡಿದ್ದಾರೆ. 

ತಕ್ಷಣ ಸಮಾಜ ಸೇವಕರಾದ ಅನೀಫ್‌ ಹಾಗೂ ಅಕ್ಬರ್‌ರವರ ನೆರವಿನಿಂದ ಗೂಬೆಯನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಗೂಬೆಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದ್ದು ಗೂಬೆ ಮಾರಾಟ ಮಾಡುವವರ ಒಂದು ಕಳ್ಳ ಗ್ಯಾಂಗ್‌ ಕಾರ್ಯನಿರತವಾಗಿದೆ ಆದರೂ ಸಹ ಇಂತಹವರಿಗೆ ಹಣಕ್ಕಾಗಿ ಗೂಬೆಯನ್ನು ನೀಡದೆ ಅರಣ್ಯ ಇಲಾಖೆಗೆ ಒಪ್ಪಿಸಿರುವುದಕ್ಕೆ ಶ್ಲಾಘನೆ ವ್ಯಕ್ತವಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?