Deoghar Airport ಎಟಿಸಿಗೆ ನುಗ್ಗಿ ವಿಮಾನಕ್ಕೆ ಕ್ಲಿಯರೆನ್ಸ್‌, 2 ಬಿಜೆಪಿ ಸಂಸದರು ಸೇರಿ 9 ಮಂದಿ ಮೇಲೆ ಎಫ್ಐಆರ್‌!

By Santosh NaikFirst Published Sep 3, 2022, 11:36 AM IST
Highlights

ಜಾರ್ಖಂಡ್‌ನ ದಿಯೋಘರ್ ವಿಮಾನ ನಿಲ್ದಾಣದ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಗೊಡ್ಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಮನೋಜ್ ತಿವಾರಿ ಸೇರಿದಂತೆ 9 ಜನರ ವಿರುದ್ಧ ಕುಂದಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಮಾನ ನಿಲ್ದಾಣದ ಡಿಎಸ್‌ಪಿ ಸುಮನ್ ಅನನ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
 

ರಾಂಚಿ (ಸೆ.3): ಜಾರ್ಖಂಡ್‌ನ ದಿಯೋಘರ್ ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲರ್ (ಎಟಿಸಿ) ಮೇಲೆ ಒತ್ತಡ ಹೇರಿ ರಾತ್ರಿ ವೇಳೆ ಚಾರ್ಟರ್ಡ್ ವಿಮಾನ ಟೇಕ್ ಆಫ್ ಆಗುವಂತೆ ಮಾಡಿದ್ದಕ್ಕಾಗಿ ಬಿಜೆಪಿ ನಾಯಕರು ಸೇರಿದಂತೆ ಒಂಬತ್ತು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇವರ ಪೈಕಿ ಗೊಡ್ಡಾದ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಅವರ ಇಬ್ಬರು ಪುತ್ರರು, ಸಂಸದ ಮನೋಜ್ ತಿವಾರಿ ಮತ್ತು ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರ ಹೆಸರುಗಳು ಸೇರಿವೆ. ಜಿಲ್ಲೆಯ ಕುಂದಾ ಪೊಲೀಸ್ ಠಾಣೆಯಲ್ಲಿ ದಿಯೋಘರ್ ವಿಮಾನ ನಿಲ್ದಾಣದ ಡಿಎಸ್‌ಪಿ ಸುಮನ್‌ ಅಮನ್ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಿದ್ದಾರೆ.  ಸುಮನ್ ಅಮನ್ ಪ್ರಕಾರ, ಆಗಸ್ಟ್ 31 ರಂದು, ಗೊಡ್ಡಾ ಸಂಸದ, ಅವರ ಇಬ್ಬರು ಮಕ್ಕಳು, ಮನೋಜ್ ತಿವಾರಿ ಮತ್ತು ಇತರರು ದಿಯೋಘರ್ ವಿಮಾನ ನಿಲ್ದಾಣದ ಎಟಿಸಿಗೆ ಬಲವಂತವಾಗಿ ಪ್ರವೇಶಿಸಿದರು ಮತ್ತು ನೌಕರರನ್ನು ಬಲವಂತವಾಗಿ ಕ್ಲಿಯರೆನ್ಸ್ ನೀಡುವಂತೆ ಒತ್ತಾಯಿಸಿದರು. ದಿಯೋಘರ್ ವಿಮಾನ ನಿಲ್ದಾಣದಲ್ಲಿ ಇನ್ನೂ ರಾತ್ರಿ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸೌಲಭ್ಯವಿಲ್ಲ ಎಂದು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಪೈಲಟ್ ಮತ್ತು ವಿಮಾನ ನಿಲ್ದಾಣದ ನಿರ್ದೇಶಕ ಸಂದೀಪ್ ಧಿಂಗ್ರಾ ಕೂಡ ಎಟಿಎಸ್‌ನಲ್ಲಿ ಹಾಜರಿದ್ದರು.

ದೂರಿನಲ್ಲಿ ಏನಿದೆ: ಎಟಿಸಿ ನಿಯಂತ್ರಣ ಕೊಠಡಿಯನ್ನು ತಲುಪಿದಾಗ ವಿಮಾನ ನಿಲ್ದಾಣದ ನಿರ್ದೇಶಕ ಸಂದೀಪ್ ಧಿಂಗ್ರಾ ( airport director Sandeep Dhingra ) ಮತ್ತು ಚಾರ್ಟರ್ಡ್ ವಿಮಾನದ ಪೈಲಟ್ ಆಗಲೇ ಅಲ್ಲಿದ್ದರು ಎಂದು ಡಿಎಸ್‌ಪಿ (DSP Suman Aman) ತಮ್ಮ ದೂರಿನಲ್ಲಿ ಬರೆದಿದ್ದಾರೆ. ಆ ವೇಳೆ ಚಾರ್ಟರ್ಡ್ ವಿಮಾನದ ಪೈಲಟ್ ಎಟಿಸಿ ಸಿಬ್ಬಂದಿ ಮೇಲೆ ಒತ್ತಡ ಹೇರಿದರು. ಇದಾದ ಬಳಿಕ ಸಂಸದರು ಮತ್ತು ಅವರ ಇಬ್ಬರು ಪುತ್ರರೂ ಅಲ್ಲಿಗೆ ತಲುಪಿದರು ಎಂದು ಹೇಳಿದ್ದಾರೆ. ಒತ್ತಡಕ್ಕೆ ಮಣಿದು ಕ್ಲಿಯರೆನ್ಸ್ ಕೂಡ ನೀಡಲಾಗಿತ್ತು ಎಂದು ಡಿಎಸ್ಪಿ ಬರೆದುಕೊಂಡಿದ್ದಾರೆ. ಪೈಲಟ್ ಮತ್ತು ಇತರರು ಸ್ವಲ್ಪ ಹೊತ್ತಿನಲ್ಲಿ ದಿಯೋಘರ್ ವಿಮಾನ ನಿಲ್ದಾಣದಿಂದ ನಿರ್ಗಮಿಸಿದರು.

ಈ ವಿಷಯಗಳನ್ನು ಗಮನಿಸಿದರೆ ವಿಮಾನ ನಿಲ್ದಾಣದ ಕಾರ್ಯಾಚರಣೆಯ ಭದ್ರತಾ ಮಾನದಂಡಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಎಂದು ಅಮನ್ ದೂರಿನಲ್ಲಿ ಬರೆದಿದ್ದಾರೆ. ಈ ಜನರು ಬಲವಂತವಾಗಿ ಎಟಿಸಿಯನ್ನು ಪ್ರವೇಶಿಸಿದರು. ಸಿಸಿಟಿವಿಯನ್ನು ಸಹ ಇದಕ್ಕಾಗಿ ಪರಿಶೀಲನೆ ಮಾಡಬಹುದು. ಇದರಲ್ಲಿ ಮುಖೇಶ್ ಪಾಠಕ್, ದೇವತಾ ಪಾಂಡೆ ಮತ್ತು ಪಿಂಟು ತಿವಾರಿ ಅವರು ಆಗಸ್ಟ್ 31 ರಂದು ಘಟನೆಯ ಸಮಯದಲ್ಲಿ ಎಟಿಸಿ ಕಟ್ಟಡದಲ್ಲಿ ಭದ್ರತಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಆಗಸ್ಟ್ 31 ರಂದು ಗೊಡ್ಡಾದ ಲೋಕಸಭಾ ಸಂಸದ ನಿಶಿಕಾಂತ್ ದುಬೆ (Nishikant Dubey ), ಅವರ ಪುತ್ರ ಕಾನಿಷ್ಕ್ ಕಾಂತ್ ದುಬೆ, ಮಹಿಕಾಂತ್ ದುಬೆ, ಸಂಸದ ಮನೋಜ್ ತಿವಾರಿ, ಮುಖೇಶ್ ಪಾಠಕ್, ದೇವತಾ ಪಾಂಡೆ, ಪಿಂಟು ತಿವಾರಿ ಅವರು ಬಲವಂತವಾಗಿ ದಿಯೋಘರ್ ವಿಮಾನ ನಿಲ್ದಾಣದ(Deoghar Airport) ಎಟಿಸಿಗೆ ಪ್ರವೇಶಿಸಿ ಬಲವಂತವಾಗಿ ತಮ್ಮ ಪ್ರಭಾವವನ್ನು ಬಳಸಿ ಕ್ಲಿಯರೆನ್ಸ್‌ ತೆಗೆದುಕೊಂಡಿದ್ದರು ಎಂದು ಆರೋಪಿಸಿದ್ದರು. ಇದಲ್ಲದೇ ದಿಯೋಘರ್ ವಿಮಾನ ನಿಲ್ದಾಣದ ನಿರ್ದೇಶಕ ಸಂದೀಪ್ ಧಿಂಗ್ರಾ  ವಿರುದ್ಧವೂ ಪ್ರಕರಣ ದಾಖಲಾಗಿದೆ. ಡಿಎಸ್ಪಿ ನೀಡಿದ ದೂರಿನ ಪ್ರಕಾರ, ನಿಶಿಕಾಂತ್ ದುಬೆ ಸೇರಿದಂತೆ 9 ಜನರು ಆಗಸ್ಟ್ 31 ರಂದು ಮಧ್ಯಾಹ್ನ 1 ಗಂಟೆಗೆ ಚಾರ್ಟರ್ಡ್ ವಿಮಾನದಲ್ಲಿ ದಿಯೋಘರ್‌ಗೆ ಬಂದಿದ್ದರು, ಸಂಜೆ ಹಿಂದಿರುಗುವ ಸಮಯದಲ್ಲಿ ದುಬೆ ಸೇರಿದಂತೆ ಇತರರು ಬಲವಂತವಾಗಿ ಎಟಿಸಿ ಕೊಠಡಿಗೆ ಪ್ರವೇಶಿಸಿದರು.

2 ವರ್ಷಗಳಿಂದ ಶಾರುಖ್‌ನ ಭಯದಲ್ಲೇ ಬದುಕಿದ್ದಳು ಅಂಕಿತಾ, ಶಿಕ್ಷೆಯ ಭಯವಿಲ್ಲದೆ ನಗುತ್ತಲೇ ಬಂದ ಆರೋಪಿ!

ದಿಯೋಘರ್ ವಿಮಾನ ನಿಲ್ದಾಣದಲ್ಲಿ ರಾತ್ರಿ ಟೇಕ್ ಆಫ್ ಅಥವಾ ಲ್ಯಾಂಡಿಂಗ್ ಸೌಲಭ್ಯವಿಲ್ಲ ಎಂಬುದನ್ನು ಹೇಳಿದರೂ ಕ್ಲಿಯರೆನ್ಸ್‌ ಕೊಡುವಂತೆ ಒತ್ತಾಯಿಸಲಾಗಿತ್ಉತ. ದೂರಿನ ಪ್ರಕಾರ, ಈ ಜನರು ಬಲವಂತವಾಗಿ ಎಟಿಸಿ ಕೊಠಡಿಗೆ ಪ್ರವೇಶಿಸಿದ್ದಾರೆ. ಇದಾದ ನಂತರ, ಅನುಮತಿ ಪಡೆದ ನಂತರ, ಸಂಸದರು ಮತ್ತು ಅವರ ಜೊತೆಗಿದ್ದ ಜನರು ಚಾರ್ಟರ್ಡ್ ವಿಮಾನದಲ್ಲಿ ತೆರಳಿದ್ದಾರೆ.

ಫೋನ್‌ನಲ್ಲಿ ಮಾತನಾಡಿಲ್ಲವೆಂದು ಪಿಯುಸಿ ವಿದ್ಯಾರ್ಥಿನಿ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

ಆಗಸ್ಟ್ 31 ರಂದು, ಬಿಜೆಪಿಯ ನಿಯೋಗವು ಜಾರ್ಖಂಡ್‌ನ ಧುಮ್ಕಾಗೆ ಭೇಟಿ ನೀಡಿ ಸಂತ್ರಸ್ತೆ ಅಂಕಿತಾ ಅವರ ಕುಟುಂಬವನ್ನು ಭೇಟಿ ಮಾಡಲು ಬಂದಿತ್ತು. ಇದರಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ದೆಹಲಿ ಸಂಸದ ಮನೋಜ್ ತಿವಾರಿ, ಕಪಿಲ್ ಮಿಶ್ರಾ ಸೇರಿದಂತೆ ಹಲವರು ಇದ್ದರು. ಧುಮ್ಕಾದಿಂದ ಹೊರಡುವಾಗ, ಈ ಜನರು ಸಂಜೆ 5.15 ರ ಸುಮಾರಿಗೆ ದಿಯೋಘರ್ ವಿಮಾನ ನಿಲ್ದಾಣವನ್ನು ತಲುಪಿದರು ಮತ್ತು ಕ್ಲಿಯರೆನ್ಸ್ ಪಡೆಯಲು ಎಟಿಸಿ ಕೊಠಡಿಯನ್ನು ಪ್ರವೇಶಿಸಿದ್ದರು.

click me!