Republic Day Parade Tableau : ಕೇರಳ ರಾಜ್ಯದ ಸ್ತಬ್ದಚಿತ್ರ ತಿರಸ್ಕೃತ, ಅದಕ್ಕೆ ಇಲ್ಲಿವೆ ಕಾರಣ

By Suvarna NewsFirst Published Jan 20, 2022, 5:24 PM IST
Highlights

ಕೇರಳ, ತಮಿಳುನಾಡು ರಾಜ್ಯಗಳ ಸ್ತಬ್ದಚಿತ್ರ ತಿರಸ್ಕೃತ
 ಸ್ತಬ್ದಚಿತ್ರಗಳ ಆಯ್ಕೆಯಲ್ಲಿದೆ ಕಟ್ಟುನಿಟ್ಟಿನ ನಿಯಮ
ಕೇರಳ ರಾಜ್ಯದ ಸ್ತಬ್ದಚಿತ್ರ ತಿರಸ್ಕೃತವಾಗಿರೋದಕ್ಕೆ ಇಲ್ಲಿವೆ ಕಾರಣ

ನವದೆಹಲಿ (ಜ. 20):   ರಾಜ್ಯಗಳ ಗಣರಾಜ್ಯೋತ್ಸವ ಸ್ತಬ್ದಚಿತ್ರವನ್ನು ತಿರಸ್ಕರಿಸುತ್ತಿರುವ ಕೇಂದ್ರ ಸರ್ಕಾರದ (Central government) ನಿರ್ಧಾರದ ವಿರುದ್ಧ ರಾಜ್ಯ ಸರ್ಕಾರಗಳು ಆಕ್ರೋಶ ವ್ಯಕ್ತಪಡಿಸಿದೆ. ಕೇರಳ ಸರ್ಕಾರ (Kerala) ಹಾಗೂ ತಮಿಳುನಾಡು (Tamil Nadu) ಸರ್ಕಾರ ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಯನ್ನು ಟೀಕೆ ಮಾಡುತ್ತಿರುವ ನಡುವೆಯೇ ಕೇರಳ ಸರ್ಕಾರದ ಸ್ತಬ್ದಚಿತ್ರ ತಿರಸ್ಕೃತಗೊಂಡಿದ್ದೇಕೆ ಎನ್ನುವ ಕಾರಣಗಳು ಬಹಿರಂಗವಾಗಿದೆ. ಕೇರಳ ನಿರ್ಮಿಸಿರುವ ಸ್ತಬ್ದಚಿಚತ್ರದಲ್ಲಿ ಪ್ರಮುಖ ಸಮಸ್ಯೆಗಳಿದ್ದು ಆ ಕಾರಣಕ್ಕಾಗಿಯೇ ಪರೇಡ್ ನ ಅಂತಿಮ ಪಟ್ಟಿಗೆ ಸೇರಲು ವಿಫಲವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಕಾರಣಗಳು ಕೇರಳ ಸರ್ಕಾರ ಸ್ತಬ್ದಚಿತ್ರ ನಿರ್ಮಾಣದ ವಿಚಾರದಲ್ಲಿ ತೋರಿದಂತೆ ಅಸಡ್ಡೆಯನ್ನೂ ತೋರಿಸಿದೆ. ತನ್ನದೇ ನ್ಯೂನತೆಗಳ ಕಾರಣದಿಂದಾಗಿ ಕೇರಳ ರಾಜ್ಯದ ಜಟಾಯು, ನಾರಾಯಣಗುರು ಸ್ತಬ್ದಚಿತ್ರ ಅಂತಿಮ ಪಟ್ಟಿಗೆ ಏರಲು ವಿಫಲವಾಗಿದೆ.

ಮೇಲ್ನೋಟಕ್ಕೆ ಈ ಎಲ್ಲಾ ರಾಜ್ಯಗಳ ಸ್ತಬ್ದಚಿತ್ರಗಳು ತಿರಸ್ಕೃತಗೊಂಡಿರಲು ಕಾರಣ ರಾಜಕೀಯವಲ್ಲ. ಬದಲಿಗೆ ಈ ಸ್ತಬ್ದಚಿತ್ರಗಳು ತನ್ನದೇ ಆದ ಕೆಲ ನೂನ್ಯತೆಗಳನ್ನು ಹೊಂದಿದ್ದು ಮಾತ್ರವಲ್ಲದೆ, ಡಿಸೈನ್ ನಲ್ಲೂ ಕೆಲ ಹಿನ್ನಡೆಗಳನ್ನು ಹೊಂದಿದ್ದವು. ಆ ಕಾರಣದಿಂದಾ ತಜ್ಞರ ಸಮಿತಿ ಇವುಗಳನ್ನು ರಿಜೆಕ್ಟ್ ಮಾಡಿದೆ.

ಪ್ರಾಥಮಿಕವಾಗಿ ಬಣ್ಣದ ಯೋಜನೆ, ಗುಣಮಟ್ಟ, ವಿವಿಧ ಅಂಶಗಳು ಮತ್ತು  ದೃಶ್ಯ ಪ್ರದರ್ಶನದಲ್ಲಿ ಸ್ಪಷ್ಟತೆ, ಪ್ರಮಾಣಾನುಗುಣವಾದ ಶಿಲ್ಪಕಲೆ ಕೆಲಸ ಮತ್ತು ವಿನ್ಯಾಸದ ಪರಿಕಲ್ಪನೆಯನ್ನು ಆಧರಿಸಿ ಸ್ತಬ್ದಚಿತ್ರಗಳ ಆಯ್ಕೆಯನ್ನು ಮಾಡಲಾಗುತ್ತದೆ.  ಪ್ರವಾಸೋದ್ಯಮ @75 ಎಂಬ ಥೀಮ್ ಹೊಂದಿರುವ ಕೇರಳದ ಟ್ಯಾಬ್ಲೋ ಆಯ್ಕೆ ಪ್ರಕ್ರಿಯೆಯ ಎರಡನೇ ಕೊನೆಯ ಹಂತದವರೆಗೆ ಶಾರ್ಟ್‌ಲಿಸ್ಟ್‌ನಲ್ಲಿತ್ತು ಆದರೆ ಅಂತಿಮ ಪಟ್ಟಿಗೆ ಪ್ರವೇಶಿಸುವ ವೇಳೆ ತಿರಸ್ಕೃತವಾಗಿದೆ. ಈಗ ಕೇಂದ್ರ ಸರ್ಕಾರ ಕೇರಳ ರಾಜ್ಯದ ಸ್ತಬ್ಧಚಿತ್ರವನ್ನು ತಿರಸ್ಕೃತ ಮಾಡಿದ್ದು, ಅದಕ್ಕೆ ಕಾರಣಗಳೂ ಹಲವಿದೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.

Republic Day 2022 ಸ್ತಬ್ಧಚಿತ್ರ ತಿರಸ್ಕಾರ ವಿವಾದ, ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ರಾಜ್ಯಗಳಿಗೆ ಕೇಂದ್ರದ ಸ್ಪಷ್ಟನೆ!
1. ರಾಜ್ಯವು ಅಳವಡಿಸಿಕೊಂಡ ಪ್ರವಾಸೋದ್ಯಮ @75 ರ ವಿಷಯವು ವಿನ್ಯಾಸ ಮತ್ತು ಪರಿಕಲ್ಪನೆಯೊಂದಿಗೆ ಹೆಚ್ಚು ಮನವರಿಕೆ ಮತ್ತು ಸಂವಹನಕಾರಿಯಾಗಿಲ್ಲ ಎಂದು ತಜ್ಞರ ಸಮಿತಿಯು ಅಭಿಪ್ರಾಯಪಟ್ಟಿದೆ.

2.ಆರಂಭಿಕ ರೇಖಾಚಿತ್ರದಲ್ಲಿ, ಟ್ರಾಕ್ಟರ್ ಮತ್ತು ಟ್ರೇಲರ್ ಎರಡರಲ್ಲೂ ಜಟಾಯು ಚಿತ್ರಣದೊಂದಿಗೆ ಏಕತಾನತೆಯನ್ನು ಹೊಂದಿದ್ದವು ಎಂದು ತಜ್ಞರ ಸಮಿತಿಯು ಗಮನಿಸಿತ್ತು. ಆದರೆ, ಜಟಾಯು ಕಲಾಕೃತಿಯ ಆರಂಭಿಕ ವಿನ್ಯಾಸವು  ರೇಖಾಚಿತ್ರದ ಮಾದರಿಯಂತಿರಲಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

3. ತಜ್ಞ ಸಮಿತಿಯು ಕೇರಳ ರಾಜ್ಯದ ಸ್ತಬ್ದಚಿತ್ರವು ಬೂದು ಬಣ್ಣದ್ದಾಗಿದ್ದು, ರಾಜಪಥದಲ್ಲಿ ಎದ್ದು ಕಾಣುವಷ್ಟು ಆಕರ್ಷಕವಾಗಿಲ್ಲ ಎಂದು ಭಾವಿಸಿದೆ.

4. ಟ್ರ್ಯಾಕ್ಟರ್ ಭಾಗವು ಹೆಚ್ಚು ಪ್ರಭಾವಶಾಲಿಯಾಗಿಲ್ಲ ಮತ್ತು ಆದ್ದರಿಂದ ನಾರಾಯಣ ಗುರು ಮತ್ತು ಆದಿ ಶಂಕರ ಇಬ್ಬರ ಆಯ್ಕೆಯನ್ನು ಟ್ರ್ಯಾಕ್ಟರ್‌ನಲ್ಲಿ ಪ್ರಯತ್ನಿಸಲಾಯಿತು. ಆದರೆ ಒಟ್ಟಾರೆ ವಿನ್ಯಾಸ ಮತ್ತು ಪ್ರಸ್ತುತಿಯು ಟ್ಯಾಬ್ಲೋ ಸಾಮಾನ್ಯವಾಗಿ ಸಂವಹನ ಮಾಡಬೇಕಾದ ಯಾವುದೇ ಸಂದೇಶವನ್ನು ಸಂವಹನ ಮಾಡುತ್ತಿಲ್ಲ.

Republic Day Tableau: ಆಯ್ಕೆ ಹೇಗೆ.? ತಿರಸ್ಕಾರಕ್ಕೆ ಕಾರಣಗಳು ಏನೇನು?
ಇವುಗಳು ಸೇರಿದಂತೆ ಇನ್ನೂ ಕೆಲವು ಕಾರಣಗಳಿಂದ ಕೇರಳ ರಾಜ್ಯದ ಸ್ತಬ್ಧಚಿತ್ರವನ್ನು ತಜ್ಞರ ಸಮಿತಿ ತಿರಸ್ಕೃತ ಮಾಡಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಏರಿದ ಬಳಿಕ,  2018 ಹಾಗೂ 2021ರಲ್ಲಿ ಕೇರಳ ರಾಜ್ಯದ ಸ್ತಬ್ದಚಿತ್ರಗಳು ಗಣರಾಜ್ಯತ್ಸವ ಪರೇಡ್ ನಲ್ಲಿ ಭಾಗವಹಿಸಿದ್ದರೆ, 2016, 2017, 2019, 2020 ಮತ್ತು 2021ರಲ್ಲಿ ತಮಿಳುನಾಡು, 2016, 2017, 2019 ಮತ್ತು 2021ರಲ್ಲಿ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರಗಳು ಭಾಗಿಯಾಗಿದ್ದವು. 

ಇನ್ನು ಪಶ್ಚಿಮ ಬಂಗಾಳ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ವರ್ಷದ ಜನ್ಮದಿನದ ಕಾರಣಕ್ಕಾಗಿ ಅವರ ಕೊಡುಗೆಗಳನ್ನು ಸ್ಮರಿಸುವಂಥ ಸ್ತಬ್ದಚಿತ್ರವನ್ನು ಪಶ್ಚಿಮ ಬಂಗಾಳ ಮಾಡಿತ್ತು. ಆದರೆ, ಈಗಾಗಲೇ ಕೇಂದ್ರ ಲೋಕೋಪಯೋಗಿ ಇಲಾಖೆ ಸುಭಾಷ್ ಚಂದ್ರ ಬೋಸ್ ಅವರ ಸ್ತಬ್ದಚಿತ್ರವನ್ನು ಮಾಡಿದ್ದು, ಅದಕ್ಕೆ ಸಮಿತಿಯಿಂದ ಒಪ್ಪಿಗೆಯೂ ಸಿಕ್ಕಿದೆ. ಹಾಗಾಗಿ ಪಶ್ಚಿಮ ಬಂಗಾಳದ ಸ್ತಬ್ದಚಿತ್ರವನ್ನು ತಿರಸ್ಕೃತ ಮಾಡಲಾಗಿದೆ. ತಮಿಳುನಾಡು ರಾಜ್ಯದ ಸ್ತಬ್ದಚಿತ್ರ ಕೂಡ ಇದೇ ಕಾರಣದ ಅಡಿಯಲ್ಲಿ ರಿಜೆಕ್ಟ್ ಆಗಿದ್ದವು. ಸ್ತಬ್ದಚಿತ್ರಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ಮುಖ್ಯಮಂತ್ರಿಗಳ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಕೇಂದ್ರ, ಇವುಗಳ ಆಯ್ಕೆ ಸರ್ಕಾರದ ಕೆಲಸವಲ್ಲ. ಇದು ನಮ್ಮ ಪರಿಧಿಗೂ ಬರುವುದಿಲ್ಲ. ಇಂಥ ವಿಚಾರಗಳಿಗಾಗಿ ಸರ್ಕಾರಕ್ಕೆ ಪತ್ರ ಬರೆಯಬೇಡಿ. ಅದಕ್ಕಾಗಿತೇ ತಜ್ಞರ ಸಮಿತಿ ಇದ್ದು ಲೋಪದೋಷಗಳ ಬಗ್ಗೆ ಚರ್ಚೆ ಮಾಡಿ ಎಂದು ಖಡಕ್ ಆಗಿ ಉತ್ತರ ನೀಡಿದೆ.

click me!