ಅಯೋಧ್ಯೆಯಲ್ಲಿ ಸೇನೆ, ಬಿಜೆಪಿ ಶಕ್ತಿಪ್ರದರ್ಶನ; ದ್ರೋಹಿಗಳನ್ನು ರಾಮ ಆಶೀರ್ವದಿಸಲ್ಲ: ಸಂಜಯ್ ರಾವುತ್‌ ಕಿಡಿ

By Kannadaprabha NewsFirst Published Apr 10, 2023, 11:56 AM IST
Highlights

ನಗರದ ಪ್ರಮುಖ ರಸ್ತೆಗಳಲ್ಲಿ ಸೇನೆ ಮತ್ತು ಬಿಜೆಪಿ ಕಾರ್ಯಕರ್ತರ ಜೊತೆಗೂಡಿ ಬೃಹತ್‌ ರೋಡ್‌ ಶೋ ನಡೆಸಿದ್ದಾರೆ. ಭಾನುವಾರ ತಮ್ಮ ಸಚಿವರ ಸಂಪುಟದ ಸಹದ್ಯೋಗಿಗಳು ಮತ್ತು ಸಾವಿರಾರು ಕಾರ್ಯಕರ್ತರೊಡನೆ ಅಯೋಧ್ಯೆಗೆ ಆಗಮಿಸಿದ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ರಾಮಲಲ್ಲಾನ ದರ್ಶನ ಪಡೆದು ಬಳಿಕ ಮಂದಿರ ನಿರ್ಮಾಣದ ಕಾಮಗಾರಿ ವೀಕ್ಷಿಸಿದರು.

ಅಯೋಧ್ಯೆ (ಏಪ್ರಿಲ್ 10, 2023): 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ರಣಕಹಳೆ ಮೊಳಗಿಸಿರುವ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಮತ್ತು ಬಿಜೆಪಿ ನಾಯಕರು, 2024ರಲ್ಲಿ ಮಹಾರಾಷ್ಟ್ರದಾದ್ಯಂತ ಕೇಸರಿ ಧ್ವಜ ಮತ್ತೆ ಹಾರಾಡಲಿದೆ ಎಂದು ಘೋಷಿಸಿದ್ದಾರೆ.

ಇದೇ ವೇಳೆ ನಗರದ ಪ್ರಮುಖ ರಸ್ತೆಗಳಲ್ಲಿ ಸೇನೆ (Shivsena) ಮತ್ತು ಬಿಜೆಪಿ (BJP) ಕಾರ್ಯಕರ್ತರ ಜೊತೆಗೂಡಿ ಬೃಹತ್‌ ರೋಡ್‌ ಶೋ (Road Show) ನಡೆಸಿದ್ದಾರೆ. ಭಾನುವಾರ ತಮ್ಮ ಸಚಿವರ ಸಂಪುಟದ ಸಹದ್ಯೋಗಿಗಳು ಮತ್ತು ಸಾವಿರಾರು ಕಾರ್ಯಕರ್ತರೊಡನೆ ಅಯೋಧ್ಯೆಗೆ (Ayodhya) ಆಗಮಿಸಿದ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್‌ ಶಿಂಧೆ (Maharashtra Chief Minister Eknath Shinde) ರಾಮಲಲ್ಲಾನ (Ram Lalla) ದರ್ಶನ ಪಡೆದು ಬಳಿಕ ಮಂದಿರ ನಿರ್ಮಾಣದ (Temple Construction) ಕಾಮಗಾರಿ ವೀಕ್ಷಿಸಿದರು. ಜೊತೆಗೆ ಹನುಮಾನ್‌ಗಢಿ ದೇಗುಲದಲ್ಲಿ (Temple) ಸಿಎಂ ಏಕನಾಥ್‌ ಶಿಂಧೆಗೆ ಅರ್ಚಕರು ಗದೆ ನೀಡಿ ಆರ್ಶೀವದಿಸಿದರು.

ಇದನ್ನು ಓದಿ: ಉದ್ಧವ್‌ ಠಾಕ್ರೆ ವಿಶ್ವಾಸಮತಕ್ಕೆ ಸೂಚಿಸಿದ ಗೌರ್ನರ್‌ ಬಗ್ಗೆ ಸುಪ್ರೀಂ ಕಿಡಿ: ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದ ಕೋರ್ಟ್‌

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಏಕನಾಥ್‌ ಶಿಂಧೆ ‘ಕೆಲವರಿಗೆ ಹಿಂದುತ್ವವೆಂದರೆ ಅಲರ್ಜಿ, ಕಾರಣ ಹಿಂದುತ್ವ ಇಂದು ದೇಶದ ಪ್ರತಿ ಮನೆಯನ್ನೂ ಪ್ರವೇಶಿಸಿದೆ. ಹಿಂದೆ ಕೆಲವರು ಮಂದಿರ ನಿರ್ಮಾಣ ಆಗುವ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಮಂದಿರ ನಿರ್ಮಾಣ ಕಾಮಗಾರಿ ಅತ್ಯಂತ ವೇಗವಾಗಿ ಸಾಗಿದೆ. ರಾಮಮಂದಿರದ ಬಗ್ಗೆ ಅನುಮಾನ ಹೊಂದಿದವರನ್ನು ಜನತೆ ಮನೆಗೆ ಕಳುಹಿಸಿದ್ದಾರೆ. ಕೋಟ್ಯಂತರ ಹಿಂದೂಗಳ ಸುಂದರ ರಾಮಮಂದಿರ  (Ram Mandir) ಕನಸು ನನಸಾಗುವ ಕ್ಷಣ ಸನ್ನಿಹಿತವಾಗಿದೆ. ಇದನ್ನು ಸಾಧ್ಯವಾಗಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮತ್ತು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Uttar Pradesh Chief Minister Yogi Adityanath) ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ಹೇಳಿದರು.

ದ್ರೋಹಿಗಳನ್ನು ರಾಮ ಆಶೀರ್ವದಿಸಲ್ಲ: ಸಂಜಯ್‌ ರಾವುತ್‌
ಮುಂಬೈ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಅಯೋಧ್ಯೆ ಭೇಟಿ ಬಗ್ಗೆ ವ್ಯಂಗ್ಯವಾಡಿರುವ ಉದ್ಧವ್‌ ಠಾಕ್ರೆ (Uddhav Thackeray) ಶಿವಸೇನೆ ಬಣದ ನಾಯಕ ಸಂಜಯ್‌ ರಾವುತ್‌ (Sanjay Raut) , ದ್ರೋಹಿಗಳನ್ನು ಎಂದಿಗೂ ಶ್ರೀರಾಮ (Sri Ram) ಆರ್ಶೀವದಿಸುವುದಿಲ್ಲ ಎಂದಿದ್ದಾರೆ.

 

ಇದನ್ನೂ ಓದಿ: ಶಿವಸೇನೆಯ ಚಿಹ್ನೆ ಕದ್ದ ಕಳ್ಳನಿಗೆ ತಕ್ಕ ಪಾಠ ಕಲಿಸಿ; ಚುನಾವಣಾ ಆಯೋಗ ಮೋದಿ ಗುಲಾಮ: ಉದ್ಧವ್‌ ಠಾಕ್ರೆ ಕಿಡಿ

click me!