ಆಟವಾಡುತ್ತಾ ಅಂಗಳದಲ್ಲಿದ್ದ ತೆರೆದ ಬಾವಿಗೆ ಬಿದ್ದ ಬಾಲಕ

Published : Dec 21, 2022, 04:03 PM IST
ಆಟವಾಡುತ್ತಾ ಅಂಗಳದಲ್ಲಿದ್ದ ತೆರೆದ ಬಾವಿಗೆ ಬಿದ್ದ ಬಾಲಕ

ಸಾರಾಂಶ

ಪುಟ್ಟ ಬಾಲಕನೋರ್ವ ಮನೆ ಮುಂದಿದ್ದ ಬಾವಿಗೆ ಅಚಾನಕ್ ಆಗಿ ಬಿದ್ದಿದ್ದು, ಈ ಆಘಾತಕಾರಿ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭೋಪಾಲ್: ಪುಟ್ಟ ಬಾಲಕನೋರ್ವ ಮನೆ ಮುಂದಿದ್ದ ಬಾವಿಗೆ ಅಚಾನಕ್ ಆಗಿ ಬಿದ್ದಿದ್ದು, ಈ ಆಘಾತಕಾರಿ ದೃಶ್ಯದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಧ್ಯಪ್ರದೇಶದ ದಮೋಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆದರೆ ಬಾಲಕನ ಜೊತೆಯಲ್ಲಿದ್ದ ಇತರ ಪುಟ್ಟ ಬಾಲಕರು ಬೊಬ್ಬೆ ಹೊಡೆದು ಎಲ್ಲರನ್ನು ಕರೆದ ಪರಿಣಾಮ ಪುಟ್ಟ ಬಾಲಕನನ್ನು ಈ ದೊಡ್ಡ ಅನಾಹುತದಿಂದ ಪಾರು ಮಾಡಲಾಗಿದೆ. ಮಧ್ಯಪ್ರದೇಶದ ದಮೋಹ್ ಜಿಲ್ಲೆ (Damoh district) ಈ ಘಟನೆ ನಡೆದಿದೆ. ಈ ಆಘಾತಕಾರಿ ದೃಶ್ಯ ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ವಿಡಿಯೋದಲ್ಲಿ ಕಾಣಿಸುವಂತೆ ಇಬ್ಬರು ಮಕ್ಕಳು (Children) ಮನೆ ಎದುರಿನ ಖಾಲಿ ಜಾಗದಲ್ಲಿ ಆಟವಾಡುತ್ತಿದ್ದಾರೆ.  ಓರ್ವ ಬಾಲಕ ತನ್ನ ಸೈಕಲ್‌ನಲ್ಲಿ ಆಟವಾಡುತ್ತಿದ್ದರೆ, ಮತ್ತೊಬ್ಬ ಬಾಲಕ ಅಲ್ಲೇ ಇದ್ದ ಒಂದು ತೆರೆದ ಬಾವಿಯ ಮೇಲ್ಭಾಗಕ್ಕೆ ಹತ್ತಿದ್ದಾನೆ. ತೆರೆದ ಬಾವಿಯ ಮೇಲೆ ಶೀಟು ಇಡಲಾಗಿದ್ದು, ಮಗು ಬಾವಿಯ (Well) ಮೇಲೆ ಅಡ್ಡಲಾಗಿ ಇಟ್ಟ ಶೀಟೊಂದರ ಮೇಲೆ ಕಾಲಿಟ್ಟಿದ್ದು, ಈ ವೇಳೆ ಶೀಟು ಕೆಳಗೆ ಜಾರಿದ್ದು, ಬಾಲಕ ಬಾವಿಯ ಒಳಗೆ ಬಿದ್ದಿದ್ದಾನೆ. ಈ ವೇಳೆ ಬಾಲಕನ ಜೊತೆಯಲ್ಲಿದ್ದ ಮಕ್ಕಳು ಜೋರಾಗಿ ಬೊಬ್ಬೆ ಹೊಡೆದಿದ್ದಾರೆ. ಮಕ್ಕಳ ಕೂಗು ಕೇಳಿ ಅಲ್ಲಿಗೆ ದೊಡ್ಡವರೆಲ್ಲಾ ಆಗಮಿಸಿದ್ದಾರೆ. ನಂತರ ಹಗ್ಗವೊಂದನ್ನು ಕೆಳಗೆ ಬಿಟ್ಟು ಕೇವಲ ಮೂರು ನಿಮಿಷದಲ್ಲಿ ಬಾಲಕನನ್ನು ಪಾರು ಮಾಡಿದ್ದಾರೆ. 

50 ಅಡಿ ಆಳದ ಬಾವಿಗೆ ಬಿದ್ದ ಚಿರತೆ... ರಕ್ಷಣೆ ಮಾಡುತ್ತಿರುವ ವಿಡಿಯೋ ವೈರಲ್‌

ಪವನ್ ಜೈನ್ (Pawan Jain) ಎಂಬುವವರ ಮನೆ ಮುಂದೆ ಈ ಘಟನೆ ನಡೆದಿದೆ. 

ನೀರಿಲ್ಲದ ಬಾವಿಗೆ ಹಾರಿದ ಮಹಿಳೆಯ ರಕ್ಷಿಸಿದ ಪೊಲೀಸರು


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!