ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಅನುರಾಗ್, ಪರ್ವೇಶ್ ಔಟ್!

By Suvarna NewsFirst Published Jan 29, 2020, 4:56 PM IST
Highlights

ಒಬ್ಬರು ಗುಂಡಿಕ್ಕಿ ಎಂದರೆ, ಮತ್ತೊಬ್ಬರು ರೇಪ್ ಮಾತನಾಡಿದರು..| ಸ್ಟಾರ್ ಪ್ರಚಾರಕ ಪಟ್ಟಿಯಿಂದ ಅನುರಾಗ್, ಪರ್ವೇಶ್ ಔಟ್| ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈ ಬಿಡುವಂತೆ ಚುನಾವಣಾ ಆಯೋಗ ಆದೇಶ| ದೇಶದ್ರೋಹಿಗಳಿಗೆ ‘ಗೋಲಿ ಮಾರೋ’ ಎಂದಿದ್ದ ಅನುರಾಗ್| 

ನವದೆಹಲಿ(ಜ.29): ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ,  ಕೇಂದ್ರ ಸಚಿವ ಅನುರಾಗ್ ಠಾಕೂರ್ ಹಾಗೂ ಸಂಸದ ಪರ್ವೇಶ್ ವರ್ಮಾ ಅವರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ತೆಗೆದು ಹಾಕುವಂತೆ ಚುನಾವಣಾ ಆಯೋಗ ಬಿಜೆಪಿಗೆ ಆದೇಶಿಸಿದೆ.

ಚುನಾವಣಾ ಪ್ರಚಾರದ ವೇಳೆ ಸಿಎಎ ವಿರೋಧಿ ಪ್ರತಿಭಟನಾ ನಿರತರನ್ನು ಟೀಕಿಸಿದ್ದ ಅನುರಾಗ್ ಠಾಕೂರ್,  ದೇಶದ್ರೋಹಿಗಳಿಗೆ ‘ಗೋಲಿ ಮಾರೋ’ ಎಂದು ಹೇಳಿದ್ದರು.

ಹೀನ್ ಬಾಗ್ ಪ್ರತಿಭಟನಾಕಾರರು ರೇಪ್ ಮಾಡಬಹುದು: ಬಿಜೆಪಿ ಸಂಸದ!

ಅಲ್ಲದೇ ಶಾಹೀನ್ ಬಾಗ್ ಪ್ರತಿಭಟನಾಕಾರರು ನಿಮ್ಮ ಮನೆಗೆ ನುಗ್ಗಿ ಮಹಿಳೆಯರ ಮೇಲೆ ಅತ್ಯಾಚಾರ ಮಾಡಬಹುದು ಎಂದು ಬಿಜೆಪಿ ಸಂಸದ ಪರ್ವೇಶ್ ವರ್ಮಾ ಮತದಾರರನ್ನು ಹೆದರಿಸಿದ್ದರು.

Election Commission of India: EC has ordered removal of Anurag Thakur & Parvesh Sahib Singh Verma from the list of star campaigners of BJP for with immediate effect & until further notice. pic.twitter.com/LXAXePyAnn

— ANI (@ANI)

ಈ ಎರಡೂ ಪ್ರಕರಣಗಳ ತನಿಖೆ ನಡೆಸಿರುವ ಚುನಾವಣಾ ಆಯೋಗ, ಈ ಇಬ್ಬರು ನಾಯಕರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ತೆಗೆದು ಹಾಕುವಂತೆ ಬಿಜೆಪಿಗೆ ನಿರ್ದೇಶನ ನೀಡಿದೆ. 

ಸಿಎಎ ವಿರೋಧಿಗಳಿಗೆ ‘ಗೋಲಿ ಮಾರೋ’ ಎಂದ ಕೇಂದ್ರ ಸಚಿವ!

ಸ್ಟಾರ್ ಪ್ರಚಾರಕರ ವೆಚ್ಚವನ್ನು ಪಕ್ಷ ಭರಿಸುವುದರಿಂದ ಅವರಿಗೆ ಖರ್ಚು ವೆಚ್ಚದ ಮಿತಿ ಇರುವುದಿಲ್ಲ. ಈಗ ಠಾಕೂರ್ ಮತ್ತು ವರ್ಮಾ ಅವರ ಪ್ರಚಾರದ ವೆಚ್ಚಕ್ಕೆ ಮಿತಿ ಇರುತ್ತದೆ ಮತ್ತು ಅದನ್ನು ಅಭ್ಯರ್ಥಿಯೇ ಭರಿಸಬೇಕಾಗುತ್ತದೆ.

click me!