ಬುರ್ಖಾ ಧರಿಸಿ ಬೀದಿಗಿಳಿಯಲು ಸೂಚನೆ, ಮಹಿಳೆಯರ ನಡುವಿನಿಂದ ಗ್ಯಾಂಗ್‌ಸ್ಟರ್ ಅತೀಕ್ ಪತ್ನಿ ಎಸ್ಕೇಪ್!

By Suvarna News  |  First Published May 1, 2023, 5:30 PM IST

ಉಮೇಶ್ ಪಾಲ್ ಕೊಲೆ ಆರೋಪಿಗಳ ಪೈಕಿ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಇದರಲ್ಲಿ ಇತ್ತೀಚೆಗೆ ಹತ್ಯೆಯಾದ ಗ್ಯಾಂಗ್‌ಸ್ಟರ್ ಅತೀಕ್ ಅಹಮ್ಮದ್ ಪತ್ನಿ ಕೂಡ ಒಬ್ಬಳು.  ಅತೀಕ್ ಪತ್ನಿ ಶಾಯಿಸ್ಟಾ ಪರ್ವೀನ್ ಬಂಧನಕ್ಕೆ ರೆಡಿಯಾಗಿದ್ದ ಪೊಲೀಸರಿಗೆ ಚಳ್ಳೆ ಹಣ್ಮು ತಿನ್ನಿಸಿ ಸಿನಿಮಿಯ ರೀತಿಯಲ್ಲಿ ಎಸ್ಕೇಪ್ ಆದ ಘಟನೆ ನಡೆದಿದೆ.
 


ಪ್ರಯಾಗರಾಜ್(ಮೇ.01): ಉತ್ತರ ಪ್ರದೇಶದಲ್ಲಿ ಮಾಫಿಯಾ ಮಟ್ಟಹಾಕಲು ಯೋಗಿ ಆದಿತ್ಯನಾಥ್ ಸರ್ಕಾರ ಖಡಕ್ ಆದೇಶ ನೀಡಿದೆ. ಇದರಂತೆ ಒಬ್ಬೊಬ್ಬ ಮಾಫಿಯಾ ಡಾನ್‌ಗಳ ಕತೆ ಅಂತ್ಯವಾಗುತ್ತಿದೆ. ಉಮೇಶ್ ಪಾಲ್ ಕೊಲೆ ಆರೋಪಿಗಳ ಪೈಕಿ ಇಬ್ಬರು ತಲೆಮರೆಸಿಕೊಂಡಿದ್ದರೆ, ಉಳಿದ ಆರೋಪಿಗಳು ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಪೈಕಿ ಇತ್ತೀಚೆಗೆ ಹತ್ಯೆಯಾದ ಅತೀಕ್ ಅಹಮ್ಮದ್ ಪತ್ನಿ ಶಾಯಿಸ್ಟ ಪರ್ವೀನ್‌ಗಾಗಿ ಯುಪಿ ಪೊಲೀಸರು ಹುಡುಕಾಟ ತೀವ್ರಗೊಳಿಸಿದ್ದಾರೆ. ಇದರ ನಡುವೆ ಅತೀಕ್ ಜೊತೆ ಹತ್ಯೆಯಾದ ಸಹೋದರ ಅಶ್ರಫ್ ಅಹಮ್ಮದ್ ನಿವಾಸದ ಪಕ್ಕದಲ್ಲಿ ಶಾಯಿಸ್ಟಾ ಪರ್ವೀನ್ ಇರುವುದು ಪತ್ತೆ ಹಚ್ಚಿದ ಪೊಲೀಸರು ಬಂಧನಕ್ಕಾಗಿ ಎಲ್ಲಾ ತಯಾರಿಯೊಂದಿಗೆ ಆಗಮಿಸಿದ್ದರು. ಆದರೆ ಈ ಮಾಹಿತಿ ತಿಳಿದ ಬೆನ್ನಲ್ಲೇ ಸ್ಥಳೀಯ ಮಸೀದಿಯಲ್ಲಿ ಮೈಕ್ ಮೂಲಕ ಮಹತ್ವದ ಘೋಷಣೆ ಮಾಡಲಾಗಿದೆ. ಬುರ್ಖಾ ಧರಿಸಿ ಬೀದಿಗಿಳಿಯುವಂತೆ ಸೂಚನೆ ನೀಡಲಾಗಿತ್ತು. ಇದರಿಂದ ಮಹಿಳೆಯರು ಬುರ್ಖಾ ಧರಿಸಿ ಬೀದಿಗೆ ಇಳಿದಿದ್ದಾರೆ. ಇತ್ತ ಶಯಿಸ್ಟಾ ಪರ್ವೀನ್ ಕೂಡ ಬುರ್ಖಾ ಧರಿಸಿ ಮಹಿಳೆಯರ ನಡುವಿನಿಂದ ಎಸ್ಕೇಪ್ ಆಗಿದ್ದಾರೆ.

ಸ್ಪೆಷಲ್ ಟಾಸ್ಕ್ ಫೋರ್ಸ್ ತಂಡ ಶಾಯಿಸ್ಟಾ ಪರ್ವೀನ್ ಬಂಧನಕ್ಕೆ ಎಲ್ಲಾ ತಯಾರಿ ಮಾಡಿಕೊಂಡಿತ್ತು. ಪ್ರಯಾಗ್‌ರಾಜ್‌ನಲ್ಲಿರುವ ಅಶ್ರಫ್ ಅಹಮ್ಮದ್ ನಿವಾಸದ ಪಕ್ಕದಲ್ಲೇ ಶಾಯಿಸ್ಟಾ ಪರ್ವೀನ್ ಅಡಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೀಗಾಗಿ  STF ತಂಡ ಪೊಲೀಸ್ ಪಡೆಯೊಂದಿಗೆ ಪ್ರಯಾಗರಾಜ್‌ಗೆ ಆಗಮಿಸಿದೆ. ಪ್ರಯಾಗ್‌ರಾಜ್‌ನಲ್ಲಿ ಲೇಡಿ ಡಾನ್, ಅತೀಕ್ ಗ್ಯಾಂಗ್‌ನ ಮುಂಡಿ ಪಾಸಿ ಆಶ್ರಯದಲ್ಲಿ ಅಡಗಿರುವುದಾಗಿ ಪೊಲೀಸರು ಮಾಹಿತಿ ಪಡೆದಿದ್ದರು. 

Tap to resize

Latest Videos

ಪೇದೆಯ ಮಗಳಾಗಿ ಹುಟ್ಟಿ ಮೋಸ್ಟ್‌ ವಾಟೆಂಡ್‌ ಕ್ರಿಮಿನಲ್ ಆಗಿ ಬದಲಾದ ಶಯಿಸ್ಟಾ ಪರ್ವೀನ್

ಪೊಲೀಸರು ರೇಡ್‌ಗಾಗಿ ಆಗಮಿಸುತ್ತಿರುವ ಮಾಹಿತಿ ಪಡೆದ ಮುಂಡಿ ಪಾಸಿ ತಕ್ಷಣೇ ಮಸೀದಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಮಸೀದಿಯಲ್ಲಿ ಎಲ್ಲಾ ಮಹಿಳೆಯರು ಬುರ್ಖಾ ಧರಿಸಿ ತಕ್ಷಣವೇ ಬೀದಿಗಿಳಿಯುವಂತೆ ಸೂಚನೆ ನೀಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬುರ್ಖಾ ಧರಿಸಿ ಬೀದಿಗಿಳಿಯುತ್ತಿದ್ದಂತೆ ಶಾಯಿಸ್ಟಾ ಪರ್ವೀನ್ ಬುರ್ಖಾ ಧರಿಸಿ ಇದೇ ಮಹಿಳೆಯರ ನಡುವಿನಿಂದ ಎಸ್ಕೇಪ್ ಆಗಿದ್ದಾರೆ. ಪೊಲೀಸರು ಬುರ್ಖಾ ಮಹಿಳೆಯರ ನೋಡಿ ಕೈಕಟ್ಟಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು.ಅತೀಕ್ ವಕೀಲನ ವಿಚಾರಣೆಯಲ್ಲಿ ಸಿಕ್ಕ ಮಾಹಿತಿ ಆಧರಿಸಿ STF ತಂಡ ಶಾಯಿಸ್ಟಾ ಪರ್ವೀನ್‌ ಬಂಧನಕ್ಕೆ ಬಲೆ ಬೀಸಿತ್ತು. ಆದರೆ ಪೊಲೀಸರ ಪ್ರಯತ್ನ ಕೂದಲೆಳೆ ಅಂತರದಲ್ಲಿ ಮಿಸ್ಸಾಗಿತ್ತು. 

ದಾಳಿ ಬೆನ್ನಲ್ಲೇ ಅತೀಕ್‌ನನ್ನು ಆಸ್ಪತ್ರೆ ದಾಖಲಿಸಿಲ್ಲ ಯಾಕೆ? ಯುಪಿ ಪೊಲೀಸರಿಗೆ ಸುಪ್ರೀಂ ಕೋರ್ಟ್ ಪ್ರಶ್ನೆ!

ಇತ್ತ ಅತೀಕ್ ಹತ್ಯೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಾಗುತ್ತಿದೆ. ಮೂವರು ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಮತ್ತು ಆತನ ಸೋದರ ಅಶ್ರಫ್‌ನನ್ನು ಮಾಧ್ಯಮದ ಎದುರು ಪರೇಡ್‌ ಮಾಡಿಸಿದ್ದು ಏಕೆ ಎಂದು ಸುಪ್ರೀಂಕೋರ್ಚ್‌ ಶುಕ್ರವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಪ್ರಶ್ನಿಸಿದೆ. ಅಲ್ಲದೇ ಅತೀಕ್‌ ಹತ್ಯೆಯ ನಂತರ ತೆಗೆದುಕೊಳ್ಳಲಾದ ಕ್ರಮಗಳ ವಿವರವಾದ ವರದಿ ಸಲ್ಲಿಸುವಂತೆ ಸೂಚಿಸಿದೆ. 2017ರಿಂದ ಉತ್ತರ ಪ್ರದೇಶದಲ್ಲಿ ನಡೆದಿರುವ ಎನ್‌ಕೌಂಟರ್‌ಗಳ ತನಿಖೆಯನ್ನು ಸ್ವತಂತ್ರ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ವಕೀಲ ವಿಶಾಲ್‌ ತಿವಾರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾಯಾಲಯ ಈ ಸೂಚನೆ ನೀಡಿದೆ. ನ್ಯಾ.ಎಸ್‌.ರವೀಂದ್ರ ಮತ್ತು ನ್ಯಾ ದೀಪಾಂಕರ್‌ ದತ್ತಾ ಅವರಿದ್ದ ಪೀಠ, ಪ್ರಯಾಗ್‌ರಾಜ್‌ನಲ್ಲಿ ನಡೆದ ಅತೀಕ್‌ ಸೋದರರ ಎನ್‌ಕೌಂಟರ್‌ ಮತ್ತು ಝಾನ್ಸಿಯಲ್ಲಿ ನಡೆದ ಅಸದ್‌ನ ಎನ್‌ಕೌಂಟರ್‌ ವಿವರಗಳನ್ನು ಕೋರ್ಚ್‌ಗೆ ಸಲ್ಲಿಸುವಂತೆ ಸೂಚಿಸಿದೆ. ಅತೀಕ್‌ ಸೋದರರನ್ನು ಮಾಧ್ಯಮಗಳ ಎದುರು ಪರೇಡ್‌ ನಡೆಸಿದ್ದು ಏಕೆ?, ಅವರನ್ನು ಆಸ್ಪತ್ರೆಗೆ ಕರೆತರುವ ವಿಚಾರ ಹತ್ಯೆ ಮಾಡಿದವರಿಗೆ ಹೇಗೆ ಗೊತ್ತಾಯಿತು?, ಅತೀಕ್‌ ಸೋದರರನ್ನು ಆಸ್ಪತ್ರೆಯ ಗೇಟಿನವರೆಗೆ ಆ್ಯಂಬುಲೆನ್ಸ್‌ನಲ್ಲಿ ಏಕೆ ಕರೆದೊಯ್ಯಲಿಲ್ಲ ಎಂದು ಕೋರ್ಚ್‌ ಸರ್ಕಾರಕ್ಕೆ ಪ್ರಶ್ನಿಸಿದೆ.

click me!