ದೇಶದ ಗಡಿಗಳನ್ನು ಸದಾ ಶತ್ರುಗಳಿಂದ ರಕ್ಷಣೆ ಮಾಡುವುದು ಭಾರತೀಯ ಗಡಿ ಭದ್ರತಾಪಡೆಯ ಕರ್ತವ್ಯವಾಗಿದ್ದು, ಅವರು ಯಾವುದೇ ಹವಾಮಾನ ವೈಪರೀತ್ಯದಡಿಯೂ ಕೆಲಸ ಮಾಡಬಲ್ಲರೂ, ಅದು ರಕ್ತ ಹೆಪ್ಪುಗಟ್ಟುವ ಚಳಿಯೇ ಇರಲಿ, ಬಿರು ಬೇಸಿಗೆಯೇ ಇರಲಿ ಸೇವೆ ಸಲ್ಲಿಸುವುದರಲ್ಲಿ ಭಾರತೀಯ ಯೋಧರು ಸದಾ ಸಿದ್ಧ. ಇದಕ್ಕೊಂದು ಉದಾಹರಣೆ ಈ ವಿಡಿಯೋ. ಯೋಧರೊಬ್ಬರು ಹಾಸಿಗೆಯಂತೆ ಹಾಸಿರುವ ಹಿಮದ ಮೇಲೆ 40 ಸೆಕೆಂಡ್‌ನಲ್ಲಿ 47 ಫುಶ್‌ಅಪ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಭಾರತೀಯ ಗಡಿ ಭದ್ರತಾ ಪಡೆಯ ಟ್ವಿಟ್ಟರ್ ಖಾತೆಯಿಂದ ಈ ವಿಡಿಯೋ ಶೇರ್ ಆಗಿದ್ದು ಈ ವಿಡಿಯೋವನ್ನು 31,000 ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಜನವರಿ 22ರಂದು ಈ ವಿಡಿಯೋ ಪೋಸ್ಟ್ ಆಗಿದೆ. 40 ಸೆಕೆಂಡುಗಳು. 47 ಪುಶ್ ಅಪ್‌ಗಳು ಎಂದು ಬರೆದು #FitIndiaChallenge @FitIndiaOff @IndiaSports @PIBHomeAffairs ಮುಂತಾದ ಖಾತೆಗಳಿಗೆ ಟ್ಯಾಗ್ ಮಾಡಿ ಪೋಸ್ಟ್ ಮಾಡಲಾಗಿದೆ.
40 seconds. 47 push ups.
Bring it ON.
@ pic.twitter.com/dXWDxGh3K6
ಯೋಧನ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೈನಿಕರ ಶಕ್ತಿ ಮತ್ತು ಸಾಮರ್ಥ್ಯದ ಪ್ರದರ್ಶನವಿದು. ಅದ್ಭುತವಾಗಿದೆ. ಸಮರ್ಥ ಹಾಗೂ ಸಧೃಡರಾಗಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.
One Handed Push Ups.
How many can YOU?
Bring it ON. https://t.co/HxadaZ3CcH pic.twitter.com/pcRwl2kTks
ಇನ್ನೊಂದು ವಿಡಿಯೋದಲ್ಲಿ ಇದೇ ರೀತಿ ಹಿಮದಲ್ಲಿ ಯೋಧ ಒಂದೇ ಕೈಯಲ್ಲಿ ಪುಶ್‌ಅಪ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಪ್ರವಾಹವೇ ಬರಲಿ, ಭೂಕಂಪವಾಗಲಿ ಹೀಗೆ ಎಂಥಹದ್ದೇ ನೈಸರ್ಗಿಕ ವಿಕೋಪಗಳು ಸಂಭವಿಸಲಿ ತಕ್ಷಣವೇ ದೇಶದ ನಾಗರಿಕ ರಕ್ಷಣೆಗೆ ಧಾವಿಸುವುದು ಭಾರತೀಯ ಸೇನೆ. ಮಳೆ, ಮೈ ಕೊರೆಯುವ ಚಳಿ, ಬಿಸಿಲೆನ್ನದೆ ದೇಶ ಕಾಯವ ಯೋಧರು ಪೋಷಕರು, ಹೆಂಡತಿ ಮಕ್ಕಳಿಂದ ದೂರವುಳಿದು ದೇಶವನ್ನು ಕಾಯಲು ತೆರಳುತ್ತಾರೆ. ತಾವಿದ್ದಲ್ಲೇ ತಮ್ಮ ಜೊತೆ ಇರುವವರನ್ನೇ ಕುಟುಂಬವೆಂದು ತಿಳಿದು ಸಂಭ್ರಮಿಸಿ ಖುಷಿ ಪಡುವ ಸೈನಿಕರ ಮನಸ್ಥಿತಿ ಪದಗಳಿಗೆ ನಿಲುಕದ್ದು.
ಹಿಮಪಾತ, ರಸ್ತೆ ಸ್ಥಗಿತ : ಗರ್ಭಿಣಿಯನ್ನು ಸ್ಟ್ರೆಚರ್‌ನಲ್ಲಿ ಹೊತ್ತು ಆಸ್ಪತ್ರೆ ಸೇರಿಸಿದ ಸೇನೆ
ಭಾರತೀಯ ಸೇನಾ ಯೋಧರು ಸಂದರ್ಭ ಎಂತಹುದ್ದೇ ಇರಲಿ ಆ ಕ್ಷಣವನ್ನು ಉಲ್ಲಾಸಮಯಗೊಳಿಸುವುದರಲ್ಲಿ ಎತ್ತಿದ ಕೈ. ದೇಶ ಸಂಕಷ್ಟಕ್ಕೀಡಾದಾಗಲೆಲ್ಲಾ ಮುಂದೋಡಿ ಬಂದು ನೆರವಿಗೆ ಬರುವ ಭಾರತೀಯ ಯೋಧರು ತಮ್ಮ ಸಂಸ್ಕೃತಿ ಸಂಪ್ರದಾಯ ಪಾಲಿಸುವುದರ ಜೊತೆ ನೃತ್ಯಗಳನ್ನು ಮಾಡಿ ಸಂಭ್ರಮಿಸುವುದರಲ್ಲೂಅಷ್ಟೇ ಹುಶಾರು. ತಾವಿರುವ ಸ್ಥಳ ಎಂತಹದ್ದೇ ಇರಲಿ ಅಲ್ಲಿ ಉತ್ಸಾಹ ತುಂಬುವ ಯೋಧರು ಕೆಲ ದಿನಗಳ ಹಿಂದೆ ಮೈನಸ್‌ಗಿಂತಲೂ ಕಡಿಮೆ ತಾಪಮಾನವಿರುವ ಹಿಮದಿಂದ ಆವೃತ್ತವಾದ ಪ್ರದೇಶದಲ್ಲಿ ಸಖತ್ ಆಗಿ ಖುಕುರಿ ಡಾನ್ಸ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಮೈನಸ್ ತಾಪಮಾನದಲ್ಲಿ ಖುಕುರಿ ಡಾನ್ಸ್... ಮೈ ಕೊರೆಯುವ ಚಳಿಯಲ್ಲಿ ಯೋಧರ ಸಖತ್ ಸ್ಟೆಪ್
ಗೋರ್ಖಾ ರೆಜಿಮೆಂಟ್‌ನಲ್ಲಿ ಗೋರ್ಖಾ ಸಂಸ್ಕೃತಿಯಾದ ಈ ಖುಕುರಿ ನೃತ್ಯ ಯೋಧರಿಗೆ ಚಿರಪರಿಚಿತ. ಸಣ್ಣದಾದ ಚೂರಿಯನ್ನು ಹಿಡಿದುಕೊಂಡು ಮಾಡುವ ನೃತ್ಯ ಇದಾಗಿದ್ದು, ಇದು ವಿಜಯವನ್ನು ಸಂಕೇತಿಸುತ್ತದೆ. ಇದನ್ನು ಸೈನಿಕರ ಗೌರವಾರ್ಥ ಪ್ರದರ್ಶಿಸಲಾಗುತ್ತದೆ. ಗಡಿಯನ್ನು ಕಾಪಾಡುವುದು ಸಣ್ಣ ಕೆಲಸವಲ್ಲ, ಅದರಲ್ಲೂ ವಿಶೇಷವಾಗಿ ಮೈನಸ್ ಶೂನ್ಯ ತಾಪಮಾನವನ್ನು ಎದುರಿಸುತ್ತಿದ್ದರೆ ಇನ್ನಷ್ಟು ಕಷ್ಟ. ಆದರೆ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಈ ಮೈನಸ್ ತಾಪಮಾನದಲ್ಲೂ ರಾಷ್ಟ್ರಧ್ವಜದ ಮುಂದೆ ಭಾರತೀಯ ಯೋಧರು ಖುಕುರಿ ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ.