
ನವದೆಹಲಿ (ಜೂ. 26): ಅಸ್ಸಾಂನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ತಾನೇ ಕಾರಣ ಎಂದು ಹೇಳಿಕೆ ಕೊಟ್ಟನಂತರ ಪ್ರಧಾನಿ ಮೋದಿ ದೂರ ಇಟ್ಟಿದ್ದ ಬಿಜೆಪಿ ನಾಯಕ ರಾಮ್‌ಮಾಧವ್, ಸಾಕಷ್ಟುಕಸರತ್ತು ಮಾಡಿ ಆರ್‌ಎಸ್‌ಎಸ್ ಮಧ್ಯಸ್ಥಿಕೆಯ ಕಾರಣದಿಂದ ಮತ್ತೆ ಮೋದಿ ಸಾಹೇಬರಿಗೆ ಹತ್ತಿರವಾಗುತ್ತಿದ್ದಾರೆ.
ಭಾರತ ಹಣಿಯಲು ಚೀನಾ ಮೆಗಾ ಪ್ಲಾನ್; ಇದಕ್ಕೆಲ್ಲಾ ಭಾರತ ಹೆದರಲ್ಲ ಬಿಡಿ..!
ಮೋದಿ ಅಮೆರಿಕಕ್ಕೆ ಹೋಗಿ ನಡೆಸಿದ ‘ಹೌಡಿ ಮೋದಿ’ಯಲ್ಲಿ ಮತ್ತು ಡೊನಾಲ್ಡ್ ಟ್ರಂಪ್ ಭಾರತಕ್ಕೆ ಬಂದಾಗ ಸಹ ಎಲ್ಲಿಯೂ ರಾಮ್‌ಮಾಧವ್ ಕಾಣಿಸಿಕೊಂಡಿರಲಿಲ್ಲ. ಒಂದು ಕಾಲದಲ್ಲಿ ಮೋದಿ ಅವರಿಗೆ ವಿದೇಶಾಂಗ ವ್ಯವಹಾರಗಳಲ್ಲಿ ಸಲಹೆ ನೀಡುತ್ತಿದ್ದ ರಾಮ್‌ಮಾಧವ್ ಮತ್ತು ಅಮಿತ್ ಶಾ ನಡುವಿನ ಸಂಬಂಧ ಅಷ್ಟಕಷ್ಟೆ. ಹೀಗಾಗಿಯೇ ರಾಮ್‌ಮಾಧವ್ ಅವರನ್ನು ರಾಜ್ಯಸಭೆಗೆ ತಂದು ಮಂತ್ರಿ ಮಾಡಬೇಕು ಎಂಬ ಸಲಹೆ ಆರ್‌ಎಸ್‌ಎಸ್ ಕಡೆಯಿಂದ ಬಂದರೂ ಮೋದಿ ಒಪ್ಪಿರಲಿಲ್ಲ.
ಆದರೆ ನೇಪಾಳದ ಜೊತೆಗಿನ ಸಂಬಂಧಗಳಲ್ಲಿ ಸಮಸ್ಯೆ ಕಂಡುಬಂದಿರುವುದರಿಂದ ಮೋದಿ ತೆರೆಯ ಹಿಂದಿನ ಮಾತುಕತೆ ನಡೆಸಲು ರಾಮ್‌ಮಾಧವ್‌ರನ್ನು ಮತ್ತೆ ಕರೆಸಿಕೊಂಡಿದ್ದಾರಂತೆ. ರಾಮ್‌ಮಾಧವ್ ಅವರಿಗೆ ಅನೇಕ ನೇಪಾಳಿ ರಾಜಕೀಯ ನಾಯಕರ ಜೊತೆಗೆ ಅನೌಪಚಾರಿಕ ಸಂಬಂಧಗಳಿವೆ.
- ಪ್ರಶಾಂತ್ ನಾತು, ಸುವರ್ನ ನ್ಯೂಸ್ ದೆಹಲಿ ಪ್ರತಿನಿಧಿ
ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ