'ನಾನು ಇಂದಿರಾ ಮೊಮ್ಮಗಳು, ಸತ್ಯ ಹೇಳುತ್ತಲೇ ಇರ್ತೆನೆ'

By Suvarna News  |  First Published Jun 26, 2020, 3:55 PM IST

ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಪ್ರಿಯಾಂಕಾ ವಾಗ್ದಾಳಿ/ ನಾನು ಇಂದಿರಾ ಗಾಂಧಿ ಮೊಮ್ಮಗಳು/ ಸತ್ಯ ಹೇಳಲು ಯಾವ ಹಿಂಜರಿಕೆ ಇಲ್ಲ/ ಒಬ್ಬ ಜನಪ್ರತಿನಿಧಿಯಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ


ನವದೆಹಲಿ(ಜೂ. 26) 'ನಾನು ಇಂದಿರಾ ಗಾಂಧಿ ಮೊಮ್ಮಗಳು, ಸತ್ಯ ಹೇಳಲು ಯಾವ ಹಿಂಜರಿಕೆ ಇಲ್ಲ, ಸತ್ಯ ಹೇಳುವುದನ್ನು ನಿಲ್ಲಿಸುವುದಿಲ್ಲ'  ಇದು  ಉತ್ತರ ಪ್ರದೇಶ ಮಕ್ಕಳ ಹಕ್ಕುಗಳ ಆಯೋಗ ನೋಟಿಸ್ ನೀಡಿದ ಮರುದಿನ  ಅವರಿಂದ ಬಂದ ಮಾತು.

ಕಾನ್ ಪುರ ಕೊರೋನಾ ಕೇಂದ್ರದಲ್ಲಿರುವ 57 ಹುಡುಗಿಯರಿಗೆ ಕೊರೋನಾ ಸೋಂಕು ತಗುಲಿದೆ ಎಂದು ಪ್ರಿಯಾಂಕಾ ಹೇಳಿದ್ದಕ್ಕೆ ಆಯೋಗ ನೋಟಿಸ್ ನೀಡಿತ್ತು.

Latest Videos

undefined

ಸುಳ್ಳು ಸುದ್ದಿ ಹಬ್ಬಿಸಿದ್ದ ಪ್ರಿಯಾಂಕಾಗೆ ನೋಟಿಸ್

ಈ ರೀತಿಯ ಬೆದರಿಕೆಗಳು ನನ್ನ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದುಲ್ಲ. ಸಾರ್ವಜನಿಕರ ಹಿತ ಕಾಪಾಡುವುದು ನನ್ನ ಕರ್ತವ್ಯ, ನಾನೊಬ್ಬ ಜನಪ್ರತಿನಿಧಿಯಾಗಿ ಆ ಕೆಲಸ ಮಾಡಿಕೊಂಡೆ ಬರುತ್ತೇನೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ನಾನು ಇಂದಿತರಾ ಗಾಂಧಿ ಮೊಮ್ಮಗಳು, ಬಿಜೆಪಿಯ ವಕ್ತಾರೆ ಅಲ್ಲ ಎಂದಿರುವ ಗಾಂಧಿ ನಿರಾಶ್ರಿತ ಕೇಂದ್ರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರು ಗರ್ಭಿಣಿಯಾಗಿದ್ದಾರೆ ಎಂಬ ಮಾಧ್ಯಮ ವರದಿಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. 

ಕೊರೋನಾ ಸೋಂಕಿಗೆ ತುತ್ತಾಗಿ ಆಗ್ರಾದಲ್ಲಿ  28  ಜನ ಮೃತಪಟ್ಟಿದ್ದಾರೆ ಎಂದು ಸುದ್ದಿ ಶೇರ್ ಮಾಡಿಕೊಂಡಿದ್ದ ಪ್ರಿಯಾಂಕಾಗೆ ಆಗ್ರಾ ಆಡಳಿತ ಸಹ ನೋಟಿಸ್ ನೀಡಿತ್ತು.

 

 

click me!