
ನವದೆಹಲಿ : ವಾಹನ ಚಾಲನೆಯಿಂದ ಅಪಘಾತ ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ, ಜವಾಬ್ದಾರಿಯುತ ಚಾಲನೆಯನ್ನು ಉತ್ತೇಜಿಸಿ, ರಸ್ತೆ ಅಪಘಾತ ತಡೆವ ಉದ್ದೇಶದಿಂದ ದರ್ಜೆ ಆಧರಿತ ವಾಹನ ಚಾಲನಾ ಪರವಾನಗಿ ವ್ಯವಸ್ಥೆಯನ್ನು (ಗ್ರೇಡ್ ಬೇಸ್ಡ್ ಡ್ರೈವಿಂಗ್ ಲೈಸೆನ್ಸ್ ಸಿಸ್ಟಂ) ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಇದರನ್ವಯ ನಿರ್ದಿಷ್ಟ ರಸ್ತೆ ನಿಯಮ ಉಲ್ಲಂಘನೆಗಳಿಗೆ ಪರವಾನಗಿ ರದ್ದು ಸೇರಿದಂತೆ ಕಠಿಣ ನಿಯಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
‘ಈ ಯೋಜನೆಯನ್ನು ಶೀಘ್ರದಲ್ಲಿ ಜಾರಿಗೆ ತರಲಿದ್ದೇವೆ. ರಸ್ತೆ ಅಪಘಾತ/ರಸ್ತೆ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಚಾಲಕರಿಗೆ ನಿರ್ದಿಷ್ಟ ಪಾಯಿಂಟ್‌ಗಳನ್ನು ನಿಗದಿಪಡಿಸುತ್ತೇವೆ. ಪ್ರತಿ ಸಲ ಅಪಘಾತ/ರಸ್ತೆ ನಿಯಮ ಉಲ್ಲಂಘನೆ ಮಾಡಿದಾಗಲೂ ಪಾಯಿಂಟ್ ಕಡಿಮೆಯಾಗುತ್ತಾ ಹೋಗುತ್ತದೆ. ಎಲ್ಲಾ ಪಾಯಿಂಟ್‌ಗಳು ಕಡಿತವಾದಾಗ, 6 ತಿಂಗಳವರೆಗೆ ಪರವಾನಗಿ ಅಮಾನತು ಅಥವಾ ರದ್ದತಿಯಂತಹ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.
‘ಭಾರತದಲ್ಲಿ ಪ್ರತಿ ವರ್ಷ 5 ಲಕ್ಷ ಅಪಘಾತ ಮತ್ತು 1.8 ಲಕ್ಷ ಸಾವುಗಳು ಸಂಭವಿಸುತ್ತಿವೆ. ಶೇ.72 ಸಾವುಗಳು 18-45 ವರ್ಷ ವಯಸ್ಸಿನವರದ್ದಾದರೆ, 18ಕ್ಕಿಂತ ಕಡಿಮೆ ವಯಸ್ಸಿನ ಬಲಿಪಶುಗಳ ಸಂಖ್ಯೆ 10,119 ಆಗಿದೆ. ಹೆಲ್ಮೆಟ್ ಬಳಸದ ಕಾರಣ 54,122 ಸಾವುಗಳು ಸಂಭವಿಸಿವೆ. ಸೀಟ್ ಬೆಲ್ಟ್ ಧರಿಸದ ಕಾರಣ 14,466 ಸಾವುಗಳಾದರೆ, ಅತಿ ವೇಗದಿಂದ 1.2 ಲಕ್ಷ ಸಾವುಗಳು ಸಂಭವಿಸಿವೆ’ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ