ಕೊರೋನಾ ವೈರಸ್ ಹೋರಾಟ, ಲಡಾಖ್ ಗಡಿಯಲ್ಲಿ ಚೀನಿ ಸೈನಿಕರ ಜೊತೆ ತಿಕ್ಕಾಟದ ನಡುವೆ ಭಾರತೀಯ ಸೇನೆ ಮತ್ತೊಂದು ಭಾರಿ ವಿಧ್ವಂಸಕ ಕೃತ್ಯಕ್ಕೆ ಮುಂದಾಗಿದ್ದ ಉಗ್ರರಿಗೆ ಭಾರತೀಯ ಸೇನೆ ನರಕ ದರ್ಶನ ಮಾಡಿದೆ. ಈ ಮೂಲಕ ಬಹುದೊಡ್ಡ ದುರಂತವೊಂದು ತಪ್ಪಿದೆ.
ಪುಲ್ವಾಮ(ಜೂ.26): ಭಾರತೀಯ ಸೇನೆ ನಿರಂತರ ಕಾರ್ಯಚರಣೆಯಿಂದ ಬಹುದೊಡ್ಡ ದುರಂತವೊಂದು ತಪ್ಪಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯ ಚೆವಾ ಉಲ್ಲಾರ್ ವಲಯದಲ್ಲಿ ಉಗ್ರರೊಂದಿಗೆ ಭಾರತೀಯ ಸೇನೆ ಗುಂಡಿನ ಕಾಳಗ ನಡೆಸಿತ್ತು. ಗುರುವಾರ(ಜೂ.25) ಸಂಜೆ ಆರಂಭಗೊಂಡ ಗುಂಡಿನ ಕಾಳಗ, ಶುಕ್ರವಾರ(ಜೂ.26) ಬೆಳಗಿನ ಜಾವದ ವರೆಗೂ ನಡೆದಿತ್ತು. ನಿರಂತರ ಹೋರಾಟದಲ್ಲಿ ಭಾರತೀಯ ಸೇನೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ.
24 ತಾಸಿನಲ್ಲಿ 8 ಭಯೋತ್ಪಾದಕರ ಹತ್ಯೆ, ಮಸೀದಿಗೆ ಧಕ್ಕೆಯಾದಗದಂತೆ ಕಾರ್ಯಾಚರಣೆ!
ಉಗ್ರರ ಹೋರಾಟದಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ತ್ರಾಲ್ ವಲಯದ ಸ್ಥಳೀಯರು ಉಗ್ರರ ತರಬೇತಿ ಶಿಬಿರಕ್ಕೆ ಸೇರ್ಪಡೆಗೊಂಡು ವಿಧ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದರು. ಈ ಕುರಿತ ಮಾಹಿತಿ ಪಡೆದ ಭಾರತೀಯ ಸೇನೆಯ 42 ರಾಷ್ಟ್ರೀಯ ರೈಫಲ್ ಹಾಗೂ ಜಮ್ಮ ಕಾಶ್ಮೀರ ಪೊಲೀಸರ ಜಂಟಿ ಕಾರ್ಯಚರಣೆ ನಡೆಸಿತು.
ಜಮ್ಮು&ಕಾಶ್ಮೀರ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರು ಹತ
ಜೂನ್ ತಿಂಗಳಲ್ಲಿ ದಕ್ಷಿಣ ಕಾಶ್ಮೀರದಲ್ಲಿ ನಡೆದ 13ನೇ ಎನ್‌ಕೌಂಟರ್ ಇದು. ಈ ಮೂಲಕ 33 ಉಗ್ರರನ್ನು ಹೊಡೆದುರುಳಿಸಲಾಗಿದೆ. ಇಷ್ಟೇ ಅಲ್ಲ ಉಗ್ರರ ಅಡಗುತಾಣಗಳನ್ನು ಗುರುತಿಸಿ ನಿರ್ನಾಮ ಮಾಡಲಾಗುವುದು ಎಂದು ಸೇನೇ ಹೇಳಿದೆ.