ಇಂಗ್ಲೀಷ್ ಕೇಳಿ ಬೆರಗಾದ ಪ್ಯಾಸೆಂಜರ್: ವಿಚಾರಿಸಿದಾಗ ಇವರು ನಿವೃತ್ತ ಲೆಕ್ಚರರ್‌

By Anusha Kb  |  First Published Mar 29, 2022, 6:05 PM IST
  • ಅರಳು ಹುರಿದಂತೆ ಇಂಗ್ಲೀಷ್ ಮಾತನಾಡುವ ಆಟೋ ಡ್ರೈವರ್
  • ಆಟೋ ಡ್ರೈವರ್ ಇಂಗ್ಲೀಷ್ ಮೋಡಿಗೆ ಬೆರಗಾದ ಯುವತಿ
  • ಇಂಗ್ಲೀಷ್‌ ಲೆಕ್ಚರರ್‌ ಆಗಿದ್ದವರು ಈಗ ಆಟೋ ಡ್ರೈವರ್

ಬೆಂಗಳೂರು(ಮಾ.29): ಆಟೋ ಹತ್ತಿದ್ದ ಆಕೆಗೆ ಶಾಕ್ ಕಾದಿತ್ತು, ಕಾರಣ ಆಟೋ ಚಾಲಕನ ಅದ್ಭುತವಾದ ಇಂಗ್ಲೀಷ್‌ ಮಾತುಗಾರಿಕೆ ಹಾಗೂ ಸರಳ ವ್ಯಕ್ತಿತ್ವ ಇದರಿಂದ ಬೆರಗಾದ ಆಕೆ ಅವರಲ್ಲಿ ಮಾತು ಮುಂದುವರೆಸಿದಾಗ ತಿಳಿದಿದ್ದು ಏನೆಂದರೆ ಅವರೊಬ್ಬ ನಿವೃತ್ತ ಉಪನ್ಯಾಸಕರು. ಹೌದು ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ನಿಖಿತಾ ಐಯ್ಯರ್‌ ಎಂಬವರು ತಮ್ಮ ಕಚೇರಿಗೆ ತೆರಳುವ ಸಲುವಾಗಿ ಉಬರ್‌ ಆಟೋ ಬುಕ್‌ ಮಾಡಿದ್ದರು. ಆಟೋ ಬಂದು ನಿಲ್ಲುತ್ತಿದ್ದಂತೆ ಆಟೋ ಹತ್ತಿದ ಆಕೆ ತನಗೆ ನಗರದ ಇನ್ನೊಂದು ಭಾಗದಲ್ಲಿರುವ ನನ್ನ ಕಚೇರಿಯನ್ನು ಆದಷ್ಟು ಬೇಗ ತಲುಪಬೇಕು. 

ನನಗೆ ಈಗಾಗಲೇ ವಿಳಂಬವಾಗಿದೆ ಎಂದು ಹೇಳುತ್ತಾರೆ. ಇದಕ್ಕೆ ಆಟೋ ಚಾಲಕ ದಯವಿಟ್ಟು ಬನ್ನಿ, ನಿಮಗೆಷ್ಟು ಸಾಧ್ಯವೋ ಅಷ್ಟು ಹಣ ನೀಡಿ ಎಂದು ಇಂಗ್ಲೀಷ್‌ನಲ್ಲೇ ಉತ್ತರಿಸುತ್ತಾರೆ. ಇವರ ಇಂಗ್ಲೀಷ್‌ ನೋಡಿ ಶಾಕ್‌ ಆದ ಆಕೆ ಆಟೋದಲ್ಲಿ ತನ್ನ  ಕಚೇರಿ ತಲುಪವವರೆಗೂ ಅವರಲ್ಲಿ ಮಾತನಾಡಿದ್ದು, ಅದನ್ನು ತಮ್ಮ ಲಿಂಕ್ಡಿನ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ. ಆ ಪೋಸ್ಟ್ ಈಗ ವೈರಲ್ ಆಗಿದ್ದು, ಈ ಹಿಂದೆ ಇಂಗ್ಲೀಷ್‌ ಲೆಕ್ಚರರ್‌ ಆಗಿದ್ದು, ಈಗ ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿರುವ 74 ವರ್ಷದ ಆಟೋ ಚಾಲಕ ಪಟ್ಟಾಬಿ ರಾಮನ್‌(Pataabi Raman) ಅವರ ಸರಳ ಹಾಗೂ ಸ್ವಾಭಿಮಾನದ ಜೀವನಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ನಿಕಿತಾ ಅಯ್ಯರ್ ಅವರ ಲಿಂಕ್ಡಿನ್‌ ಪೋಸ್ಟ್ ವಿವರ ಇಲ್ಲಿದೆ ಮುಂದೆ ಓದಿ.

Tap to resize

Latest Videos

ಆಟೋ ಚಾಲಕನ ಪ್ರಾಮಾಣಿಕತೆಗೆ ಮನಸೋತ ಗದಗ-ಬೆಟಗೇರಿ ಜನತೆ..!
ಇಂದು ಬೆಳಗ್ಗೆ ನಾನು ಕೆಲಸಕ್ಕೆ ಮನೆಯಿಂದ ಹೊರಟ್ಟಿದ್ದೆ. ಈ ವೇಳೆ ನ್ನ ಮುಖದಲ್ಲಿದ್ದ ಚಿಂತೆಯನ್ನು ನೋಡಿ ಒಬ್ಬರು ವಯಸ್ಸಾದ ಆಟೋ ಚಾಲಕರು ಎಲ್ಲಿಗೆ ಹೋಗಬೇಕು ಎಂದು ಕೇಳಿದರು. ಮೊದಮೊದಲು ಸಂದೇಹಗೊಂಡ ನಾನು ನಗರದ ಇನ್ನೊಂದು ತುದಿಯಲ್ಲಿರುವ ತನ್ನ ಕಛೇರಿಯನ್ನು ತಲುಪಬೇಕೆಂದು ಆಟೋ ಡ್ರೈವರ್‌ಗೆ ಹೇಳಿದೆ ಮತ್ತು ತಡವಾಗಿದ್ದರಿಂದ ಓಡುತ್ತಿದ್ದೆ. ಆದರೆ ಡ್ರೈವರ್  ಆತ ದಯವಿಟ್ಟು ಬನ್ನಿ ಎಂದು ಇಂಗ್ಲೀಷಿನಲ್ಲಿ ಉತ್ತರಿಸಿದ್ದು ನೋಡಿ ನನಗೆ ಅಚ್ಚರಿ ಆಗಿತ್ತು ಎಂದು ಆಕೆ ಬರೆದುಕೊಂಡಿದ್ದಾರೆ. ಹೀಗೆ ಆಟೋ ಹತ್ತಿದ ಆಕೆಗೆ ಉಳಿದ 45 ನಿಮಿಷಗಳು ಕಳೆದಿದ್ದೆ ತಿಳಿದಿಲ್ಲ. 

 

ತನ್ನ ಕುತೂಹಲವನ್ನು ತಡೆಯಲಾರದೆ, ಅಯ್ಯರ್‌ ಚಾಲಕನಲ್ಲಿ ಇಷ್ಟು ಒಳ್ಳೆಯ ಇಂಗ್ಲಿಷ್ ಹೇಗೆ ಮಾತನಾಡುತ್ತೀರಿ ಎಂದು ಕೇಳಿದಾಗ, ಆ ವ್ಯಕ್ತಿ ತಾನು ಮುಂಬೈ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕನಾಗಿದ್ದೆ ಮತ್ತು ತಾನು ಎಂಎ ಮತ್ತು ಎಂಇಡ್ ಮಾಡಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಹಾಗಾದರೆ ನಾನು ಆಟೋವನ್ನು ಏಕೆ ಓಡಿಸುತ್ತಿದ್ದೇನೆ ಎಂದು ನೀವು ನನ್ನನ್ನು ಕೇಳಲಿದ್ದೀರಿ ಅಲ್ಲವೇ ಎಂದು ಅವರೇ ಅಯ್ಯರ್ ಅವರು ಕೇಳಬೇಕಾಗಿದ್ದ ಪ್ರಶ್ನೆಯನ್ನು ಕೇಳಿದ್ದಾರೆ. 

ರಾಯಚೂರು: ಯಾವ ಪುರುಷರಿಗೂ ನಾನು ಕಮ್ಮಿ ಇಲ್ಲ ಅಂತಾರೆ ಈ ಲೇಡಿ ಆಟೋ ಡ್ರೈವರ್‌..!
ಇದಕ್ಕೆ ಅಯ್ಯರ್ ಅವರ ಸಕಾರಾತ್ಮಕ ಪ್ರತಿಕ್ರಿಯೆ ಬಂದ ನಂತರ ಆಟೋ ಚಾಲಕ ತನ್ನ ಜೀವನದ ಬಗ್ಗೆ ತೆರೆದಿಟ್ಟಿದ್ದಾರೆ. ತನ್ನ ಹೆಸರು ಪಟ್ಟಬಿ ರಾಮನ್ ಎಂದು ತಾನು ಕಾಲೇಜು ಉಪನ್ಯಾಸಕ ಹುದ್ದೆಯಿಂದ ನಿವೃತ್ತರಾದಾಗಿನಿಂದ ಅಂದರೆ 14 ವರ್ಷಗಳಿಂದ ಆಟೋ ಓಡಿಸುತ್ತಿರುವುದಾಗಿ ಹೇಳಿದರು. ಆಗ ಕರ್ನಾಟಕದಲ್ಲಿ ಯಾವುದೇ ಉದ್ಯೋಗ ಸಿಗದ ಕಾರಣ ಮುಂಬೈನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದ್ದೇನೆ ಎಂದು ರಾಮನ್ ಬಹಿರಂಗಪಡಿಸಿದರು.

ಉದ್ಯೋಗಕ್ಕಾಗಿ ಅಲೆದ ಅವರಿಗೆ ಕೇಳಿದ ಒಂದೇ ಒಂದು ಪ್ರಶ್ನೆ, 'ನಿಮ್ಮ ಜಾತಿ ಯಾವುದು?' ಮತ್ತು ಅವರು ತಮ್ಮ ಹೆಸರನ್ನು ಪಟ್ಟಾಬಿ ರಾಮನ್ ಎಂದು ಹೇಳಿದಾಗ, ಅವರು, 'ನಾವು ನಿಮಗೆ ತಿಳಿಸುತ್ತೇವೆ' ಎಂದು ಹೇಳುತ್ತಿದ್ದರು ಎಂದು ಅಯ್ಯರ್ ಬರೆದಿದ್ದಾರೆ. 

ಕರ್ನಾಟಕದ ಕಾಲೇಜುಗಳಿಂದ ಅವರು ಪಡೆದ ಈ ಪ್ರತಿಕ್ರಿಯೆಯಿಂದ ಬೇಸರಗೊಂಡ ರಾಮನ್ ಅವರು ಮಹಾರಾಷ್ಟ್ರದ (Maharashtra) ಮುಂಬೈಗೆ (Mumbai)ತೆರಳಿದರು, ಅಲ್ಲಿ ಅವರು ಪ್ರತಿಷ್ಠಿತ ಕಾಲೇಜಿನಲ್ಲಿ ಉದ್ಯೋಗವನ್ನು ಕಂಡುಕೊಂಡರು. ಅವರು 20 ವರ್ಷಗಳ ಕಾಲ ಪೊವೈನಲ್ಲಿರುವ ಕಾಲೇಜಿನಲ್ಲಿ ಕೆಲಸ ಮಾಡಿ 60 ನೇ ವಯಸ್ಸಿನಲ್ಲಿ ನಿವೃತ್ತರಾದರು ಮತ್ತು ಕರ್ನಾಟಕದ ಬೆಂಗಳೂರಿಗೆ ಮರಳಿದರು.

ಶಿಕ್ಷಕರಿಗೆ ಸರಿಯಾಗಿ ಸಂಬಳವಿಲ್ಲ. ನೀವು ಗರಿಷ್ಠ 10 ರಿಂದ 15,000 ಗಳಿಸಬಹುದು ಮತ್ತು ಅದು ಖಾಸಗಿ ಸಂಸ್ಥೆಯಾಗಿದ್ದರಿಂದ ನನಗೆ ಪಿಂಚಣಿ ಇಲ್ಲ. ರಿಕ್ಷಾ ಓಡಿಸುವ ಮೂಲಕ ನಾನು ದಿನಕ್ಕೆ ಕನಿಷ್ಠ 700-1500/- ಪಡೆಯುತ್ತೇನೆ. ನನಗೆ ಮತ್ತು ನನ್ನ ಗೆಳತಿಗೆ(ಗರ್ಲ್‌ಫ್ರೆಂಡ್‌) ಇದು ಸಾಕು ಎಂದು ಅವರು ನಗುತ್ತಾ  ಹೇಳಿದರು.

ಅವರ ಬಾಯಲ್ಲಿ ಗರ್ಲ್‌ಫ್ರೆಂಡ್‌ ಪದ ಕೇಳಿ ಅಯ್ಯರ್ ಕೂಡ ನಕ್ಕಾಗ ತಾನು ತನ್ನ ಪತ್ನಿಯನ್ನು ಗರ್ಲ್‌ಫ್ರೆಂಡ್‌ ಎಂದು ಕರೆಯುವುದಾಗಿ ಹೇಳಿದರು. ಅಲ್ಲದೇ ತಮಗೊಬ್ಬ ಪುತ್ರನಿದ್ದು, ಆತ ತಮ್ಮ ಮನೆಯ ಬಾಡಿಗೆಯನ್ನು ಕಟ್ಟುತ್ತಾನೆ. ಆದರಾಚೆಗೆ ನಾವು ಆತನಿಂದ ಏನನ್ನು ಬಯಸುತ್ತಿಲ್ಲ. ಅವರು ಅವರ ಜೀವನವನ್ನು ನಡೆಸುತ್ತಿದ್ದಾರೆ. ನಾವು ನಮ್ಮ ಜೀವನವನ್ನು ಖುಷಿಯಿಂದ ನಡೆಸುತ್ತಿರುವುದಾಗಿ ಹೇಳಿದರು.

click me!