ಬೆಂಗಳೂರಿನಲ್ಲಿ ನಾಯಿ ಜೊತೆ ವಾಕ್ ಮಾಡ್ತೀರಾ ಹುಷಾರ್: ನಿಮ್ಮ ನಾಯಿನೂ ಬಿಡಲ್ಲ ಕಳ್ಳರು: ವೀಡಿಯೋ

ಬೆಂಗಳೂರಿನ ಜಯನಗರದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಇಬ್ಬರು, ತನ್ನ ನೆಚ್ಚಿನ ನಾಯಿಯೊಂದಿಗೆ ವಾಕ್‌ ಬರುತ್ತಿದ್ದ ಯುವತಿಗೆ ಶಾಕ್ ನೀಡಿದ್ದಾರೆ. ಬೈಕ್‌ನಲ್ಲಿ ಬಂದು ಚಿನ್ನದ ಸರ ಕಳ್ಳತನ ಮಾದರಿಯಲ್ಲೇ ಇಲ್ಲಿ ಶ್ವಾನದ ಕಳ್ಳತನವಾಗಿದೆ.


ಬೆಂಗಳೂರು:  ಇಷ್ಟು ದಿನ ಬೆಂಗಳೂರಿನಲ್ಲಿ ಬೈಕ್‌ನಲ್ಲಿ ಬರುವ ಸರಗಳ್ಳರು, ಮಹಿಳೆಯರು ವಯಸ್ಸಾದವರು, ಒಂಟಿಯಾಗಿ ಓಡಾಡುತ್ತಿದ್ದವರನ್ನೇ ಟಾರ್ಗೆಟ್ ಮಾಡಿ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು  ಕಸಿದುಕೊಂಡು ಹೋಗಿರುವಂತಹ ಹಲವು ಘಟನೆಗಳು ನಡೆದಿವೆ. ಆದರೆ ಈಗ ಬೆಂಗಳೂರಿನಲ್ಲಿ ಶ್ವಾನವನ್ನು ಕೂಡ ಕದ್ದೊಯ್ದ ಘಟನೆಯೊಂದು ನಡೆದಿದ್ದು, ಶ್ವಾನಪ್ರಿಯರನ್ನು ಬೆಚ್ಚಿ ಬೀಳಿಸಿದೆ.

ಉದ್ಯಾನನಗರಿಯಲ್ಲಿ ಶ್ವಾನದ ಮಾಲೀಕರು ತಮ್ಮ ಮುದ್ದಿನ ಶ್ವಾನಗಳನ್ನು ಸಂಜೆ ಅಥವಾ ಮುಂಜಾನೆ ವಾಯುವಿಹಾರಕ್ಕೆ ಕರೆದುಕೊಂಡು ಹೋಗುವುದು ಸಾಮಾನ್ಯವಾಗಿದೆ. ಬಹುತೇಕ ನಾಯಿ ಸಾಕುವವರು ತಮ್ಮ ದುಬಾರಿ ತಳಿಯ ಶ್ವಾನಗಳನ್ನು ರಸ್ತೆಗಳ ಪಕ್ಕದ ಪುಟ್ಫಾತ್‌ನಲ್ಲಿ ವಾಕ್ ಕರೆದುಕೊಂಡು ಬರುತ್ತಾರೆ. ಈ ದೃಶ್ಯಗಳು ಮುಂಜಾನೆ ಹಾಗೂ ಸಂಜೆಯ ವೇಳೆ ಬೆಂಗಳೂರಿನ ರಸ್ತೆಗಳಲ್ಲಿ ಪಾರ್ಕ್‌ಗಳಲ್ಲಿ ಸಾಗುವವರಿಗೆ ಸಹಜವಾಗಿ ಕಂಡು ಬರುವ ದೃಶ್ಯವಾಗಿದೆ. ಆದರೆ ಈಗ ತಮ್ಮ ದುಬಾರಿ ಶ್ವಾನಗಳನ್ನು ವಾಕ್ ಕರೆದುಕೊಂಡು ಬರುವುದಕ್ಕೂ ಜನ ಯೋಚನೆ ಮಾಡುವಂತಹ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಗೆಳೆಯನ ಹುಡುಕಲು ಸಹಾಯ ಮಾಡಿದ ಬೀದಿ ನಾಯಿ: ಕಾಣೆಯಾದ ಮಗು ಮರಳ ದಿಬ್ಬದಲ್ಲಿ ಶವವಾಗಿ ಪತ್ತೆ

Latest Videos

ಬೆಂಗಳೂರಿನ ಜಯನಗರದಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಇಬ್ಬರು, ತನ್ನ ನೆಚ್ಚಿನ ನಾಯಿಯೊಂದಿಗೆ ವಾಕ್‌ ಬರುತ್ತಿದ್ದ ಯುವತಿಗೆ ಶಾಕ್ ನೀಡಿದ್ದಾರೆ. ಬೈಕ್‌ನಲ್ಲಿ ಬಂದು ಚಿನ್ನದ ಸರ ಕಳ್ಳತನ ಮಾದರಿಯಲ್ಲೇ ಇಲ್ಲಿ ಶ್ವಾನದ ಕಳ್ಳತನವಾಗಿದೆ. ನಾಯಿಯ ಕತ್ತಿನಲ್ಲಿದ್ದ ಚೈನ್‌ ಎಳೆದ ಖದೀಮರು ನಾಯಿಯನ್ನು ಹೊತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ವಾಹನಗಳು ಓಡಾಡುತ್ತಿದ್ದ ಜನನಿಬಿಡ ಪ್ರದೇಶದಲ್ಲೇ ಈ ಘಟನೆ ನಡೆದಿದೆ. ಘಟನೆಯ ದೃಶ್ಯಾವಳಿಗಳು ಅಲ್ಲೇ ಇದ್ದ ಸಿಸಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವರದಿಗಳ ಪ್ರಕಾರ ಈ ಘಟನೆ ಫೆಬ್ರವರಿ 12ರಂದು ನಡೆದಿದೆ ಎನ್ನಲಾಗುತ್ತಿದ್ದು, ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ. ಮಧುರಾ ಎಂಬ ಮಹಿಳೆ ತಮ್ಮ ಪ್ರೀತಿಯ ಶ್ವಾನ ರಿಚ್ಚಿಯ ಜೊತೆ ರಸ್ತೆಯಲ್ಲಿ ವಾಕ್ ಹೋಗುತ್ತಿದ್ದಾಗ ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಇಬ್ಬರು ಆಕೆಯ ಕೈಯಿಂದ ನಾಯಿಯ ಚೈನನ್ನು ಕಿತ್ತು ಬಳಿಕ ನಾಯಿಯನ್ನು ಎಳೆದೊಯ್ದಿದ್ದಾರೆ. ಏನಿದು ಎಂದು ಅರಿವಾಗಿ ಅವರ ಹಿಂದೆ ಓಡುವ ವೇಳೆ ಬೈಕ್‌ನಲ್ಲಿ ಬಂದವರು ವೇಗವಾಗಿ ಪರಾರಿಯಾಗಿದ್ದಾರೆ. 

ಹನುಮಾನ್ ಚಾಲೀಸಾಗೆ ಈ ಶ್ವಾನ ಹೇಗೆ ಪ್ರತಿಕ್ರಿಯಿಸುತ್ತಿದೆ ನೋಡಿ: ವೀಡಿಯೋ ಸಖತ್ ವೈರಲ್

ಕೂಡಲೇ ನಾಯಿಯ ಮಾಲಕಿ ಮಧುರಾ ಅವರು ಸಮೀಪದ ಪೊಲೀಸ್ ಠಾಣೆಗೆ ಭೇಟಿ ನೀಡಿ ಸಹಾಯ ಕೇಳಿದ್ದಾರೆ. ಅಲ್ಲದೇ ತಿಲಕ್‌ನಗರ ಠಾಣೆಯಲ್ಲಿ ಈ ಬಗ್ಗೆ ಎಫ್‌ಐಆರ್ ಕೂಡ ದಾಖಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಈ ಶ್ವಾನದ ಬೆಲೆ 10 ಸಾವಿರ ರೂಪಾಯಿಗಳು ಎಂದು ತಿಳಿದು ಬಂದಿದೆ. ಅನೇಕರು ಈ ವೀಡಿಯೋ ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಇದು ಕೇವಲ ಕಳ್ಳತನವಲ್ಲ, ಕ್ರೌರ್ಯ, ಇದು ಅಕ್ರಮವಾಗಿ ಬ್ರೀಡ್ ಮಾಡಿ ಅಕ್ರಮ ಮಾರುಕಟ್ಟೆಯಲ್ಲಿ ಶ್ವಾನವನ್ನು ಮಾರುವಂತಹ ವ್ಯವಹಾರವನ್ನು ಹೊಂದಿದೆ ಎಂದು ವೀಡಿಯೋ ಶೇರ್ ಮಾಡಿದ ಸ್ಟ್ರೀಟ್ ಡಾಗ್ಸ್ ಆಫ್ ಬಾಂಬೆ ತನ್ನ ಪೇಜ್‌ನಲ್ಲಿ ಬರೆದುಕೊಂಡಿದೆ. 

 

click me!