ಮಗುವಿಗೆ ನಾಲಿಗೆ ನೆಕ್ಕುವಂತೆ ಹೇಳಿದ ಪ್ರಕರಣ: ಕ್ಷಮೆ ಕೇಳಿದ ದಲೈಲಾಮಾ

Published : Apr 10, 2023, 03:42 PM ISTUpdated : Apr 10, 2023, 03:58 PM IST
ಮಗುವಿಗೆ ನಾಲಿಗೆ ನೆಕ್ಕುವಂತೆ ಹೇಳಿದ ಪ್ರಕರಣ: ಕ್ಷಮೆ ಕೇಳಿದ ದಲೈಲಾಮಾ

ಸಾರಾಂಶ

ಮಗುವಿಗೆ ತನ್ನ ನಾಲಿಗೆ ನೆಕ್ಕುವಂತೆ ಹೇಳಿ ವಿವಾದಕ್ಕೀಡಾಗಿರುವ ಬೌದ್ಧ ಧರ್ಮಗುರು ದಲೈಲಾಮಾ ಅವರು ಈಗ ಕ್ಷಮೆ ಕೇಳಿದ್ದಾರೆ. ಬಾಲಕ ಆತನ ಕುಟುಂಬ ಹಾಗೂ ಇಡೀ ಬೌದ್ಧ ದರ್ಮದ ಅನುಯಾಯಿಗಳಿಗೆ ಅವರು ಕ್ಷಮೆ ಕೇಳಿದ್ದಾರೆ.

ನವದೆಹಲಿ: ಮಗುವಿಗೆ ತನ್ನ ನಾಲಿಗೆ ನೆಕ್ಕುವಂತೆ ಹೇಳಿ ವಿವಾದಕ್ಕೀಡಾಗಿರುವ ಬೌದ್ಧ ಧರ್ಮಗುರು ದಲೈಲಾಮಾ ಅವರು ಈಗ ಕ್ಷಮೆ ಕೇಳಿದ್ದಾರೆ. ಬೌದ್ಧ ಧರ್ಮಗುರು ದಲೈ ಲಾಮಾ ಅವರು ಮಗುವಿನ ತುಟಿಗಳಿಗೆ ಚುಂಬಿಸುತ್ತಿರುವುದನ್ನು ತೋರಿಸುವ ವಿಡಿಯೋ ಮತ್ತು ನಂತರ ತನ್ನ ನಾಲಿಗೆಯನ್ನು ನೆಕ್ಕುವಂತೆ ಕೇಳುತ್ತಿರುವುದನ್ನು ತೋರಿಸುವ ದೃಶ್ಯದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  ಇದಾದ ಬಳಿಕ ಎಲ್ಲೆಡೆ ಬೌದ್ಧಧರ್ಮಗುರುವಿನ ಈ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ವಿಚಾರವೀಗ ವಿವಾದಕ್ಕೀಡಾಗುತ್ತಿದ್ದಂತೆ ಧರ್ಮಗುರುಗಳು ಕ್ಷಮೆ ಕೇಳಿದ್ದಾರೆ.  ಬಾಲಕ ಹಾಗೂ ಆತನ ಕುಟುಂಬ ಹಾಗೂ ಜಾಗತಿನಾದ್ಯಂತ ಇರುವ ಬೌದ್ಧ ಅನುಯಾಯಿಗಳಲ್ಲಿ ಈ ಬಗ್ಗೆ ಕ್ಷಮೆ ಕೇಳುತ್ತಿರುವುದಾಗಿ ಅವರು ಟ್ವಿಟ್ ಮಾಡಿದ್ದಾರೆ. 

ಸಮಾರಂಭವೊಂದರಲ್ಲಿ ಲಾಮಾಗೆ ಗೌರವ ಸಲ್ಲಿಸಲು ಬಾಲಕನೊಬ್ಬ ಬಾಗಿದಾಗ ದಲೈ ಲಾಮಾ (Dalai Lama), ಆ ಹುಡುಗನ ತುಟಿಗಳಿಗೆ ಮುತ್ತು ಕೊಟ್ಟಿದ್ದಾರೆ ನಂತರ ಲಾಮಾ ಅವರು ಮಗುವಿಗೆ ನಾಲಿಗೆ ನೆಕ್ಕು ಎಂದು ಹೇಳಿದ್ದು,  ಆಗ ದಲೈ ಲಾಮಾ ತಮ್ಮ ನಾಲಿಗೆಯನ್ನು ಎದುರು  ಚಾಚಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಈ ವಿಡಿಯೋ ವೈರಲ್ (viral Video) ಆಗುತ್ತಿದ್ದಂತೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ದಲೈಲಾಮಾ ಅವರನ್ನು ಶಿಶುಕಾಮಕ್ಕಾಗಿ (Child abuse) ಬಂಧಿಸಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಈಗ ಬಾಲಕನ ಕುಟುಂಬದಲ್ಲಿ ಕ್ಷಮೆ ಕೇಳುವುದಾಗಿ ಹಾಗೂ ಇಡೀ ಜಗತ್ತಿಗೆ ಕ್ಷಮೆ ಕೇಳುವುದಕ್ಕಾಗಿ ಲಾಮಾ ಟ್ವಿಟ್‌ ಮಾಡಿದ್ದಾರೆ. ತಮ್ಮ ವರ್ತನೆಯಿಂದ ಯಾರಿಗಾದರು ನೋವಾಗಿದ್ದಲ್ಲಿ ಕ್ಷಮೆ ಕೇಳುವುದಾಗಿ ಅವರು ಹೇಳಿದ್ದಾರೆ.   

ತುಟಿಗೆ ಚುಂಬನ, ನಾಲಿಗೆ ನೆಕ್ಕೆಂದು ಮಗುವಿಗೆ ಹೇಳಿದ ದಲೈ ಲಾಮಾ: ವಿವಾದ

ಸಾರ್ವಜನಿಕ ಸ್ಥಳದಲ್ಲಿ ಕ್ಯಾಮರಾ ಮುಂದೆ ಮುಗ್ಧ ಹಾಗೂ ತುಂಟಾಟದ ರೀತಿಯಲ್ಲಿ ಅವರು ಜನರನ್ನು ಭೇಟಿ ಮಾಡು ರೀತಿಯಿಂದಾಗಿ ಅವರ  ಒಳ್ಳೆಯತನ ಆಗಾಗ ಟೀಕೆಗೆ ಗುರಿಯಾಗುತ್ತಿರುತ್ತದೆ. ಅವರು ಘಟನೆ ಬಗ್ಗೆ ಕ್ಷಮೆ ಕೇಳಿದ್ದಾರೆ ಎಂದು ದಲೈಲಾಮಾ ಅವರ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.  ಇತ್ತೀಚೆಗೆ ದಲೈಲಾಮಾ ಅವರು ಮಕ್ಕಳ ಶೃಂಗಸಭೆಯೊಂದರಲ್ಲಿ ಮಾತನಾಡುತ್ತಾ,  ಸಾಮಾಜಿಕ ಅಸಮಾನತೆಯನ್ನು ಕಡಿಮೆ ಮಾಡುವತ್ತ ಗಮನಹರಿಸುವುದು ನನ್ನ ಸಲಹೆ ಅಥವಾ ಮಕ್ಕಳಿಗೆ ಮನವಿಯಾಗಿದೆ. ಒಬ್ಬರು ಸಮಾಜವಾದಿಯಾಗಿರಲಿ  ಪ್ರತಿಯೊಬ್ಬರು ಮಾನವೀಯತೆಯ ಹೆಚ್ಚಿನ ಒಳಿತಿಗಾಗಿ ಯೋಚಿಸಬೇಕು ಎಂದು ದಲೈ ಲಾಮಾ ಇತ್ತೀಚೆಗೆ ಮಾತನಾಡುವಾಗ ಹೇಳಿದ್ದರು.  ಆದರೆ ದಲೈಲಾಮಾ ಮಗುವಿಗೆ ಮುತ್ತಿಕ್ಕುತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ(Social Media) ಕೋಲಾಹಲ ಸೃಷ್ಟಿಸಿತ್ತು. 

ಬೌದ್ಧರ 3ನೇ ಉನ್ನತ ಹುದ್ದೆಗೆ ಅಮೆರಿಕದಲ್ಲಿ ಜನಿಸಿದ 8ರ ಬಾಲಕನ ನೇಮಿಸಿದ ದಲೈ ಲಾಮಾ: ಚೀನಾ ಕೆಂಗಣ್ಣು?

ಆದರೆ ಈ ವಿಚಾರದ ಬಗ್ಗೆ  ಬೌದ್ಧಧರ್ಮಗುರು ದಲೈಲಾಮಾ ಅವರ ಬಗ್ಗೆ ಅನೇಕರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಕೆಲವರು ಹೇಳುವಂತೆ, ಟಿಬೇಟಿಯನ್ ಸಂಪ್ರದಾಯದ ಪ್ರಕಾರ,  ನಾಲಗೆಯನ್ನು ಹೊರ ಚಾಚುವುದು   ಗೌರವದ ಸಂಕೇತವಾಗಿದೆ ಅಥವಾ ಅದು ಟಿಬೇಟಿಯನ್ ಸಂಸ್ಕೃತಿಯ ಪ್ರಕಾರ ಒಬ್ಬರನ್ನು ಸ್ವಾಗತಿಸುವ ವಿಧಾನವಾಗಿದೆ.  ಟಿಬೇಟಿಯನ್ ಜಾನಪದ ಕತೆಯ ಪ್ರಕಾರ, '9ನೇ ಶತಮಾನದಲ್ಲಿ ಟಿಬೇಟಿಯನ್‌ ರಾಜನೋಬ್ಬ ಕ್ರೂರನಾಗಿದ್ದು, ಆತ ಕಪ್ಪು ನಾಲಗೆಯನ್ನು ಹೊಂದಿದ್ದನಂತೆ. ಆತನಂತೆ ತಾವಿಲ್ಲ ಎಂಬ ಕಾರಣಕ್ಕೆ ಟಿಬೇಟಿಯನ್ ಜನ ನಾಲಗೆಯನ್ನು ಹೊರ ಚಾಚಿ ತೋರಿಸುತ್ತಿದ್ದರಂತೆ. '

ಅಲ್ಲದೇ ಈ ನಾಲಗೆ ಹೊರ ಚಾಚುವ ಸಂಪ್ರದಾಯಕ್ಕೆ ಧೀರ್ಘ ಇತಿಹಾಸವೂ ಕೂಡ ಇದ್ದು, 'ಸೆವೆನ್ ಇಯರ್ಸ್‌ ಇನ್ ಟಿಬೆಟ್' ಎಂಬ ಹಾಲಿವುಡ್‌ ಸಿನಿಮಾದಲ್ಲಿ  ಹಾಲಿವುಡ್ ನಟ ಬ್ರಾಡ್‌ ಪಿಟ್‌ (Brad Pitt) ಪಾತ್ರದ ಮುಂದೆ ಟಿಬೇಟಿಯನ್ ಜನರ ಗುಂಪು ನಾಲಗೆ ಹೊರಚಾಚಿ ನಿಲ್ಲುವುದನ್ನು ಕಾಣಬಹುದಾಗಿದೆ. 011ರಲ್ಲಿ ಸುನಾಮಿಯಿಂದ ಹಾನಿಗೀಡಾಗಿದ್ದ,  ಜಪಾನ್‌ನ (Japan) ಸೆಂಡಾಯ್ (Sendai) ಪ್ರದೇಶಕ್ಕೆ ಭೇಟಿ ನೀಡಿದ್ದ  ದಲೈಲಾಮಾ ಅವರು, ಈ ಸುನಾಮಿ ಅನಾಹುತದಲ್ಲಿ ಬದುಕುಳಿದ ಪುಟ್ಟ ಬಾಲಕನನ್ನು ಸಂತೈಸುತ್ತಾ, ಮಗು ಇತರರ ಕಾಳಜಿ ಇಲ್ಲದೇ ಬದುಕುತ್ತಿದ್ದರೆ ಆತನಿಗೆ ಪ್ರೀತಿಯೊಂದೇ ತುಂಬಾ ಅಗತ್ಯವಾದ ಆರೈಕೆ ಎಂದು ಹೇಳಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು