ಅಂಗವಿಕಲನನ್ನು ಕುಟುಂಬದ ಜತೆ ಒಗ್ಗೂಡಿಸಿದ ಆಧಾರ್‌!

By Govindaraj SFirst Published Sep 3, 2022, 5:15 AM IST
Highlights

6 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 21 ವರ್ಷದ ಅಂಗವಿಕಲ ಯುವಕನೊಬ್ಬನನ್ನು ‘ಆಧಾರ್‌’ ಕುಟುಂಬದವರೊಂದಿಗೆ ಮರಳಿ ಒಗ್ಗೂಡಿಸಿದೆ. ಈ ಮೂಲಕ ದೇಶದ ಕೇವಲ ಜನರ ಬದುಕನ್ನು ಇನ್ನಷ್ಟು ಸುಲಭಗೊಳಿಸುವಲ್ಲಿ ಮಾತ್ರವಲ್ಲ, ನಾಪತ್ತೆಯಾದವರನ್ನು ಕುಟುಂಬದೊಂದಿಗೆ ಒಗ್ಗೂಡಿಸಲೂ ಆಧಾರ್‌ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಾಬೀತಾಗಿದೆ.

ನಾಗ್ಪುರ್‌ (ಸೆ.03): 6 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 21 ವರ್ಷದ ಅಂಗವಿಕಲ ಯುವಕನೊಬ್ಬನನ್ನು ‘ಆಧಾರ್‌’ ಕುಟುಂಬದವರೊಂದಿಗೆ ಮರಳಿ ಒಗ್ಗೂಡಿಸಿದೆ. ಈ ಮೂಲಕ ದೇಶದ ಕೇವಲ ಜನರ ಬದುಕನ್ನು ಇನ್ನಷ್ಟು ಸುಲಭಗೊಳಿಸುವಲ್ಲಿ ಮಾತ್ರವಲ್ಲ, ನಾಪತ್ತೆಯಾದವರನ್ನು ಕುಟುಂಬದೊಂದಿಗೆ ಒಗ್ಗೂಡಿಸಲೂ ಆಧಾರ್‌ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಾಬೀತಾಗಿದೆ. ಬಿಹಾರದ ಖಾಗರಿಯಾ ಜಿಲ್ಲೆಯ 15 ವರ್ಷದ ಅಂಗವಿಕಲ ಬಾಲಕ ನಾಪತ್ತೆಯಾಗಿದ್ದ. ಕಿವುಡ ಹಾಗೂ ಮೂಕನಾಗಿರುವ ಈತ ನ. 28, 2016ರಲ್ಲಿ ನಾಗ್ಪುರ ರೇಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದ. 

ರೇಲ್ವೆ ಅಧಿಕಾರಿಗಳೇ ಈತನನ್ನು ಸರ್ಕಾರಿ ಅನಾಥಾಲಯಕ್ಕೆ ಸೇರಿಸಿ ಪ್ರೇಮ್‌ ರಮೇಶ್‌ ಇಂಗಳೆ ಎಂದು ನಾಮಕರಣ ಮಾಡಿದ್ದರು. ಅನಾಥಾಲಯದ ಸೂಪರಿಂಟೆಂಡೆಂಟ್‌ 2022ರಲ್ಲಿ ‘ಪ್ರೇಮ್‌’ ಹೆಸರಿನಲ್ಲಿ ಯುವಕನ ಆಧಾರ್‌ ನೋಂದಣಿ ನಡೆಸಲು ಹೋದಾಗ ಈಗಾಗಲೇ ನೋಂದಣಿಯಾಗಿರುವ ಆಧಾರ್‌ ಕಾರ್ಡಿನೊಂದಿಗೆ ಬಯೋಮೆಟ್ರಿಕ್ಸ್‌ ಹೊಂದಾಣಿಕೆ ಆದವು. ಬಳಿಕ ಮುಂಬೈಯಲ್ಲಿರುವ ಆಧಾರ್‌ ಕಚೇರಿಯಲ್ಲಿ ಪರಿಶೀಲನೆ ನಡೆಸಿದಾಗ ಸೋಚನ್‌ ಕುಮಾರ್‌ ಎಂಬ ಬಿಹಾರದ ಬಾಲಕನೇ ಈತ ಎಂಬುದು ತಿಳಿದುಬಂದಿದೆ. ಕಾನೂನು ಪ್ರಕ್ರಿಯೆ ಬಳಿಕ ಯುವಕನನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.

ಕೈಲಾಸ ವಾಸ ಗಣೇಶನಿಗೂ ವಿಳಾಸ : ವಿನಾಯಕನಿಗೂ ಬಂತು ಆಧಾರ್‌ಕಾರ್ಡ್

ಸಮ್ಮತಿ ಸೆಕ್ಸ್‌ಗೂ ಮುನ್ನ ಆಧಾರ್‌ ಕಾರ್ಡ್‌ ನೋಡಲಾಗದು: ಸಮ್ಮತಿಯ ದೈಹಿಕ ಸಂಬಂಧಕ್ಕೆ ಮುಂದಾಗುವ ವ್ಯಕ್ತಿ ತನ್ನ ಸಂಗಾತಿಯ ವಯಸ್ಸು ಅರಿಯಲು ಆಧಾರ್‌ ಕಾರ್ಡ್‌ ಅಥವಾ ಪಾನ್‌ ಸಂಖ್ಯೆ ಅಥವಾ ಆಕೆಯ ಶಾಲಾ ದಾಖಲಾತಿಗಳನ್ನು ಪರಿಶೀಲಿಸಲು ಆಗದು. ಅದರ ಅಗತ್ಯ ಬೀಳುವುದಿಲ್ಲ ಎಂದು ದೆಹಲಿ ಹೈಕೋರ್ಚ್‌ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಇದೇ ವೇಳೆ, ‘ಅಪ್ರಾಪ್ತೆ’ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬರಿಗೆ ಜಾಮೀನು ಮಂಜೂರು ಮಾಡಿದೆ.

ದೂರುದಾರೆ ತಾನು ಅಪ್ರಾಪ್ತೆ ಎಂದು ಹೇಳಿಕೊಳ್ಳುತ್ತಿದ್ದಾಳೆ. ಆದರೆ ಆಕೆ ಮೂರು ಜನ್ಮದಿನಾಂಕವನ್ನು ತೋರಿಸಿದ್ದಾಳೆ. ಆರೋಪಿಯನ್ನು ಸಿಲುಕಿಸಲು ಅಪ್ರಾಪ್ತೆ ಎಂದು ನಿರೂಪಿಸುವ ಯತ್ನ ಇದಾಗಿದೆ. ಆದರೆ ಆಧಾರ್‌ ಕಾರ್ಡ್‌ನಲ್ಲಿ 1.1.1998 ಎಂದು ಜನ್ಮದಿನಾಂಕ ಇದ್ದು, ಆರೋಪಿ ಲೈಂಗಿಕ ಸಂಬಂಧ ಹೊಂದಿರುವುದು ಅಪ್ರಾಪ್ತೆಯ ಜತೆಯಲ್ಲ ಎಂಬುದನ್ನು ಹೇಳುತ್ತದೆ ಎಂದು ದೆಹಲಿ ಹೈಕೋರ್ಚ್‌ ಹೇಳಿದೆ.

ವೋಟರ್ ಐಡಿಗೆ ಆಧಾರ್ ಲಿಂಕ್, ತಿಳಿದುಕೊಳ್ಳಬೇಕು ಚುನಾವಣಾ ಆಯೋಗದ ಹೊಸ ಅಭಿಯಾನ!

2009ರಿಂದ 2021ರ ನಡುವೆ ತನ್ನ ಮೇಲೆ ಆರೋಪಿ ಅತ್ಯಾಚಾರವೆಸಗಿದ್ದಾನೆ ಎಂದು ಮಹಿಳೆಯೊಬ್ಬರು ದೂರು ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಚ್‌, ಎರಡು ವರ್ಷಗಳ ಹಿಂದೆ ಅತ್ಯಾಚಾರ ನಡೆದಿದೆ ಎಂದು ಮಹಿಳೆ ಹೇಳುತ್ತಿದ್ದಾರೆ. ವಿಳಂಬವಾಗಿ ಪ್ರಕರಣ ದಾಖಲಿಸಿದ್ದಕ್ಕೆ ಕಾರಣ ನೀಡಿಲ್ಲ. ಇಬ್ಬರ ನಡುವೆ ಸಾಕಷ್ಟುಹಣ ವರ್ಗಾವಣೆಯಾಗಿದೆ. ಇದು ಹನಿಟ್ರ್ಯಾಪ್‌ನಂತಿದೆ ಎಂದು ಹೇಳಿ, ಮಹಿಳೆ ವಿರುದ್ಧ ತನಿಖೆ ನಡೆಸಲು ಪೊಲೀಸರಿಗೆ ಸೂಚಿಸಿತು.

click me!