ಪಂಜಾಬ್, ರಾಜಕೀಯಕ್ಕಾಗಿ ಹೆಂಡತಿಯನ್ನೇ ಬಿಟ್ಟಿದ್ದ ಮಾನ್, ಬಯಲಾಯ್ತು ಡೈವೋರ್ಡ್‌ ರಹಸ್ಯ!

By Suvarna News  |  First Published Mar 16, 2022, 2:38 PM IST

* ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣವಚನ ಸ್ವೀಕಾರ

* ರಾಜಕೀಯಕ್ಕಾಗಿ ಹೆಂಡತಿ, ಮಕ್ಕಳನ್ನೇ ಬಿಟ್ಟಿದ್ದ ಮಾನ್

* ಸಂದರ್ಶನದಲ್ಲಿ ಬಯಲಾಯ್ತು ಡೈವೋರ್ಸ್‌ ಹಿಂದಿನ ಕಾರಣ


ಚಂಡೀಗಢ(ಮಾ.16): ಭಗವಂತ್ ಮಾನ್ ಮಾಡಿದ ಅದ್ಭುತದಿಂದ ಪಂಜಾಬ್ ರಾಜಕೀಯ ಮಾರ್ಗವೇ ಬದಲಾಗಿದೆ. ಇಲ್ಲಿಯವರೆಗೆ ಪಂಜಾಬ್ ರಾಜಕೀಯ ಅಕಾಲಿದಳ ಮತ್ತು ಕಾಂಗ್ರೆಸ್ ಸುತ್ತ ಸುತ್ತುತ್ತಿತ್ತು. ಆದರೆ ಈ ಬಾರಿ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ. ಪಂಜಾಬ್‌ನಲ್ಲಿ ಮೂರನೇ ಪಕ್ಷ ಎಎಪಿ ಅಧಿಕಾರದ ಗದ್ದುಗೆಯನ್ನು ಗೆದ್ದಿರುವುದು ಇದೇ ಮೊದಲು. ಆಪ್‌ ಪಪಕ್ಷದ ಈ ಬೃಹತ್ ಗೆಲುವಿನ ಶ್ರೇಯಸ್ಸು ಭಗವಂತ್ ಮಾನ್ ಅವರಿಗೇ ಸಲ್ಲುತ್ತದೆ. ಅವರ ಮನಸ್ಸಿನಲ್ಲಿ ರಾಜಕೀಯದ ಬಯಕೆಯನ್ನು ಎಷ್ಟಿತ್ತು ಎಂದು ಅವರ ಕೃತ್ಯದಲ್ಲೇ ಅಳೆಯಬಹುದು. ಏಕೆಂದರೆ ಅವರು ತಮ್ಮ ಪತ್ನಿ ಇಂದರ್‌ಜಿತ್ ಕೌರ್ ಜೊತೆ ಲಿವಿಂಗ್ ಟುಗೆದರ್ ಬಗ್ಗೆ ವಿವಾದಕ್ಕೆ ಸಿಲುಕಿದ್ದರು. ಅವರ ಪತ್ನಿ ಅಮೆರಿಕದಲ್ಲಿ ನೆಲೆಸಲು ಇಚ್ಛಿಸಿದ್ದರು, ಪಂಜಾಬ್‌ನಲ್ಲಿ ಮಾನ್‌ ಜೊತೆಗಿರಲು ಅವರು ಒಪ್ಪಲಿಲ್ಲ.

ಪಂಜಾಬ್‌ನ 17 ನೇ ಮುಖ್ಯಮಂತ್ರಿಯಾದ ಭಗವಂತ್ ಮಾನ್, ಜನರ ಪ್ರೀತಿಯ ಋಣ ತೀರಿಸುವುದು ಅಸಾಧ್ಯ!

Tap to resize

Latest Videos

ಪಂಜಾಬ್ ತೊರೆಯುವುದಿಲ್ಲ ಎಂದಿದ್ದ ಸಿಎಂ ಮಾನ್ 

ಆದರೆ ಇತ್ತ ತಾನು ಪಂಜಾಬ್ ತೊರೆಯುವುದಿಲ್ಲ ಎಂದು ಮಾನ್ ಹಠ ಹಿಡಿದಿದ್ದರು. ಏಕೆಂದರೆ ತಾನು ಪಂಜಾಬ್ ರಾಜಕೀಯದಲ್ಲಿ ಬದಲಾವಣೆ ತರಬೇಕಿದೆ. ಹೀಗಾಗಿ ಪಂಜಾಬ್‌ನ ಸಂಗ್ರೂರ್‌ಗೆ ಬಂದು ನೆಲೆಸುವಂತೆ ಪತ್ನಿಯ ಮನವೊಲಿಸುತ್ತಲೇ ಇದ್ದರು. ಆದರೆ ಮಾನ್‌ ಅವರ ಈ ಆಸೆ ಈಡೇರಲಿಲ್ಲ. ಅವರ ಹೆಂಡತಿಯೂ ಅಷ್ಟೇ ಹಠ ಹಿಡಿದಿದ್ದರು. ಕೊನೆಗೆ ಇಬ್ಬರೂ ವಿಚ್ಛೇದನ ಪಡೆಯಲು ನಿರ್ಧರಿಸಿದರು.

ಮಾನ್‌ನಿಂದ ವಿಚ್ಛೇದನ ಪಡೆದ ಪತ್ನಿ ಅಮೆರಿಕದಲ್ಲಿ ವಾಸ

ಭಗವಂತ್ ಮಾನ್ ಮತ್ತು ಅವರ ಪತ್ನಿ 21 ಮಾರ್ಚ್ 2015 ರಂದು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ವಿಚ್ಛೇದನ ಪಡೆದಾಗಲೂ ಭಗವಂತ್ ಮಾನ್ ಮತ್ತು ಅವರ ಪತ್ನಿ ನಡುವಿನ ಸಂಬಂಧ ಸೌಹಾರ್ದಯುತವಾಗಿತ್ತು ಎಂಬುದು ಕುತೂಹಲಕಾರಿ ಸಂಗತಿ. ಇಬ್ಬರೂ ಒಂದೇ ಕಾರಿನಲ್ಲಿ ಕೋರ್ಟ್‌ ತಲುಪಿದರು. ಅಲ್ಲಿ ಇಬ್ಬರೂ ಒಂದೇ ಪೆನ್ನಿನಿಂದ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿದರು. ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13ಬಿ ಅಡಿಯಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದರು. ಇಬ್ಬರೂ ವಿಚ್ಛೇದನ ಪಡೆಯುವ ಪ್ರಕ್ರಿಯೆ ಆರಂಭಿಸಿದಾಗ ಅವರ ಮಕ್ಕಳ ವಯಸ್ಸು ಮಗಳು 14 ವರ್ಷ ಮತ್ತು ಮಗನಿಗೆ ಹತ್ತು ವರ್ಷ. ಮಕ್ಕಳಿಬ್ಬರೂ ತಾಯಿಯೊಂದಿಗೆ ಅಮೆರಿಕದಲ್ಲಿ ಇರಲು ಪರಸ್ಪರ ಒಪ್ಪಿಗೆಯ ಮೇರೆಗೆ ನಿರ್ಧರಿಸಲಾಯಿತು.

ಪಂಜಾಬ್‌ನ 17 ನೇ ಮುಖ್ಯಮಂತ್ರಿಯಾದ ಭಗವಂತ್ ಮಾನ್, ಜನರ ಪ್ರೀತಿಯ ಋಣ ತೀರಿಸುವುದು ಅಸಾಧ್ಯ!

ಅಮೆರಿಕದಿಂದ ಪಂಜಾಬ್‌ಗೆ ಬಂದ ಮಾನ್‌ ಮಕ್ಕಳು

ಇಂದು ಪಂಜಾಬ್ ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಅವರ ಮಕ್ಕಳಿಬ್ಬರೂ ವಿಶೇಷವಾಗಿ ಅಮೆರಿಕದಿಂದ ಪಂಜಾಬ್ ಗೆ ಬಂದಿದ್ದಾರೆ. ನನ್ನ ಮಕ್ಕಳು ಮಾನ್ ಸಿಎಂ ಆಗಿರುವುದರಿಂದ ತುಂಬಾ ಸಂತೋಷಪಟ್ಟಿದ್ದಾರೆ ಎಂದು ಅವರ ಪತ್ನಿ ಮಾಧ್ಯಮ ವಾಹಿನಿಯೊಂದರೊಂದಿಗಿನ ಸಂವಾದದಲ್ಲಿ ಹೇಳಿದ್ದಾರೆ. ಮಾನ್ ಪಂಜಾಬ್ ಸಿಎಂ ಆಗಿರುವುದು ಅವರಿಗೂ ತುಂಬಾ ಸಂತೋಷದ ವಿಚಾರ ಎಂದು ಹೇಳಿದ್ದಾರೆ. ತಾನು ಯಾವಾಗಲೂ ಮಾನ್‌ಗಾಗಿ ದೇವರನ್ನು ಪ್ರಾರ್ಥಿಸುತ್ತೇನೆ, ಇದು ಹೀಗೇ ಮುಂದುವರೆಯಲಿದೆ ಎಂದಿದ್ದಾರೆ. 

ನಾವಿಬ್ಬರೂ ಈಗಕೂ ಒದಾಗಿದ್ದೇವೆ. ಭೌತಿಕವಾಗಿ ಮಾತ್ರ ದೂರವಿದ್ದೇವೆ

ಅವರ ಪತ್ನಿ ಇಂದರ್‌ಪ್ರೀತ್ ಕೌರ್ ಲುಧಿಯಾನದ ಬರೇವಾಲ್ ಗ್ರಾಮದ ನಿವಾಸಿಯಾಗಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಮೆರಿಕದಲ್ಲಿದ್ದೇನೆ ಎಂದು ತಿಳಿಸಿದರು. ನಾವು ವಿಚ್ಛೇದನ ಪಡೆದಿದ್ದೇವೆ, ಆದರೆ ನಮ್ಮ ನಡುವೆ ಯಾವುದೇ ವಿವಾದವಿದೆ ಎಂದು ಅರ್ಥವಲ್ಲ. ಇದು ಕೇವಲ ಭೌತಿಕ ಅಂತರ. ನಾವು ಯಾವಾಗಲೂ ಪರಸ್ಪರರ ಒಳಿತಿಗಾಗಿ ಪ್ರಾರ್ಥಿಸಿದ್ದೇವೆ.

Punjab New CM ಪಂಜಾಬ್ ಸರ್ಕಾರ ರಚನೆ ತಯಾರಿ ಬೆನ್ನಲ್ಲೇ ಎಂಪಿ ಸ್ಥಾನಕ್ಕೆ ಭಗವಂತ್ ಮಾನ್ ರಾಜೀನಾಮೆ!

ಸಂದರ್ಶನದಲ್ಲಿ ವಿಚ್ಛೇದನದ ಹಿಂದಿನ ರಹಸ್ಯಗಳನ್ನು ಬಹಿರಂಗ

ವಿಚ್ಛೇದನದ ನಂತರ, ಭಗವಂತ್ ಮಾನ್ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡುತ್ತಾ ನನ್ನ ಎರಡು ಕುಟುಂಬಗಳಲ್ಲಿ ನಾನು ಒಂದನ್ನು ಆಯ್ಕೆ ಮಾಡಬೇಕಾಗಿತ್ತು. ನಾನು ಪಂಜಾಬ್ ಆಯ್ಕೆ ಮಾಡಿದೆ. ನಾನು ಅವಳೊಂದಿಗೆ ಅಮೆರಿಕಕ್ಕೆ ಹೋಗಬೇಕೆಂದು ಅವಳು ಬಯಸಿದ್ದಳು, ಆದರೆ ನಾನು ಅಲ್ಲಿಗೆ ಹೋಗಲು ನಿರಾಕರಿಸಿದೆ. ಅದೇ ಸಮಯದಲ್ಲಿ, ಅವರ ಪತ್ನಿ ಇಂದರ್‌ಜಿತ್ ಕೌರ್ ಅವರು ರಾಜಕೀಯದ ಕಾರಣದಿಂದ ತಮ್ಮ ಕುಟುಂಬ ಮತ್ತು ಮಕ್ಕಳಿಗೆ ಸಮಯ ನೀಡಲು ಮಾನ್ ಅವರಿಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ನನ್ನೊಂದಿಗೆ ಅಮೆರಿಕಕ್ಕೆ ಬರಲು ಹೇಳಿದ್ದೆ, ಆದರೆ ಅವರು ನಿರಾಕರಿಸಿದರು. ಆ ನಂತರ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದೆವು ಎಂದಿದ್ದಾರೆ. 

click me!