ಬೀಟಿಂಗ್ ರೀಟ್ರಿಟ್: ರಾಷ್ಟ್ರಪತಿ ಅನುಮತಿಯೊಂದಿಗೆ ಬ್ಯಾರೆಕ್ ಸೇರಿದ ಸೇನಾ ತುಕಡಿ!

Suvarna News   | ANI
Published : Jan 29, 2020, 06:27 PM ISTUpdated : Jan 29, 2020, 07:03 PM IST
ಬೀಟಿಂಗ್ ರೀಟ್ರಿಟ್: ರಾಷ್ಟ್ರಪತಿ ಅನುಮತಿಯೊಂದಿಗೆ ಬ್ಯಾರೆಕ್ ಸೇರಿದ ಸೇನಾ ತುಕಡಿ!

ಸಾರಾಂಶ

ದೆಹಲಿಯಲ್ಲಿ ಆಕರ್ಷಕ ಬೀಟಿಂಗ್ ರೀಟ್ರಿಟ್ ಪರೇಡ್| ರಾಷ್ಟ್ರಪತಿ, ಪ್ರಧಾನಿ, ಮೂರೂ ಸೇನಾಪಡೆಗಳ ಮುಖ್ಯಸ್ಥರು ಭಾಗಿ| ರಾಷ್ಟ್ರಪತಿ ಅನುಮತಿ ಪಡೆದು ಮರಳಿ ಬ್ಯಾರೆಕ್ ಸೇರಿದ ಸೇನಾ ತುಕಡಿಗಳು| ಗಣರಾಜ್ಯೋತ್ಸವ ಸಮಾರಂಭಕ್ಕೆ ಅಂತಿಮ ತೆರೆ| ಮೂರು ಪಡೆಗಳ ಬ್ಯಾಂಡ್’ನಿಂದ ಆಕರ್ಷಕ ಕವಾಯತು|

ನವದೆಹಲಿ(ಜ.29): ಗಣರಾಜ್ಯೋತ್ಸವ ಅಂಗವಾಗಿ ದೆಹಲಿಗೆ ಬಂದಿದ್ದ ಸೇನಾ ತುಕಡಿಗಳು ಇಂದು ಬೀಟಿಂಗ್ ರೀಟ್ರಿಟ್ ಮೂಲಕ ಮರಳಿ ಬ್ಯಾರೆಕ್ ಸೇರಿವೆ.ಈ ಮೂಲಕ ಗಣರಾಜ್ಯೋತ್ಸವ ಸಮಾರಂಭಕ್ಕೆ ಅಂತಿಮ ತೆರೆ ಬಿದ್ದಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮತಿ ಪಡೆದು ಸೇನಾ ತುಕಡಿಗಳು ದೆಹಲಿ ತ್ಯಜಿಸಿವೆ.

"

ದೆಹಲಿಯ ರೈಸಿನಾ ಹಿಲ್ಸ್’ನ ವಿಜಯ್ ಚೌಕ್’ನಲ್ಲಿ ನಡೆದ ಬೀಟಿಂಗ್ ರೀಟ್ರಿಟ್ ಪರೇಡ್’ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಮೂರು ಸೇನಾಪಡೆಗಳ ಮುಖ್ಯಸ್ಥರು ಸಾಕ್ಷಿಯಾದರು.

ಗಮನ ಸೆಳೆದ CRPF ವುಮೆನ್ ಡೇರ್‌ಡೆವಿಲ್ಸ್ ಸಾಹಸ ಪ್ರದರ್ಶನ!

ಮೂರೂ ಸೇನಾಪಡೆಗಳ ಸೈನಿಕರು ಆಕರ್ಷಕ ಪಥಸಂಚಲನ ನಡೆಸುವ ಮೂಲಕ ಬೀಟಿಂಗ್ ರೀಟ್ರಿಟ್’ಗೆ ರಾಷ್ಟ್ರಪತಿಗಳಿಂದ ಅನುಮತಿ ಪಡೆದರು.

ಏನಿದು ಬೀಟಿಂಗ್ ರೀಟ್ರಿಟ್:

1950ರಲ್ಲಿ ಭಾರತೀಯ ಸೇನೆಯ ಮೇಜರ್ ರಾಬರ್ಟ್ಸ್ ಪರಿಚಯಿಸಿದ ಬೀಟಿಂಗ್ ರೀಟ್ರಿಟ್ ವಿಶೇಷ ಕಾರ್ಯಕ್ರಮವಾಗಿದ್ದು, ಯುದ್ಧದ ಮುಕ್ತಾಯದ ಬಳಿಕ ಸೇನಾ ತುಕಡಿಗಳು ತಮ್ಮ ಬ್ಯಾಂಡ್’ನೊಂದಿಗೆ ಬ್ಯಾರೆಕ್’ಗಳಿಗೆ ಮರಳುವ ವಿಶೇಷ ಸಮಾರಂಭವಾಗಿದೆ. ತದನಂತರ ಇದನ್ನು ಗಣರಾಜ್ಯೋತ್ಸವದ ಸಮಾರೋಪ ಸಮಾರಂಭಗಳಲ್ಲಿ ಅನುಸರಿಸಲು ಪ್ರಾರಂಭಿಸಲಾಯಿತು.

ಮಹಿಳಾ ಬಲ: ಗಣರಾಜ್ಯೋತ್ಸವ ಪರೇಡ್ ಮುನ್ನಡೆಸಿದ ಕ್ಯಾಪ್ಟನ್ ತಾನ್ಯಾ!

ಸೂರ್ಯ ಮುಳುಗುವುದರೊಳಗಾಗಿ ರಾಷ್ಟ್ರಪತಿಗಳ ಅನುಮತಿ ಪಡೆದು ಮೂರೂ ಸೇನಾಪಡೆಗಳ ತುಕಡಿಗಳು ಮರಳಿ ತಮ್ಮ ಬ್ಯಾರೆಕ್ ಸೇರುವುದು ಸಂಪ್ರದಾಯ. ಇದನ್ನು ಪ್ರತಿವರ್ಷದ ಜನವರಿ 29ರಂದು ಆಯೋಜಿಸಲಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ
Vote Chori Row: 'ನಿಮ್ಮ ಮನಸಿಗೆ ಏನಾಗಿದೆ?..' ಪ್ರತಿಪಕ್ಷಗಳಿಗೆ ದೇವೇಗೌಡ ಎಚ್ಚರಿಕೆ