ಜಿಯೋ, ಏರ್‌ಟೆಲ್‌ಗೆ BSNL ಬಿಗ್ ಶಾಕ್: ಕೇವಲ ₹1 ರೀಚಾರ್ಜ್‌ಗೆ 24 ದಿನ ವ್ಯಾಲಿಡಿಟಿ, ಪ್ರತಿದಿನ 1GB ಡೇಟಾ!

Published : Sep 19, 2026, 12:23 PM IST
BSNL Re 1 Plan Comeback

ಸಾರಾಂಶ

BSNL ಹೊಸ ಗ್ರಾಹಕರನ್ನು ಸೆಳೆಯಲು ಕೇವಲ ₹1 ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ಯೋಜನೆ ಮರುಪರಿಚಯಿಸಿದೆ. ಹೊಸ ಸಿಮ್ ಖರೀದಿಸುವ ಗ್ರಾಹಕರಿಗೆ ಮಾತ್ರ ಲಭ್ಯವಿರುವ ಈ ಎಫ್‌ಆರ್‌ಸಿ (FRC) ಯೋಜನೆಯಲ್ಲಿ 24 ದಿನಗಳವರೆಗೆ ಪ್ರತಿದಿನ 1GB ಡೇಟಾ, ಅನಿಯಮಿತ ಕರೆ ಮತ್ತು 100 SMS ಸೌಲಭ್ಯ ಸಿಗಲಿದೆ.

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕೇವಲ ₹1ಕ್ಕೆ ನೀಡುವ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯನ್ನು ಮತ್ತೆ ಪರಿಚಯಿಸಿದೆ. ಈ ಬಾರಿ ಹೊಸ ಗ್ರಾಹಕರನ್ನು BSNLಗೆ ಸೆಳೆಯುವ ಉದ್ದೇಶದಿಂದ ಈ ಯೋಜನೆಯನ್ನು ಮರು ಆರಂಭಿಸಲಾಗಿದೆ.

ಏನಿದು ಎಫ್‌ಆರ್‌ಸಿ ಯೋಜನೆ?

ಕೇವಲ ಇದು First Recharge Coupon (FRC) ಯೋಜನೆಯಾಗಿದೆ. ಅಂದರೆ ಈಗಾಗಲೇ ಬಿಎಸ್ಎನ್‌ಎಲ್‌ ಬಳಸುತ್ತಿರುವ ಗ್ರಾಹಕರಿಗೆ ಈ ಆಫರ್ ಇಲ್ಲ. ಇದೇ ಮೊದಲ ಬಾರಿಗೆ ಹೊಸದಾಗಿ BSNL ಸಿಮ್ ಕಾರ್ಡ್ ಪಡೆಯುವ ಗ್ರಾಹಕರಿಗೆ ಮಾತ್ರ ಈ ಆಫರ್ ಲಭ್ಯವಿರುತ್ತದೆ. ಈ ಯೋಜನೆಯ ವ್ಯಾಲಿಡಿಟಿ 24 ದಿನಗಳಾಗಿದ್ದು, ಈ ರೀಚಾರ್ಜ್ ಪ್ಲಾನ್ ದೇಶಾದ್ಯಂತ ಸಿಗುತ್ತಿದೆ. ನೀವು ಹೊಸದಾಗಿ BSNL ಸಿಮ್ ಖರೀದಿಸಿದರೆ ಕೇವಲ ಒಂದು ರೂಪಾಯಿ ರೀಚಾರ್ಜ್ ಮಾಡಿಸುವ ಮೂಲಕ 24 ವ್ಯಾಲಿಡಿಟಿಯೊಂದಿಗೆ ಪ್ರತಿದಿನ 1GB ಡೇಟಾ ಪಡೆಯಬಹದಾಗಿದೆ.

ಇದನ್ನೂ ಓದಿ: ದಸರಾ ಹಬ್ಬಕ್ಕೆ ಮೊದಲೇ ಜಿಯೋ ಗ್ರಾಹಕರಿಗೆ ಬಂಪರ್ ಗಿಫ್ಟ್: ಇಷ್ಟು ಕಡಿಮೆ ಬೆಲೆಗೆ 5G ಡೇಟಾ ಪಡೆಯೋದು ಹೇಗೆ?

BSNL ₹1 ರೀಚಾರ್ಜ್ ಪ್ಲಾನ್‌ನ ಪ್ರಯೋಜನಗಳೇನು?

ಕೇವಲ ₹1 ರೀಚಾರ್ಜ್ ಮಾಡಿದರೆ 24 ದಿನಗಳ ಸೇವಾ ವ್ಯಾಲಿಡಿಟಿ ಸಿಗುತ್ತದೆ. ಈ ಅವಧಿಯಲ್ಲಿ ಅನಿಯಮಿತ ವಾಯ್ಸ್ ಕಾಲಿಂಗ್, ಪ್ರತಿದಿನ 1GB ಡೇಟಾ ಮತ್ತು 100 SMS ಸಿಗಲಿದೆ. ಅಂದರೆ 24 ದಿನಗಳಲ್ಲಿ ಒಟ್ಟು 24GB ಡೇಟಾ ಬಳಸಬಹುದಾಗಿದೆ. ಈ ಯೋಜನೆಯ ಬೆಲೆ ಕೇವಲ ₹1 ಆಗಿದ್ದು, ದಿನಕ್ಕೆ ಸರಾಸರಿ ಸುಮಾರು 4 ಪೈಸೆ ವೆಚ್ಚವಾಗುತ್ತದೆ. ಆದರೆ ಈ ಆಫರ್ ಅನ್ನು ಒಬ್ಬರು ಒಮ್ಮೆ ಮಾತ್ರ ಬಳಸಬಹುದು. ಮತ್ತೆ ಈ ಯೋಜನೆ ಪಡೆಯಬೇಕಾದರೆ ಹೊಸ ಸಿಮ್ ಕಾರ್ಡ್ ಖರೀದಿಸಬೇಕಾಗುತ್ತೆ. ಸಿಮ್ ಸಕ್ರಿಯವಾಗಿರಲು ನಂತರ BSNLನ ಸಾಮಾನ್ಯ ಪ್ರೀಪೇಯ್ಡ್ ಯೋಜನೆಗಳಲ್ಲಿ ರೀಚಾರ್ಜ್ ಮಾಡಬೇಕಾಗುತ್ತದೆ. ಈ ಯೋಜನೆ ದೇಶಾದ್ಯಂತ ಲಭ್ಯವಿರುವ ಸಾಮಾನ್ಯ ಪ್ರೀಪೇಯ್ಡ್ ಪ್ಲಾನ್ ಅಲ್ಲ ಎಂಬುದನ್ನು ಗಮನಿಸಬೇಕು.

ಇದನ್ನೂ ಓದಿ: ದೀಪಾವಳಿಗೆ ಮೊದಲೇ ಮುಕೇಶ್ ಅಂಬಾನಿ ಭರ್ಜರಿ ಗಿಫ್ಟ್: ಜಿಯೋ ಗ್ರಾಹಕರು ₹4,000 ಮೌಲ್ಯದ ಉಚಿತ ಗಿಫ್ಟ್ ಪಡೆಯೋದು ಹೇಗೆ?

BSNL ₹1 ಪ್ಲಾನ್ ಪಡೆಯುವುದು ಹೇಗೆ?

BSNL ಈ ಯೋಜನೆಯನ್ನು ಈ ಹಿಂದೆ ಹಲವು ಬಾರಿ ಪರಿಚಯಿಸಿತ್ತು. ಕೆಲ ಸಂದರ್ಭಗಳಲ್ಲಿ ಆಫರ್ ಅನ್ನು ಹಿಂಪಡೆದಿತ್ತು. ಆದರೆ ಈ ಬಾರಿ ಯೋಜನೆ ಪಡೆಯಲು ಗ್ರಾಹಕರು BSNLನಿಂದ ನೇರವಾಗಿ ಹೊಸ ಸಿಮ್ ಕಾರ್ಡ್ ಪಡೆಯಬೇಕು. ಹೊಸ ಸಿಮ್‌ಗಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡಬಹುದು. ಅಥವಾ ಹತ್ತಿರದ BSNL ಕಚೇರಿ ಅಥವಾ ಅಧಿಕೃತ ರಿಟೇಲರ್‌ಗಳ ಮೂಲಕ ಸಿಮ್ ಪಡೆಯಬಹುದು.

ದೇಶದಲ್ಲೇ ಇಷ್ಟು ಕಡಿಮೆ ಬೆಲೆಗೆ ಇಂತಹ ಪ್ರಯೋಜನಗಳನ್ನು ನೀಡುವ ಯಾವುದೇ ಯೋಜನೆ ಇಲ್ಲ. BSNL ತನ್ನ 4G ನೆಟ್‌ವರ್ಕ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಗ್ರಾಹಕರನ್ನು ಸೇರಿಸಿಕೊಳ್ಳುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಿರುವ ಸಾಧ್ಯತೆ ಇದೆ. ಈಗಾಗಲೇ ನೀವು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸುವರ್ಣ ಗೆಡ್ಡೆ ಗಿಡದಲ್ಲಿ ಬಾಳೆಗೊನೆ; ಬಾಳೆ ಹಣ್ಣನ್ನು ನೋಡಲು ಸುತ್ತ ಹತ್ತೂರಿನ ಜನಜಂಗುಳಿ!
LIC ಗೆ ಸಾವಿರಾರು ಕೋಟಿ ನಷ್ಟ, ಅನಿಲ್ ಅಂಬಾನಿ, ರಿಲಯನ್ಸ್ ಕ್ಯಾಪಿಟಲ್ ವಿರುದ್ಧ ಸಿಬಿಐ ಎಫ್‌ಐಆರ್!