ಅಧಿಸೂಚನೆಯಂತೇ ನಡೆಯಲಿದೆ ಕೌನ್ಸೆಲಿಂಗ್
ಹಾಲಿ ವರ್ಷದ ಒಬಿಸಿ ಕೋಟಾ ಶೇ. 27 ಇರಲಿದೆ
ಆರ್ಥಿಕ ದುರ್ಬಲ ವರ್ಗದ (ಇಡಬ್ಲ್ಯುಎಸ್) ಕೋಟಾ ಶೇ. 10ರಂತೆ ಇರಲಿದೆ
ನವದೆಹಲಿ (ಜ.7): ಅಧಿಸೂಚನೆಯಂತೆಯೇ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಒಬಿಸಿ (OBC) (ಇತರ ಹಿಂದುಳಿದ ವರ್ಗಗಳು) ಮತ್ತು ಇಡಬ್ಲುಎಸ್ (EWS) (ಆರ್ಥಿಕ ದುರ್ಬಲ ವರ್ಗಗಳು) ಮೀಸಲಾತಿ (reservation ) ಕ್ರಮವಾಗಿ ಶೇ. 27 ಹಾಗೂ ಶೇ. 10 ಇರಲಿದ್ದು, ಅಧಿಸೂಚನೆಯಂತೆಯೇ ಈ ಬಾರಿಯ ಕೌನ್ಸೆಲಿಂಗ್ ನಡೆಯಲಿದೆ ಎಂದು ಸುಪ್ರೀಂ ಕೋರ್ಟ್ (Supreem Court) ಮಹತ್ವದ ಆದೇಶ ನೀಡಿದೆ. ಆ ಮೂಲಕ ನಾಲ್ಕು ತಿಂಗಳ ವಿಳಂಬದ ಬಳಿಕ ದೇಶದಲ್ಲಿ ವೈದ್ಯಕೀಯ ಪ್ರವೇಶಗಳು ಪುನರಾರಂಭಗೊಳ್ಳಲಿದೆ. ಕಳೆದ ವಾರ ನಡೆದಿದ್ದ ವಿಚಾರಣೆಯಲ್ಲಿ ಇಡಬ್ಲ್ಯಎಸ್ ಅಡಿಯಲ್ಲಿ ಮೀಸಲಾತಿ ಪಡೆಯುವವರನ್ನು ಗುರುತಿಸುವ ಸಲುವಾಗಿ ಹಾಲಿ ವರ್ಷವೂ ಈ ಮೀಸಲಾತಿಯನ್ನು ಉಳಿಸಿಕೊಳ್ಳಲಿದ್ದೇವೆ ಎಂದು ಸರ್ಕಾರವು ಸುಪ್ರೀಂ ಕೋರ್ಟ್ ಗೆ ತಿಳಿಸಿತ್ತು. ಮುಂದಿನ ವರ್ಷದಿಂದ ಇಡಬ್ಲ್ಯುಎಸ್ ಕೋಟಾದಡಿಯಲ್ಲಿ ಅಜಯ್ ಭೂಷಣ್ ಪಾಂಡೆ (ajay Bhushan pandey) ಸಮಿತಿ ವರದಿಯತೆ ಬದಲಾವಣೆ ಮಾಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Justice DY Chandrachud) ಮತ್ತು ನ್ಯಾಯಮೂರ್ತಿ ಎಎಸ್ ಬೋಪಣ್ಣ(Justice AS Bopanna ) ನೇತೃತ್ವದ ವಿಶೇಷ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಇದಕ್ಕೂ ಮುನ್ನ ನೀಟ್ ಪಿಜಿಗಾಗಿ ಕೌನ್ಸೆಲಿಂಗ್ ಸುತ್ತಿನಲ್ಲಿ ವಿಳಂಬದ ವಿರುದ್ಧ ವೈದ್ಯರ ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ವಿಷಯವನ್ನು ಆಲಿಸಲು ಕೇಂದ್ರದ ತುರ್ತು ಮನವಿಯ ನಂತರ ಸುಪ್ರೀಂ ಕೋರ್ಟ್ ಮನವಿಯನ್ನು ಆಲಿಸಲು ಒಪ್ಪಿಕೊಂಡಿತ್ತು. ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Solicitor General of India Tushar Mehta) ಅವರು ತುರ್ತಾಗಿ ಅರ್ಜಿಯನ್ನು ವಿಚಾರಣೆ ಮಾಡುವಂತೆ ಕೋರಿದ್ದ ಮನವಿಗೆ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ( Chief Justice of India N V Ramana) ಅನುಮೋದನೆ ನೀಡಿದ್ದರು.
ಅಖಿಲ ಭಾರತ ಕೋಟಾದಲ್ಲಿ ಇಡಬ್ಲ್ಯೂಎಸ್ ಕೋಟಾವನ್ನು ನಿರ್ಧರಿಸುವ ಮಾನದಂಡವನ್ನು ಮರುಪರಿಶೀಲಿಸುವ ಕೇಂದ್ರದ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ನಂತರ ನೀಟ್ ಪಿಜಿ ಕೌನ್ಸೆಲಿಂಗ್ ವಿಳಂಬವಾಗಿತ್ತು. ಈ ಕುರಿತಂತೆ ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ (ಫೋರ್ಡಾ) ಬ್ಯಾನರ್ ಅಡಿಯಲ್ಲಿ ವಿವಿಧ ಆಸ್ಪತ್ರೆಗಳ ವೈದ್ಯರು ಕೌನ್ಸೆಲಿಂಗ್ ನಲ್ಲಿ ವಿಳಂಬವನ್ನು ವಿರೋಧಿಸಿದ್ದರು.
NEET-PG Counselling Crisis: ಪ್ರತಿಭಟನೆಯ ರೂಪುರೇಷೆ ಬಗ್ಗೆ ಚರ್ಚಿಸಲು ಕಿರಿಯ ವೈದ್ಯರ ಸಭೆ
ನೀಟ್ ಪಿಜಿ (NEET PG) ಮತ್ತು ಯುಜಿ ವೈದ್ಯಕೀಯ ಕೋರ್ಸ್ಗಳು, ಕೌನ್ಸೆಲಿಂಗ್ ಅಧಿಸೂಚನೆಗೆ ಅನುಗುಣವಾಗಿಯೇ ನಡೆಯಲಿದೆ ಎಂದು ಸುಪ್ರೀಂಕೋರ್ಟ್ ಶುಕ್ರವಾರದ ತನ್ನ ಮಹತ್ವದ ಆದೇಶದಲ್ಲಿ ತಿಳಿಸಿದೆ. ಕೋರ್ಸ್‌ಗಳ ಪ್ರವೇಶ ಮೀಸಲಾತಿ ಎತ್ತಿ ಹಿಡಿದ ಸುಪ್ರೀಂಕೋರ್ಟ್, ಈಗಾಗಲೇ ಅಸ್ತಿತ್ವದಲ್ಲಿರುವ ಇಡಬ್ಲೂಎಸ್ (EWS) ಅಥವಾ ಒಬಿಸಿ (OBC) ಮೀಸಲಾತಿಯ ಆಧಾರದ ಮೇಲೆ 2021-22 ನೇ ಸಾಲಿನ ನೀಟ್ ಪಿಜಿ ಮತ್ತು ಯುಜಿ ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದೆ. ಜತೆಗೆ ಮಾಜಿ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಸದಸ್ಯ ಕಾರ್ಯದರ್ಶಿ ICSSR ವಿ ಕೆ ಮಲ್ಹೋತ್ರಾ ಮತ್ತು ಭಾರತ ಸರ್ಕಾರದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಅವರನ್ನು ಒಳಗೊಂಡ ಮೂರು ಸದಸ್ಯರ ಸಮಿತಿಯ ವರದಿಯನ್ನೂ ನಾವು ಒಪ್ಪುತ್ತೇವೆ. ಆದರೆ ಈ ಬಾರಿ ಅಧಿಸೂಚನೆಗೆ ಅನುಗುಣವಾಗಿಯೇ ಕೌನ್ಸೆಲಿಂಗ್ ನಡೆಯಲಿದೆ ಎಂದಿದೆ. ಇನ್ನು ಕೇಂದ್ರ ಸರ್ಕಾರವು ಮುಂದಿನ ವರ್ಷದಿಂದ ಸಮಿತಿಯ ವರದಿಯನ್ನು ಜಾರಿ ಮಾಡುವುದಾಗಿ ತಿಳಿಸಿದೆ.
ಶೀಘ್ರದಲ್ಲೇ ಕೌನ್ಸೆಲಿಂಗ್ ವೇಳಾಪಟ್ಟಿ: ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲಿಯೇ ಮೆಡಿಕಲ್ ಕೌನ್ಸೆಲಿಂಗ್ ಸಮಿತಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಕೌನ್ಸೆಲಿಂಗ್ ಸೆಷನ್ mcc.nic.in ನಲ್ಲಿ MCC ಯ ಅಧಿಕೃತ ಸೈಟ್‌ನಲ್ಲಿ ಲಭ್ಯವಿರುತ್ತದೆ.
NEET-PG Counselling Crisis: ಪ್ರಧಾನಿ ಮಧ್ಯಪ್ರವೇಶಿಸಲು ಭಾರತೀಯ ವೈದ್ಯಕೀಯ ಸಂಘ ಪತ್ರ
ಕೌನ್ಸೆಲಿಂಗ್ ಗೆ ಏನೆಲ್ಲಾ ಬೇಕಾಗುತ್ತೆ: ನೀಟ್ ಸ್ಕೋರ್ ಕಾರ್ಡ್ (ಶ್ರೇಯಾಂಕವಿರಬೇಕು), 2021 ನೀಟ್ ಅಡ್ಮಿಷನ್ ಕಾರ್ಡ್, ಜನ್ಮದಿನಾಂಕದ ದಾಖಲೆ (10ನೇ ತರಗತಿ ಮಾರ್ಕ್ಸ್ ಕಾರ್ಡ್ ಅಥವಾ ಜನ್ಮದಾಖಲೆ), 12ನೇ ತರಗತಿಯ ಮಾರ್ಕ್ಸ್ ಕಾರ್ಡ್, ಫೋಟೋ ಐಡಿ ದಾಖಲೆ (ಆಧಾರ್ ಕಾರ್ಡ್, ಪಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್), ಪಾಸ್ ಪೋರ್ಟ್ ಸೈಜ್ ಫೋಟೋ (8-10), ಜಾತಿ ಪ್ರಮಾಣಪತ್ರ ಹಾಗೂ ಅಂಗವಿಕಲ ಪ್ರಮಾಣಪತ್ರ (ಮೀಸಲಾತಿಗೆ ಅನುಗುಣವಾಗಿ).