
ಬಿಗ್ ಬಾಸ್ ಸೀಸನ್ 12ರಲ್ಲಿ ಅತಿಹೆಚ್ಚು ಮನರಂಜನೆ ನೀಡುತ್ತಿರುವ ಸ್ಪರ್ಧಿ ಎಂದರೆ ಅದು ಗಿಲ್ಲಿ ನಟ ಎಂದು ಹೇಳಲಾಗುತ್ತಿದೆ. ಕಾರಣ ಎಲ್ಲಿ ಯಾವ್ಯಾವ ಸ್ಟ್ಯಾಂಡ್ ತೆಗೆದುಕೊಳ್ಳಬೇಕೋ ಅದೆಲ್ಲವನ್ನೂ ಗಿಲ್ಲಿ ತೆಗೆದುಕೊಳ್ಳುತ್ತಿದ್ದಾನೆ. ಇದೀಗ ಕಾವ್ಯಾ ಹೇಳಿದಂತೆ ಮೀಸೆಯನ್ನು ತೆಗೆಸಿಕೊಂಡಿರುವ ಗಿಲ್ಲಿ ನಟ ಮೀಸೆ ಇಲ್ಲಿದೆ ಹೇಗೆ ಕಾಣಿಸುತ್ತಾನೆ ಎಂದು ಟ್ರೋಲ್ ಮಾಡಲಾಗಿದೆ. ಅದರಲ್ಲಿ ಗಿಲ್ಲಿಯ 3 ಅವತಾರಗಳನ್ನು ಸ್ವತಃ ವಾರದ ಪಂಚಾಯಿತಿ ನಡೆಸಿಕೊಡಲು ಬಂದಿರುವ ಕಿಚ್ಚ ಸುದೀಪ್ ಅವರೇ ರಿವೀಲ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಸೀಸನ್ 12ರ 4ನೇ ವಾರದ ಪಂಚಾಯಿತಿ ನಡೆಸಿಕೊಡಲು ಬಂದಿದ್ದಾರೆ. ಈ ವೇಳೆ ಗಿಲ್ಲಿ ನಟನನ್ನು ನೋಡಿ ಇದೇನು ನಿನ್ನ ಅವತಾರ, ಬರೀ ಮೂಗು ಕಾಣಿಸುತ್ತಿದೆ ಎಂದು ಹೇಳಿದ್ದಾರೆ. ಆದರೆ, ಈ ಶೇಪ್ ಕಾವ್ಯಾಳಿಂದ ಬಂದಿದ್ದು ಎಂಬುದು ಅವರಿಗೂ ಗೊತ್ತಿತ್ತು. ಬಿಗ್ ಬಾಸ್ ಮನೆಯಲ್ಲಿ ಮಾತನಾಡುತ್ತಾ ಒಂದು ಪ್ರಸಂಗದಲ್ಲಿ ಕಾವ್ಯಾ ಗಿಲ್ಲಿಗೆ ನೀನು ಕ್ಲೀನ್ ಶೇವ್ ಮಾಡಬೇಕು ಎಂದು ಹೇಳುತ್ತಾಳೆ. ಇದಕ್ಕೆ ಒಪ್ಪಿದ ಗಿಲ್ಲಿಗೆ, ಮತ್ತೊಬ್ಬ ಸ್ಪರ್ಧಿ ಚಂದ್ರಪ್ರಭ ಅವರು ಕೆಂಪೇಗೌಡ ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್ ಅವರು ಬಿಟ್ಟಿದ್ದ ಮೀಸೆ ಸ್ಟೈಲ್‌ನಲ್ಲಿ ಗಡ್ಡವನ್ನು ಬಿಟ್ಟಿದ್ದರು.
ಆದರೆ, ಕ್ಯಾಪ್ಟನ್ ರಘು ಗಿಲ್ಲಿಯನ್ನು ಎತ್ತಿಕೊಂಡು ಹೋಗಿ ತಮಾಷೆಗೆ ಗಡ್ಡ ತೆಗೆಯುತ್ತೇನೆಂದು ಕರೆದುಕೊಂಡು ಹೋದಾಗ ಚಂದ್ರಪ್ರಭ ಮೀಸೆಯನ್ನೇ ಕತ್ತರಿಸುತ್ತಾರೆ. ಆಗ ವಿಧಿಯಿಲ್ಲದೇ ಅರ್ಧ ಮೀಸೆಯನ್ನು ಬಿಟ್ಟುಕೊಳ್ಳಲಾಗದೇ ಗಿಲ್ಲಿ ನಟ ಇಡೀ ಗಡ್ಡ ಮೀಸೆ ತೆಗೆದು ಕ್ಲೀನ್ ಶೇವ್ ಮಾಡಿಕೊಳ್ಳುತ್ತಾರೆ. ಇಷ್ಟೆಲ್ಲಾ ಪ್ರಹಸನ ನಡೆದಿದ್ದನ್ನು ನೋಡಿದ ಕಿಚ್ಚ ಸುದೀಪ್ ಅವರು ತಮಾಷೆಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಎಂಬ ನಿರೀಕ್ಷೆ ಎಲ್ಲರಿಗೂ ಇತ್ತು. ಅದರಂತೆ ಗಿಲ್ಲಿಯನ್ನು ನೆಟ್ಟಿಗರು ಟ್ರೋಲ್ ಮಾಡಿದ್ದನ್ನು ವೇದಿಕೆಯಲ್ಲಿ ತೋರಿಸಿದ್ದಾರೆ.
ನಟ ಸುದೀಪ್ ಅವರು ಗಿಲ್ಲಿಯನ್ನು ನೆಟ್ಟಿಗರು ಟ್ರೋಲ್ ಮಾಡಿದ ಅವತಾರ ತೋರಿಸುತ್ತಾ ಗಿಲ್ಲಿ ನಟನಿಗೆ ತಲೆಮೇಲೆ ಗ್ರೀನ್ ಸ್ಟ್ರೈಟ್ ಹೇರ್ ವಿಗ್ ಇರುವುದು, ಸುತ್ತಲೂ ಒಂದೇ ರೀತಿಯಲ್ಲಿ ಬಾಗುವಂತೆ ಬಾಚಿದ ಟೋಪನ್ ಹಾಗೂ ತಲೆಯ ಮುಂಭಾಗದಲ್ಲಿ ಜುಟ್ಟು ಬಿಟ್ಟು ಅವುಗಳಿಗೆ ಮೀಸೆಯ ಶೇಪ್ ಕೊಡುವ ಫೋಟೋವನ್ನು ವೇದಿಕೆ ಮೇಲೆ ರಿವೀಲ್ ಮಾಡುತ್ತಾರೆ. ಇಲ್ಲಿ ಟ್ರೋಲಿಗರ ಕಾರ್ಯ ಶೈಲಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆದರೆ, ಗಿಲ್ಲಿಯ ಹೇರ್ ಸ್ಟೈಲ್ ಯಾವುದು ಇರಬೇಕು ಎನ್ನುವುದನ್ನು ಆಯ್ಕೆ ಮಾಡಲು ಕಾವ್ಯಾಗೆ ಹೇಳಿದ್ದು ಏನಕ್ಕೆ ಎಂಬ ಪ್ರಶ್ನೆ ಕಾಡುತ್ತದೆ. ಅಂದರೆ, ಇಲ್ಲಿ ಗಿಲ್ಲಿ ನಟ ಕಾವ್ಯಾಳ ಮಾತು ಕೇಳಿಕೊಂಡೇ ಮೀಸೆಯನ್ನು ತೆಗೆಸಿದ್ದರಿಂದ, ಇದೀಗ ತಲೆಗೆ ಯಾವ ತರಹದ ಸ್ಟೈಲ್ ಬೇಕೆಂಬುದನ್ನು ಕಾವ್ಯಾಳೇ ನಿರ್ಧಾರ ಮಾಡಬೇಕು ಎನ್ನುವ ಅರ್ಥದಲ್ಲಿ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ನಿಮ್ಮ ಬುದ್ಧಿ ಹಾಗೂ ಸ್ವಂತ ನಿರ್ಧಾರ ನಿಮ್ಮ ಕೈಲಿರಬೇಕು ಎಂದು ಹೇಳಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿ ನಟನ ಹಲವು ಫೋಟೋಗಳನ್ನು ಎಡಿಟ್ ಮಾಡಿ ಟ್ರೋಲ್ ಮಾಡಲಾಗುತ್ತಿದೆ. ಒಂದು ಟ್ರೋಲ್‌ನಲ್ಲಿ ಗಿಲ್ಲಿ ನಟನ ದಶಾವತಾರಗಳು ಎಂದು ಹಲವು ಫೋಟೋಗಳನ್ನು ಎಡಿಟ್ ಮಾಡಿ ಶೇರ್ ಮಾಡಿಕೊಂಡಿದ್ದು, ಇದು ಎಲ್ಲೆಡೆ ವೈರಲ್ ಆಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ