ಪ್ರಧಾನಿ ಮೋದಿ ಸಲಹಾಗಾರನಾಗಿ ಅಮಿತ್ ಖರೆ ನೇಮಕ!

By Suvarna NewsFirst Published Oct 12, 2021, 7:50 PM IST
Highlights
  • ಅಮಿತ್ ಖರೆ ನೇಮಕ ಪ್ರಕಟಣೆ ಹೊರಡಿಸಿದ ಪ್ರಧಾನಿ ಸಚಿವಾಲಯ
  • IAS ಅಧಿಕಾರಿ , ನಿವೃತ್ತ HRD ಕಾರ್ಯದರ್ಶಿ ಅಮಿತ್ ಖರೆ
  • ಮುಂದಿನ 2 ವರ್ಷಗಳ ಕಾಲ ಪ್ರಧಾನಿ ಸಲಹಗಾರನಾಗಿ ನೇಮಕ

ನವದೆಹಲಿ(ಅ.12): ಪ್ರಧಾನಿ ನರೇಂದ್ರ ಮೋದಿ(Narendra Modi) ಸಲಹಗಾರನಾಗಿ ಐಎಎಸ್ ಅಧಿಕಾರಿ, HRD ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆ ನಿವೃತ್ತ  ಕಾರ್ಯದರ್ಶಿ ಅಮಿತ್ ಖರೆ(Amit Khare) ನೇಮಕಗೊಂಡಿದ್ದಾರೆ. ಪ್ರಧಾನಿ ಸಚಿವಾಲಯ ಅಧಿಕೃತ ಪ್ರಕಟಣೆ ಹೊರಡಿಸಿದೆ.

'ಮಾನವ ಹಕ್ಕುಗಳ ನೆಪದಲ್ಲಿ ರಾಜಕೀಯ, ದೇಶದ ಘನತೆಗೆ ಧಕ್ಕೆ: ನರೇಂದ್ರ ಮೋದಿ

1985ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿ ಅಮಿತ್ ಖರೆ ಸೆಪ್ಟೆಂಬರ್ 30 ರಂದು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯ ಸ್ಥಾನದಿಂದ ನಿವೃತ್ತಿಯಾಗಿದ್ದಾರೆ. ಖಡಕ್ ಅಧಿಕಾರಿಯಾಗಿ ಹೆಸರುಗಳಿಸಿದ್ದ ಅಮಿತ್ ಖರೆಯನ್ನು ಸಂಸದೀಯ ನೇಮಕಾತಿ ಸಮಿತಿ ಪ್ರಧಾನಿ ಸಲಹೆಗಾರನಾಗಿ(advisor) ನೇಮಕ ಮಾಡಲು ಅನುಮೋದನೆ ನೀಡಿದೆ.

ಕೇಂದ್ರ ಸರ್ಕಾರದ 16 ಸಚಿವಾಲಯಗಳು ಒಂದೇ ವೇದಿಕೆ ವ್ಯಾಪ್ತಿಗೆ!

ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿ(National Education Policy) 2020ನ್ನು ಪ್ರಧಾನಿ ನರೇಂದ್ರ ಮೋದಿ ನಿರ್ದೇಶನದಂತೆ ಯಶಸ್ವಿಯಾಗುಂತೆ ನೋಡಿಕೊಂಡ ಹಾಗೂ ಎಲ್ಲಾ ಜವಾಬ್ದಾರಿ ನಿಭಾಯಿಸಿದ ಹೆಗ್ಗಳಿಕೆಗೆ ಅಮಿತ್ ಖರೆಗಿದೆ. ಇನ್ನು ಡಿಜಿಟಲ್ ಮಾಧ್ಯಮ ನಿಯಮಮಾವಳಿ ರೂಪುರೇಶೆ ನಿರ್ಮಿಸಿ, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ಅಮಿತ್ ಖರೆ ಪ್ರಮುಖ ಪಾತ್ರ ನಿಭಾಯಿಸಿದ್ದರು.

ಡೆನ್ಮಾರ್ಕ್ ಪ್ರಧಾನಿ ಫ್ರೆಡೆರಿಕ್ಸನ್‌ಗೆ ಆತ್ಮೀಯ ಸ್ವಾಗತ ನೀಡಿದ ಮೋದಿ, ಮಹತ್ವದ ದ್ವಿಪಕ್ಷೀಯ ಮಾತುಕತೆ!

ಪ್ರಧಾನಿ ಸಲಹೆಗಾರರಾಗಿದ್ದ ಪಿಕೆ ಸಿನ್ಹ ಹಾಗೂ ಅಮರಜೀತ್ ಸಿನ್ಹಾ ಇದೇ ವರ್ಷ ರಾಜಿನಾಮೆ ನೀಡಿದ್ದಾರೆ. ತೆರವಾಗಿರುವ ಸಲಹಾಗಾರ ಸ್ಥಾನ ತುಂಬಲಿದ್ದಾರೆ. ಅಮಿತ್ ಖರೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಅಧಿಕಾರಿಯಾಗಿ ಗುರುತಿಸಿಕೊಡಿದ್ದಾರೆ. ಖರೆ ಇದುವರೆಗೆ ತೆಗೆದುಕೊಂಡ ಪ್ರತಿ ನಿರ್ಧಾರ ಅತ್ಯಂತ ಪಾರದರ್ಶಕತೆಯಿಂದ ಕೂಡಿದೆ. 

ಉನ್ನತ ಶಿಕ್ಷಣ, HRD ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ನೇತೃತ್ವ ವಹಿಸಿದ್ದ ಅಮಿತ್ ಖರೆ, ದಿಟ್ಟ ನಿರ್ಧಾರಗಳಿಂದ ಭಾರತದಲ್ಲಿ ಹಲವು ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸಲಹೆಗಾರನಾಗಿ ನೇಮಗವಾಗುವ ಮೂಲಕ ಮಹತ್ತರ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

click me!