ನಿತ್ಯಾನಂದ ಅವರಿಗೆ ತೀವ್ರ ಅನಾರೋಗ್ಯವಾಗಿದೆ. ಈ ಹಿನ್ನೆಲೆ ಅವರಿಗೆ ಶ್ರೀಲಂಕಾದಲ್ಲಿ ರಾಜಕೀಯ ಆಶ್ರಯ ನೀಡಬೇಕೆಂದು ಶ್ರೀಕೈಲಾಸದ ಮಂತ್ರಿ ಎಂದು ಹೇಳಿಕೊಂಡಿರುವವರು ಪತ್ರ ಬರೆದಿದ್ದಾರೆ.
ಸ್ವಯಂ ಘೋಷಿತ ಆಧ್ಯಾತ್ಮಿಕ ನಾಯಕ (Self Proclaimed Spiritual Leader) ಮತ್ತು ಅತ್ಯಾಚಾರದ (Rape) ಆರೋಪ ಹೊತ್ತಿರುವ ನಿತ್ಯಾನಂದ ಸ್ವಾಮಿ ಶ್ರೀಲಂಕಾದಲ್ಲಿ ರಾಜಕೀಯ ಆಶ್ರಯವನ್ನು ಬಯಸುತ್ತಿದ್ದಾರೆ ಎಂದು ವರದಿಯಾಗಿದೆ. ಭಾರತದಿಂದ ಪಲಾಯನಗೊಂಡಿರುವ ಬಿಡದಿ ಧ್ಯಾನ ಪೀಠದ ಮುಖ್ಯಸ್ಥ ನಿತ್ಯಾನಂದ ಸ್ವಾಮೀಜಿ ಆಗಸ್ಟ್ 7 ರಂದು ದ್ವೀಪ ರಾಷ್ಟ್ರ ಶ್ರೀಲಂಕಾ ಅಧ್ಯಕ್ಷರಿಗೆ ಪತ್ರ ಬರೆದಿದ್ದು, ವೈದ್ಯಕೀಯ ಆರೈಕೆಯ 'ತುರ್ತು' ಅಗತ್ಯದ ಬಗ್ಗೆ ಮನವಿ ಮಾಡಿದ್ದಾರೆ. ಆಧ್ಯಾತ್ಮಿಕ ನಾಯಕರಿಂದ ಸ್ಥಾಪಿಸಲ್ಪಟ್ಟ ಮತ್ತು ಹೆಸರಿಸಲಾದ ದ್ವೀಪವಾದ ಶ್ರೀಕೈಲಾಸ ಸಾರ್ವಭೌಮ ರಾಜ್ಯದಲ್ಲಿ (Sovereign State of ShriKailasa) ವೈದ್ಯಕೀಯ ಮೂಲಸೌಕರ್ಯಗಳ ಕೊರತೆಯನ್ನು ಈ ಪತ್ರವು ಉಲ್ಲೇಖಿಸಿದೆ. ಅತ್ಯಾಚಾರ-ಆರೋಪಿ ನಿತ್ಯಾನಂದ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಮತ್ತು ಚಿಕಿತ್ಸೆಯ ಅವಶ್ಯಕತೆಯಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂದು ಶ್ರೀಲಂಕಾ ಸರ್ಕಾರದ ಉನ್ನತ ಮೂಲವು ದೃಢಪಡಿಸಿದೆ. ಆಗಸ್ಟ್ 2022 ರಲ್ಲಿ ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರಿಗೆ ಈ ಪತ್ರ ಬರೆಯಲಾಗಿದೆ.
ಶ್ರೀಕೈಲಾಸದ ವಿದೇಶಾಂಗ ವ್ಯವಹಾರಗಳ ಮಂತ್ರಿ ಎಂದು ಹೇಳಿಕೊಳ್ಳುವ ನಿತ್ಯಪ್ರೇಮಾತ್ಮ ಆನಂದ ಸ್ವಾಮಿಯವರು ಬರೆದ ಪತ್ರದಲ್ಲಿ ಶ್ರೀಲಂಕಾ ಅಧ್ಯಕ್ಷರಿಗೆ - "ಹಿಂದೂ ಧರ್ಮದ ಪರಮ ಪೀಠಾಧಿಪತಿ (Supreme Pontiff of Hinduism) (ಎಸ್‌ಪಿಎಚ್) ಅವರ ಪರಮ ಪೂಜ್ಯ ಶ್ರೀ ನಿತ್ಯಾನಂದ ಪರಮಶಿವಂ ಅವರಿಗೆ ಗಂಭೀರ ವೈದ್ಯಕೀಯ ಸ್ಥಿತಿಗೆ ತುರ್ತು ವೈದ್ಯಕೀಯ ಆರೈಕೆಯ ಅಗತ್ಯವಿದೆ. ಪ್ರಸ್ತುತ ಕೈಲಾಸದಲ್ಲಿ ಲಭ್ಯವಿರುವ ವೈದ್ಯರು, ನಿತ್ಯಾನಂದ ಅವರಿಗೆ ಆಧಾರವಾಗಿರುವ ವೈದ್ಯಕೀಯ ಸ್ಥಿತಿಯನ್ನು ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ. ಹಿಂದೂ ಧರ್ಮದ ಪರಮ ಪೀಠಾಧಿಪತಿ ಪ್ರಸ್ತುತ ಶ್ರೀಕೈಲಾಸದ ಸಾರ್ವಭೌಮ ಭೂಮಿಯಲ್ಲಿದ್ದಾರೆ. ಇದು ಈ ಸಮಯದಲ್ಲಿ ಅತ್ಯಂತ ತುರ್ತಾಗಿ ಅಗತ್ಯವಿರುವ ವೈದ್ಯಕೀಯ ಮೂಲಸೌಕರ್ಯವನ್ನು (Medical Infrastructure) ಹೊಂದಿಲ್ಲ’’ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ನಿತ್ಯಾನಂದ ಸ್ವಾಮೀಜಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿ
ನಿತ್ಯಾನಂದ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ ಮತ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ, ಆದ್ದರಿಂದ ಅವರ ಅನುಯಾಯಿಗಳು ರಾಜಕೀಯ ಆಶ್ರಯವನ್ನು ಮಾತ್ರವಲ್ಲದೆ ಶ್ರೀಲಂಕಾದಿಂದ ವೈದ್ಯಕೀಯ ಸಹಾಯ ಸಹ ಪಡೆಯುತ್ತಿದ್ದಾರೆ. "ನಿತ್ಯಾನಂದನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು, ಹಿಂದೂ ಧರ್ಮದ ಪರಮ ಪೀಠಾಧಿಪತಿ ತಕ್ಷಣವೇ ಹಿಂತೆಗೆದುಕೊಳ್ಳಲಾಗದ ರಾಜಕೀಯ ಆಶ್ರಯವನ್ನು ನೀಡುವಂತೆ ನಾವು ನಿಮ್ಮನ್ನು ಕೋರುತ್ತೇವೆ. ಇದರಿಂದ ಅವರನ್ನು ಏರ್ ಆಂಬ್ಯುಲೆನ್ಸ್ ಮೂಲಕ ಏರ್‌ಲಿಫ್ಟ್ ಮಾಡಬಹುದು ಮತ್ತು ಶ್ರೀಲಂಕಾ ಪ್ರಜಾಸತ್ತಾತ್ಮಕ ಸಮಾಜವಾದಿ ಗಣರಾಜ್ಯದಲ್ಲಿ ಸುರಕ್ಷಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು. ಜೊತೆಗೆ, ಹಿಂದೂ ಧರ್ಮದ ಪರಮ ಪೀಠಾಧಿಪತಿಗೆ ಕಿರುಕುಳದ ಶಕ್ತಿಗಳಿಂದ ಜೀವವು ಅಪಾಯದಲ್ಲಿದೆ. ಈ ಹಿನ್ನೆಲೆ ಹಿಂದೂ ಧರ್ಮದ ಪರಮ ಪೀಠಾಧಿಪತಿಗೆ ದೇಶದ ಮುಖ್ಯಸ್ಥರಾಗಿ ಶ್ರೀಕೈಲಾಸದಿಂದ ಪ್ರಯಾಣಿಸುವುದು ಅವರ ಸುರಕ್ಷತೆಯನ್ನು ಖಾತರಿಪಡಿಸುವ ಉತ್ತಮ ಮಾರ್ಗವಾಗಿದೆ ಎಂದು ನಾವು ನಂಬುತ್ತೇವೆ" ಎಂದೂ ಅವರು ವಿವರಿಸಿದ್ದಾರೆ.
ನಿತ್ಯಾನಂದನಿಗೆ ಸುರಕ್ಷಿತ ಮಾರ್ಗವನ್ನು ಕೋರಿದ ಆ ಸಚಿವರು, ವೈದ್ಯಕೀಯ ಚಿಕಿತ್ಸೆ ಮತ್ತು ಸಲಕರಣೆಗಳ ವೆಚ್ಚವನ್ನು ಶ್ರೀಕೈಲಾಸ ಭರಿಸುತ್ತದೆ ಎಂದು ಹೇಳಿದರು. "ಶ್ರೀಕೈಲಾಸ ಹಿಂದೂ ಧರ್ಮದ ಪರಮ ಪೀಠಾಧಿಪತಿಯ ಚಿಕಿತ್ಸೆಗೆ ಅಗತ್ಯವಿರುವ ಯಾವುದೇ ವೈದ್ಯಕೀಯ ಉಪಕರಣಗಳನ್ನು ಖರೀದಿಸುತ್ತಾರೆ ಮತ್ತು ತರುತ್ತಾರೆ ಹಾಗೂ ಶ್ರೀಲಂಕಾದಲ್ಲಿ ತಗಲುವ ಎಲ್ಲಾ ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳುತ್ತದೆ. ಮತ್ತು ನಮ್ಮ ಕೃತಜ್ಞತೆಯ ಅಭಿವ್ಯಕ್ತಿಯಾಗಿ, ನಾವು ಲಕ್ಷಾಂತರ ಡಾಲರ್ ಮೌಲ್ಯದ ವೈದ್ಯಕೀಯ ಉಪಕರಣವನ್ನು ನಿಮ್ಮ ರಾಷ್ಟ್ರದ ಜನರಿಗೆ ಬಿಡುತ್ತೇವೆ’’ ಎಂದು ಪಲಾಯನಗೈದ ದೇವಮಾನವನ ಮಂತ್ರಿಯ ಪತ್ರದಲ್ಲಿ ಬರೆಯಲಾಗಿದೆ.
ನಿತ್ಯಾನಂದ ನನಗಿಷ್ಟ, ಅವರನ್ನೇ ಮದುವೆ ಆಗೋಕೆ ರೆಡಿ ಎಂದ ಸ್ಯಾಂಡಲ್‌ವುಡ್ ಖ್ಯಾತ ನಟಿ!