ಸೊಂಟಕ್ಕೆ ಹಗ್ಗ ಕಟ್ಟಿ 40 ಅಡಿ ಆಳದ ಬಾವಿಗೆ ಇಳಿದು ಮೇಕೆ ಮರಿಯ ರಕ್ಷಿಸಿದ ಪುಟ್ಟ ಬಾಲಕ

Published : Feb 27, 2026, 08:18 AM IST
little boy saves Baby Goat In Bihar

ಸಾರಾಂಶ

ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ, ಆಳವಾದ ಬಾವಿಗೆ ಬಿದ್ದ ಮೇಕೆ ಮರಿಯನ್ನು ಪುಟ್ಟ ಬಾಲಕನೊಬ್ಬ ಪ್ರಾಣ ಪಣಕ್ಕಿಟ್ಟು ರಕ್ಷಿಸಿದ್ದಾನೆ. ಗ್ರಾಮಸ್ಥರು ರಕ್ಷಣೆಗೆ ವಿಫಲವಾದಾಗ, ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗಿಳಿದ ಬಾಲಕ, ಮೇಕೆ ಮರಿಯನ್ನು ಸುರಕ್ಷಿತವಾಗಿ ಮೇಲೆತ್ತಿದ್ದಾನೆ. 

ಬಾವಿಗೆ ಇಳಿದು ಮೇಕೆ ಮರಿಯ ರಕ್ಷಿಸಿದ ಪುಟ್ಟ ಬಾಲಕ

ಕೆಲ ದಿನಗಳ ಹಿಂದಷ್ಟೇ ಮಹಿಳೆಯೊಬ್ಬರು ಬಾಲ್ಕನಿಯಿಂದ ಕೆಳಗೆ ಬಿದ್ದ ತಮ್ಮ ಸೀರೆಯನ್ನು ತೆಗೆಯುವುದಕ್ಕೆ ಗಗನಚುಂಬಿ ಬಹುಮಹಡಿ ಕಟ್ಟಡದ ಬಾಲ್ಕನಿಗೆ ಸೀರೆ ಕಟ್ಟಿ ಪುಟ್ಟ ಬಾಲಕನನ್ನು ಕೆಳಗಿಳಿಸಿ ಸೀರೆಯನ್ನು ವಾಪಸ್ ಪಡೆದ ಘಟನೆ ನಡೆದಿತ್ತು. ಈ ಘಟನೆಯ ವೀಡಿಯೋ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಘಟನೆ ಮಾಸುವ ಮೊದಲೇ ಈಗ ಬಿಹಾರದಲ್ಲೊಂದು ಇದೇ ರೀತಿಯ ಘಟನೆ ನಡೆದಿದೆ. ಬಾವಿಗೆ ಬಿದ್ದ ಪುಟ್ಟ ಮೇಕೆ ಮರಿಯನ್ನು ರಕ್ಷಿಸಲು ಪುಟ್ಟ ಬಾಲಕನನ್ನು ಬಾವಿಗಿಳಿಸಲಾಗಿದೆ.

ಬಿಹಾರದ ಮೋತಿಹಾರಿ ಜಿಲ್ಲೆಯಲ್ಲಿ, ಪಹಾರ್‌ಪುರ ಗ್ರಾಮದಲ್ಲಿ ಆಳವಾದ ಬಾವಿಗೆ ಬಿದ್ದ ಮೇಕೆ ಮರಿಯನ್ನು ಬಾಲಕನೊಬ್ಬ ಧೈರ್ಯದಿಂದ ರಕ್ಷಿಸಿದ್ದಾನೆ. ಗ್ರಾಮಸ್ಥರು ಪ್ರಾಣಿಯನ್ನು ಹೊರತೆಗೆಯಲು ವಿಫಲವಾದ ನಂತರ, ಆ ಬಾಲಕನನ್ನು ಸೊಂಟಕ್ಕೆ ಹಗ್ಗ ಕಟ್ಟಿ ತಾನೇ ಬಾವಿಗೆ ಇಳಿಯುವುದಕ್ಕೆ ನಿರ್ಧರಿಸಿದ್ದಾನೆ ಎಂದು ವರದಿಯಾಗಿದೆ. ಸೊಂಟಕ್ಕೆ ಹಗ್ಗ ಕಟ್ಟಿ ಬಾವಿಗೆ ಇಳಿದ ಆತ ಮೇಕೆ ಮರಿಯನ್ನು ನೀರಿನಿಂದ ಎತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದು, ಬಳಿಕ ಗ್ರಾಮಸ್ಥರು ಹಗ್ಗದ ಸಹಾಯದಿಂದ ಇಬ್ಬರನ್ನು ಮೇಲಕ್ಕೆ ಎಳೆದಿದ್ದಾರೆ. ಬಾಲಕನ ಈ ಧೈರ್ಯದ ಸಾಹಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆ ವ್ಯಕ್ತವಾಗ್ತಿದೆ.

ಇದನ್ನೂ ಓದಿ:  ಸಿಎಂ ಪತಿಗೆ ಸವಾಲೆಸೆದ ಎಂಎಲ್‌ಎ ಪತ್ನಿ: ಅಪರೂಪದ ಘಟನೆಗೆ ಸಾಕ್ಷಿಯಾದ ಮೇಘಾಲಯ ವಿಧಾನಸಭೆ

ಪಹರ್‌ಪುರ ಪ್ರದೇಶದ ಹಳ್ಳಿಯೊಂದು ಆಳವಾದ ಬಾವಿಯೊಳಗೆ ಸಿಲುಕಿದ್ದ ಮೇಕೆ ಮರಿಯನ್ನು ರಕ್ಷಿಸಲು ಬಾಲಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದ. ತೆರೆದ ಬಾವಿಯ ಬಳಿ ಆಟವಾಡುತ್ತಿದ್ದ ಮೇಕೆ ಮರಿ ಅಚಾನಕ್ ಆಗಿ ಬಾವಿಗೆ ಬಿದ್ದಿತ್ತು. ಬಾವಿಗೆ ಬಿದ್ದ ಮೇಕೆ ಮರಿಯ ಕಿರುಚಾಟ ಕೇಳಿ ಅಲ್ಲಿದ್ದವರೆಲ್ಲಾ ಬಾವಿಯ ಬಳಿ ಬಂದು ಇಣುಕಿದ್ದಾರೆ. ಆದರೆ ಬಾವಿ ಬಹಳ ಆಳವಾಗಿದ್ದರಿಂದ ಯಾರೂ ಬಾವಿಗೆ ಇಳಿಯುವ ಧೈರ್ಯ ಮಾಡಲಿಲ್ಲ. ಗ್ರಾಮಸ್ಥರು ಆರಂಭದಲ್ಲಿ ತಾತ್ಕಾಲಿಕ ಉಪಕರಣಗಳು ಮತ್ತು ಹಗ್ಗಗಳನ್ನು ಬಳಸಿ ಪ್ರಾಣಿಯನ್ನು ಹೊರತೆಗೆಯಲು ಪ್ರಯತ್ನಿಸಿದರು, ಆದರೆ ಅವರ ಪ್ರಯತ್ನಗಳು ವಿಫಲವಾದವು.ಈ ವೇಳೆ ಪುಟ್ಟ ಬಾಲಕ ತಾನೇ ಬಾವಿಗೆ ಇಳಿದು ಆ ಪ್ರಾಣಿಯನ್ನು ರಕ್ಷಿಸಲು ಧೈರ್ಯ ಮಾಡಿದ್ದಾನೆ.

ಇದನ್ನೂ ಓದಿ: ಜೆನ್ ಜಿ ಉದ್ಯೋಗಿಗಳ ಜೊತೆ ಈ ಆಟ ಎಲ್ಲಾ ನಡೆಯಲ್ಲ: ವಿಮಾನ ಏರುವಾಗ ರಜೆ ಕ್ಯಾನ್ಸಲ್ ಎಂದ ಬಾಸ್: ಯುವತಿ ಮಾಡಿದ್ದೇನು?

ಹೀಗಾಗಿ ಗ್ರಾಮಸ್ಥರು ಅವನ ಸೊಂಟಕ್ಕೆ ಗಟ್ಟಿಯಾಗಿ ಹಗ್ಗ ಬಿಗಿದು ಅಲ್ಲಿದ್ದ ಹಲವಾರು ಜನರು ಅವನನ್ನು ಬಹಳ ಎಚ್ಚರಿಕೆಯಿಂದ ಕಿರಿದಾದ ಬಾವಿಗೆ ಇಳಿಸಿದರು, ಇತರರು ಹಗ್ಗವನ್ನು ಮೇಲಿನಿಂದ ಬಿಗಿಯಾಗಿ ಹಿಡಿದಿದ್ದರು. ನಂತರ ಬಾಲಕ ಧೈರ್ಯವಾಗಿ ಬಾವಿಗೆ ಇಳಿದು ಆ ಮೇಕೆ ಮರಿಯನ್ನು ರಕ್ಷಿಸಿದ್ದಾನೆ. ಬಳಿಕ ಆತನ್ನು ಗ್ರಾಮಸ್ಥರು ಮೆಲ್ಲನೇ ಮೇಲಕ್ಕೆ ಎಳೆದಿದ್ದಾರೆ. ಬಾಲಕನ ಈ ಧೈರ್ಯದ ಕಾರ್ಯಕ್ಕೆ ಈಗ ಭಾರಿ ಶ್ಲಾಘನೆ ವ್ಯಕ್ತವಾಗಿದೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಪತಿಗೆ ಸವಾಲೆಸೆದ ಎಂಎಲ್‌ಎ ಪತ್ನಿ: ಅಪರೂಪದ ಘಟನೆಗೆ ಸಾಕ್ಷಿಯಾದ ಮೇಘಾಲಯ ವಿಧಾನಸಭೆ
ಎಚ್ಚರ ! ಹೆಚ್ಚು ಟ್ರಾಫಿಕ್ ರೂಲ್ಸ್‌ ಉಲ್ಲಂಘಿಸಿದ್ರೆ ಡಿಎಲ್‌ ರದ್ದು!