ಗಿನ್ನೆಸ್‌ ಪುಟ ಸೇರಿದ ದೆಹಲಿ ಮೆಟ್ರೋ ಉದ್ಯೋಗಿ

By Suvarna News  |  First Published Mar 16, 2022, 1:51 PM IST
  • 16 ಗಂಟೆಯಲ್ಲಿ 254 ಮೆಟ್ರೋ ಸ್ಟೇಷನ್‌ಗೆ ಪಯಣ
  • ಗಿನ್ನೆಸ್‌ ಪುಟ ಸೇರಿದ ದೆಹಲಿ ಮೆಟ್ರೋ ಉದ್ಯೋಗಿ
  • ಡಿಎಂಆರ್‌ಸಿ ಉದ್ಯೋಗಿ ಪ್ರಫುಲ್ ಸಿಂಗ್ ಅವರಿಂದ ಸಾಧನೆ
     

ದೆಹಲಿ(ಮಾ.16):  ಮೆಟ್ರೋ ರೈಲು ಕಾರ್ಪೊರೇಷನ್ (DMRC) ಉದ್ಯೋಗಿಯಾಗಿರುವ ಪ್ರಫುಲ್ ಸಿಂಗ್ (Prafull Singh) ಎಂಬವರು 16 ಗಂಟೆ 2 ನಿಮಿಷಗಳಲ್ಲಿ ದೆಹಲಿಯ ಎಲ್ಲಾ ಮೆಟ್ರೋ ನಿಲ್ದಾಣಗಳಿಗೆ ಪ್ರಯಾಣಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಪುಟ ಪ್ರವೇಶಿಸಿದ್ದಾರೆ. 16 ಗಂಟೆ 2 ನಿಮಿಷಗಳಲ್ಲಿ 348 ಕಿಲೋಮೀಟರ್ ದೂರವನ್ನು ಒಳಗೊಂಡಿರುವ ರಾಷ್ಟ್ರ ರಾಜಧಾನಿಯ ಎಲ್ಲಾ ಮೆಟ್ರೋ ನಿಲ್ದಾಣಗಳನ್ನು ಕ್ರಮಿಸುವ ಮೂಲಕ ಸಿಂಗ್ ಈ ಸಾಧನೆ ಮಾಡಿದ್ದಾರೆ ಎಂದು ಡಿಎಂಆರ್‌ಸಿ ((DMRC) ಹೇಳಿದೆ. ಈ ಸಾಧನೆಯ ಬಗ್ಗೆ ದೆಹಲಿ ಮೆಟ್ರೋ ಕಾರ್ಪೋರೇಷನ್‌ ತನ್ನ ಟ್ವಿಟ್ಟರ್‌ ಪೇಜ್‌ನಲ್ಲಿ ಪೋಸ್ಟ್ ಮಾಡಿದ್ದು, 'ಡಿಎಂಆರ್‌ಸಿ ಕುಟುಂಬ ಪ್ರಫುಲ್ ಅವರ ಸಾಧನೆಯ ಬಗ್ಗೆ ಹೆಮ್ಮೆಪಡುತ್ತದೆ' ಎಂದು ಬರೆದಿದ್ದಾರೆ.

2017 ರಲ್ಲಿ, ಅಧಮ್ ಫಿಶರ್ (Adham Fisher) ಎಂಬುವವರು ಮ್ಯಾಡ್ರಿಡ್ ಮೆಟ್ರೋ (Madrid Metro) ಅಡಿಯಲ್ಲಿ ಎಲ್ಲಾ ನಿಲ್ದಾಣಗಳಿಗೆ 12 ಗಂಟೆಗಳು, 15 ನಿಮಿಷಗಳು ಮತ್ತು 48 ಸೆಕೆಂಡುಗಳಲ್ಲಿ ಪ್ರಯಾಣಿಸುವ ಮೂಲಕ ವೇಗವಾಗಿ ಪಯಾಣಿಸಿದ ದಾಖಲೆಯನ್ನು ಹೊಂದಿದ್ದರು.
2019ರಲ್ಲಿ, ಅವರು ಎಲ್ಲಾ ರೋಟರ್‌ಡ್ಯಾಮ್ ಮೆಟ್ರೋ ನಿಲ್ದಾಣಗಳಿಗೆ (Rotterdam Metro station) 4 ಗಂಟೆ, 2 ನಿಮಿಷಗಳು ಮತ್ತು 10 ಸೆಕೆಂಡುಗಳಲ್ಲಿ ಪ್ರಯಾಣಿಸಿ ವೇಗದ ಸಮಯವನ್ನು ದಾಖಲಿಸಿದ್ದರು. ಮೆಟ್ರೋ ಸುರಂಗಮಾರ್ಗ ವ್ಯವಸ್ಥೆಯಲ್ಲಿ ಮೋಹ ಹೊಂದಿರುವ ಫಿಶರ್, ಪ್ಯಾರಿಸ್ ಮೆಟ್ರೋ (Paris Metro)ಮತ್ತು ನ್ಯೂಯಾರ್ಕ್ ಸಬ್‌ವೇಯಲ್ಲಿ (New York Subway) ಎಲ್ಲಾ ನಿಲ್ದಾಣಗಳಿಗೆ ವೇಗವಾಗಿ ಪ್ರಯಾಣಿಸಿದ ದಾಖಲೆಯನ್ನು ಸಹ ಹೊಂದಿದ್ದಾರೆ.

DMRC employee Prafull Singh has entered into the Guinness World Records for recording the 'Fastest time to travel to all Metro stations'. This makes him the first person to travel to 254 stations covering 348 kms in just 16 hrs 2 minutes. DMRC family is proud of Prafull's feat. pic.twitter.com/RswgUBgANi

— Delhi Metro Rail Corporation I कृपया मास्क पहनें😷 (@OfficialDMRC)

Tap to resize

Latest Videos

 

254 ಮೆಟ್ರೋ ರೈಲು ನಿಲ್ದಾಣಗಳನ್ನು ಹೊಂದಿರುವ ದೆಹಲಿ ಮೆಟ್ರೋ ಭಾರತದಲ್ಲಿ ಅತಿದೊಡ್ಡ ಕಾರ್ಯಾಚರಣೆಯ ಮೆಟ್ರೋ ಜಾಲವನ್ನು ಹೊಂದಿದೆ. ನೋಯ್ಡಾದ ಆಕ್ವಾ ಲೈನ್ (Noida’s Aqua line) ಮತ್ತು ರಾಪಿಡ್ ಮೆಟ್ರೋ ಗುರ್ಗಾಂವ್ (Rapid Metro Gurgaon) ಅಡಿಯಲ್ಲಿರುವ ನಿಲ್ದಾಣಗಳನ್ನು ಸೇರಿಸಿದರೆ, ನಿಲ್ದಾಣಗಳ ಸಂಖ್ಯೆ 286 ಆಗಲಿದೆ. ಅದರ ಮೊದಲ ಹಂತದ ಅಭಿವೃದ್ಧಿಯಲ್ಲಿ ದೆಹಲಿ ಮೆಟ್ರೋ ಮೂರು ಮಾರ್ಗಗಳನ್ನು ಹೊಂದಿತ್ತು ಮತ್ತು 2022 ರ ಹೊತ್ತಿಗೆ ಇದು 12 ಮಾರ್ಗಗಳ ವ್ಯಾಪಕ ಜಾಲವಾಗಿ ಅಭಿವೃದ್ಧಿಗೊಂಡಿದೆ.

ಏಷ್ಯಾದ ಅತಿ ದೊಡ್ಡ ಸೌರ ಸ್ಥಾವರ ಉದ್ಘಾಟಿಸಿದ ಮೋದಿ, ಇದ್ರಿಂದಲೇ ಚಲಿಸಲಿದೆ ದೆಹಲಿ ಮೆಟ್ರೋ
ದೆಹಲಿ ಮೆಟ್ರೋದ ನಂತರದ ಸ್ಥಾನದಲ್ಲಿ ಹೈದರಾಬಾದ್ ಮೆಟ್ರೋ ಇದೆ, ಇದು 69.2 ಕಿಲೋಮೀಟರ್ ಉದ್ದದ ರೈಲುಮಾರ್ಗವನ್ನು ಹೊಂದಿದೆ ಮತ್ತು ಬೆಂಗಳೂರು ಮೆಟ್ರೋ 56.1 ಕಿಲೋಮೀಟರ್ ಉದ್ದದ ಜಾಲವನ್ನು ಹೊಂದಿದೆ.

ರಿವರ್ ಮೆನ್ ಆಗಲಿದ್ದಾರೆ ಮೆಟ್ರೋ ಮೆನ್.. ನದಿ ಪುನಶ್ಚೇತನಕ್ಕೆ ವೇದಿಕೆ ಸಿದ್ಧ 

ಹೋಳಿ ಹಬ್ಬದಂದು ಅಂದರೆ ಮಾರ್ಚ್‌ 18 ರಂದು ಮಧ್ಯಾಹ್ನ  2:30ರವರೆಗೆ ದೆಹಲಿ ಮೆಟ್ರೋ ಕಾರ್ಯನಿರ್ವಹಿಸುವುದಿಲ್ಲ ಎಂದು ದೆಹಲಿ ಮೆಟ್ರೋ ತನ್ನ ಟ್ವಿಟ್ಟರ್‌ ಖಾತೆಯಲ್ಲಿ ಹೇಳಿಕೊಂಡಿದೆ. 

Holi Update

On Holi (18th March 2022), metro services will not be available till 2:30 PM on all lines of Delhi Metro, including Rapid Metro/Airport Express Line. Services will thus start at 2:30 PM from terminal stations on all lines and will continue normally thereafter.

— Delhi Metro Rail Corporation I कृपया मास्क पहनें😷 (@OfficialDMRC)

 


 

click me!