ಹೂ ಹಾರ ಹಾಕಿಸಿಕೊಳ್ಳೋ ವೇಳೆ ಹುಡುಗಾಟ... ಕೈಗೆ ಸಿಗದೆ ಕಾಡಿಸಿದ ವಧು

Suvarna News   | Asianet News
Published : Jan 24, 2022, 12:40 PM IST
ಹೂ ಹಾರ ಹಾಕಿಸಿಕೊಳ್ಳೋ ವೇಳೆ ಹುಡುಗಾಟ...  ಕೈಗೆ ಸಿಗದೆ ಕಾಡಿಸಿದ ವಧು

ಸಾರಾಂಶ

  ಹೂ ಹಾರ ಹಾಕಲು ಬಂದ ವರ ಕೈಗೆ ಸಿಗದೆ ವರನ ಕಾಡಿಸಿದ ವಧು ಹೂ ಹಾರ ಹಾಕಿಸಿಕೊಳ್ಳೋ ವೇಳೆ ತುಂಟಾಟ

ಮದುವೆ ಎಂದ ಮೇಲೆ ಅಲ್ಲಿರುವ ತಮಾಷೆ ಫನ್‌ಗಳಿಗೆ ಲೆಕ್ಕವೇ ಇರುವುದಿಲ್ಲ. ಮದುವೆಯೊಂದಲ್ಲಿ ಹೂ ಹಾರ ಹಾಕಲು ವರ ಮುಂದಾದಾಗ ವಧು ದೇಹದಲ್ಲಿ ಮೂಳೆಯೇ ಇಲ್ಲವೇನೋ ಎಂಬುವಷ್ಟು ಹಿಂಭಾಗಕ್ಕೆ ಬಾಗಿ ವರನನ್ನು ಕಾಡಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ವಧುವಿನ ತುಂಟ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ವಿಡಿಯೋದಲ್ಲಿ ಕಾಣಿಸುವಂತೆ ವರ ಶೆರ್ವಾನಿ ತೊಟ್ಟಿದ್ದು, ವಧು ಸುಂದರವಾದ ಲೆಹಂಗಾ ತೊಟ್ಟಿದ್ದಾಳೆ. ಇಬ್ಬರ ಮುಖದಲ್ಲೂ ಕಳೆ ಕಟ್ಟಿದ ನಗುವಿದ್ದು, ವರ ವಧುವಿನ ಕೊರಳಿಗೆ ಹೂ ಹಾರ ಹಾಕಲು ಯತ್ನಿಸಿದಾಗ ವಧು ಮೊದಲಿಗೆ ಸ್ವಲ್ಪ ಹಿಂಭಾಗಕ್ಕೆ ಬಾಗುತ್ತಾಳೆ. ಈ ವೇಳೆ ವರ ಇನ್ನು ಸ್ವಲ್ಪ ಬಾಗಿದ್ದು, ಈ ವೇಳೆ ವಧು ಆತನಿಗೆ ಹೂ ಹಾರ ಹಾಕಲು ಕೊರಳು ಸಿಗದಷ್ಟು ಹಿಂಭಾಗಕ್ಕೆ, ಕಮಾನಿನಂತೆ ಬಾಗುತ್ತಾಳೆ. ಕೊನೆಗೂ ವರ ವಧುವಿನ ಕೊರಳಿಗೆ ಹೂ ಹಾರ ಹಾಕಿಯೇ ಬಿಡುತ್ತಾನೆ. 

ಅಲ್ಲದೇ ಮತ್ತೆ ನೇರವಾಗಿ ನಿಲ್ಲಲು ಆಕೆ ವರನ ಕೈಯನ್ನು ಹಿಡಿಯುತ್ತಾಳೆ. ಈ ವಿಡಿಯೋದಲ್ಲಿ ಹಿನ್ನೆಯಲ್ಲಿ ಸಮಂತಾ ನಟಿಸಿರುವ ಪುಷ್ಪಾ ಸಿನಿಮಾದ ಹೂ  ಅಂಟಾವಾ ಮಾವ ಹಾಡು ಕೇಳಿ ಬರುತ್ತಿದೆ. 

 

ಮೇಕಪ್ ಆರ್ಟಿಸ್ಟ್ ಪಾರೂಲ್‌ ಗಾರ್ಗ್ (Parul Garg) ಎಂಬುವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಆರು ದಿನಗಳ ಹಿಂದೆ ಪೋಸ್ಟ್ ಮಾಡಿದ್ದು, ಈ ವಿಡಿಯೋವನ್ನು 9 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ವಧು ಹಿಂಭಾಗಕ್ಕೆ ಬೆಂಡಾದ ರೀತಿಯನ್ನು ಕೆಲವರು ಕೀನು ರೀವ್ಸ್ (Keanu Reeves) ಅಭಿನಯದ ದಿ ಮ್ಯಾಟ್ರಿಕ್ಸ್‌ (The Matrix) ಸಿನಿಮಾದ ಸಾಹಸಗಳಿಗೆ ಹೋಲಿಸಿದ್ದಾರೆ. ಬಹುಶಃ ಆಕೆ ಯೋಗ ಟೀಚರ್‌ ಆಗಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು ಮೆಟ್ರಿಕ್ಸ್‌ ರೀತಿಯ ವಧುವನ್ನು ಜೀವನದಲ್ಲಿ ಮೊದಲ ಬಾರಿ ನೋಡುತ್ತಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ. 

ಅಕ್ಕನ ಮದುವೆಲಿ ತಂಗಿ ಹಾಗೂ ಸ್ನೇಹಿತರ ಜಬರ್‌ದಸ್ತ್‌ ಡಾನ್ಸ್‌

ಈ ವೈಜ್ಞಾನಿಕ ಹಾಗೂ ಕಾಲ್ಪನಿಕವಾದ ಈ ಆಕ್ಷನ್ ಸಿನಿಮಾದ ಒಂದು ದೃಶ್ಯದಲ್ಲಿ, ರೀವ್ಸ್‌ನ ನಿಯೋ ಎಂಬಾತನ ಬಳಿ ಬಂದು ಒಬ್ಬ ಚಿಕ್ಕ ಹುಡುಗ ಅವನಿಗೆ ಚಮಚ ಇಲ್ಲ ಎಂದು ಹೇಳಿದಾಗ ನಿಯೋ ಒಂದು ಚಮಚವನ್ನು ಒಮ್ಮೆಗೆ ಬಗ್ಗಿಸಿ ಬೆಂಡಾಗಿಸುವ ದೃಶ್ಯವಿದೆ. 

ಇದಕ್ಕೂ ಮೊದಲು ಹರ್ಯಾಣದ ಜೋಡಿಗಳ ಮದುವೆ ಆಮಂತ್ರಣ ಪತ್ರಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಆ ಆಮಂತ್ರಣದಲ್ಲಿ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಕೇಳಲಾಗಿತ್ತು. ಹೋರಾಟ ಇನ್ನು ಚಾಲನೆಯಲ್ಲಿದೆ. ಈಗ ನಮ್ಮ ಹೋರಾಟ ಕನಿಷ್ಠ ಬೆಂಬಲ ಬೆಲೆಗಾಗಿ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿತ್ತು.

Bride Groom Dance: ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಯ್ತು ವಧು ವರನ ಜಬರ್‌ದಸ್ತ್‌ ಡಾನ್ಸ್‌

ಇತ್ತೀಚೆಗೆ ಮದುವೆಯಲ್ಲಿ ಹಳೆ ಸಂಪ್ರದಾಯಗಳನ್ನು ಮುರಿದು ಹೊಸತನ ಮೆರೆಯುವುದು ಸಾಮಾನ್ಯ ಎನಿಸಿ ಬಿಟ್ಟಿದೆ. ಮದುವೆ ಕಾಗದಗಳಿಂದ ಹಿಡಿದು ಅಲಂಕಾರ ಸಂಪ್ರದಾಯಗಳಲ್ಲಿಯೂ ಜನ ಇಂದು ಹೊಸತನ ಮೆರೆಯುತ್ತಿದ್ದಾರೆ. ಇದೀಗ ಬೆಂಗಾಲಿ ಸಮುದಾಯವೊಂದು ಮದುವೆಯ ಊಟದ ಮೆನುವನ್ನು ಅಡಿಕೋಲಿನಲ್ಲಿ ಬರೆಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಮದುವೆಯ ಆಹಾರ ಮೆನು ಅಡಿಕೋಲಿನಲ್ಲಿ ಪ್ರಿಂಟ್‌ ಆಗಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Morphing Wing: ಹಾರಾಡುವಾಗಲೇ ಕ್ಷಣ ಮಾತ್ರದಲ್ಲಿ ಬದಲಾಗುತ್ತೆ ಫೈಟರ್‌ ಜೆಟ್‌ ಶೇಪ್‌, ಹೊಸ ಟೆಕ್ನಾಲಜಿ ಪರೀಕ್ಷಿಸಿದ ಡಿಆರ್‌ಡಿಓ
ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ: 38 ವರ್ಷ ಬರೀ ದ್ರವಾಹಾರದಲ್ಲೇ ಬದುಕಿದ್ದ ಪಂಚಾಲ್