ಸ್ವಿಗ್ಗಿ ಬಾಯ್ ಕಿತಾಪತಿ ಆನ್‌ಲೈನ್‌ನಲ್ಲಿ ವೈರಲ್

By Anusha KbFirst Published May 6, 2022, 11:52 AM IST
Highlights
  • ಸಿಸಿಡಿ ಕಾಫಿ ಬುಕ್ ಮಾಡಿದ ವ್ಯಕ್ತಿ
  • ಆರ್ಡರ್‌ ಪಡೆದ ಸ್ವಿಗ್ಗಿ ಡೆಲಿವರಿ ಬಾಯ್
  • ಬಳಿಕ ಡುಂಜೋ ಮೂಲಕ ಕಾಫಿ ಪೂರೈಕೆ

ನಾಯಿಗೆ ಹೇಳಿದ್ರೆ ನಾಯಿ ಬಾಲಕ್ಕೆ ಹೇಳ್ತು ಎಂಬ ಗಾದೆ ಮಾತೊಂದಿದೆ. ಅದೇ ರೀತಿ ಬೆಂಗಳೂರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಮಾಡಿದ ಕಿತಾಪತಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಇದು ಆನ್‌ಲೈನ್‌ ಯುಗ ಇತ್ತೀಚೆಗೆ ಎಲ್ಲವನ್ನು ಆನ್‌ಲೈನ್‌ನಲ್ಲಿ ತರಿಸುವುದು ಮಾಮೂಲಿ. ಬೆಂಗಳೂರಿನಂತಹ ಮಹಾನಗರಿಯಲ್ಲಿ ಕುಡಿಯುವ ನೀರಿನಿಂದ ಹಿಡಿದು ಪಿಜ್ಜಾ ಬರ್ಗರ್ ಬಟ್ಟೆವರೆಗೆ ಎಲ್ಲವೂ ಆನ್ಲೈನ್‌ನಲ್ಲಿ ನಿಮ್ಮ ಮನೆ ಬಾಗಿಲಿಗೆ ಬಂದು ಸೇರುವುದು. ಹೀಗೆ ವ್ಯಕ್ತಿಯೊಬ್ಬ ಕೆಫೆ ಕಾಫಿ ಡೇಯಿಂದ ಆನ್‌ಲೈನ್‌ನಲ್ಲಿ ಕಾಫಿ ಬುಕ್‌ ಮಾಡಿದ್ದಾರೆ. ಸ್ವಿಗ್ಗಿ ಮೂಲಕ ಅವರು ಕೆಫೆ ಕಾಫಿ ಡೇಯಿಂದ ಕಾಫಿ ಬುಕ್ ಮಾಡಿದ್ದಾನೆ. ಡೆಲಿವರಿ ಆರ್ಡರ್‌ ಪಡೆದ ಸ್ವಿಗ್ಗಿ ಡೆಲಿವರಿ ಬಾಯ್ ಅದನ್ನು ತಾನೇ ಹೋಗಿ ಡೆಲಿವರಿ ತಲುಪಿಸದೇ ಡುಂಜೊ ಮೂಲಕ ಅದನ್ನು ಕಾಫಿ ಬುಕ್‌ ಮಾಡಿದ ವ್ಯಕ್ತಿಗೆ ಕಳುಹಿಸಿದ್ದಾನೆ. ಇದನ್ನು ನೋಡಿ ಕಾಫಿ ಬುಕ್ ಮಾಡಿದ ವ್ಯಕ್ತಿ ದಂಗಾಗಿದ್ದಾನೆ. (ಡುಂಜೊ ಎಂಬುದು ಆನ್‌ಲೈನ್ ಆಪ್ ಆಗಿದ್ದು, ಬೆಂಗಳೂರಿನಲ್ಲಿ ಇದು ಕಾರ್ಯ ನಿರ್ವಹಿಸುತ್ತದೆ. ಇದರ ಮೂಲಕ ನೀವು ಯಾವುದೇ ವಸ್ತುವನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕಳುಹಿಸಬಹುದಾಗಿದೆ).

Hello , the latest Bangalore update is broken. pic.twitter.com/GlDRJgdreh

— Omkar Joshi (@omkar__joshi)

Latest Videos

ತಾನು ಬುಕ್ ಮಾಡಿದ ಕಾಫಿಯ ಆರ್ಡರ್ ಪಡೆದ ಸ್ವಿಗ್ಗಿ ಡೆಲಿವರಿ ಬಾಯ್‌, ಡುಂಜೋ ಆಪ್‌ನಲ್ಲಿ ಡೆಲಿವರಿ ಬಾಯ್‌ನ್ನು ಬುಕ್ ಮಾಡಿ ಆತನ ಮೂಲಕ ಸಿಸಿಡಿ ಕಾಫಿಯನ್ನು ಕಾಫಿ ಬುಕ್ ಮಾಡಿದ ಓಂಕಾರ್‌ ಜೋಷಿ ಅವರಿಗೆ ಕಳುಹಿಸಿದ್ದಾನೆ. ಇಷ್ಟು ಮಾತ್ರವಲ್ಲದೇ ಓಂಕಾರ್ ಜೋಷಿ ಅವರಿಗೆ ಕರೆ ಮಾಡಿದ ಆತ ಬೈಯ್ಯಾ (ಸಹೋದರ) ನನಗೆ ನಾನು ಡುಂಜೋ ಮೂಲಕ ನೀವು ಬುಕ್ ಮಾಡಿದ ಕಾಫಿಯನ್ನು ಕಳುಹಿಸುತ್ತಿದ್ದೇನೆ. ದಯವಿಟ್ಟು ನನಗೆ ಫೈವ್‌ ಸ್ಟಾರ್ ರೇಟಿಂಗ್ ಕೊಡಿ ಎಂದು ಆತ ಕೇಳಿದ್ದಾನೆ. ಪೀಕ್ ಬೆಂಗಳೂರು ಹೆಸರಿನ ಸ್ವಿಗ್ಗಿ ಡೆಲಿವರಿ ಬಾಯ್ ಈ ಕೃತ್ಯವೆಸಗಿದ್ದಾನೆ ಎಂದು ಸಿಸಿಡಿ ಕಾಫಿ ಬುಕ್ ಮಾಡಿದ ಒಂಕಾರ್ ಜೋಷಿ ಹೇಳಿಕೊಂಡಿದ್ದಾರೆ. 

ನಾನು ಸ್ವಿಗ್ಗಿಯಲ್ಲಿ ಸಿಸಿಡಿ ಕಾಫಿ ಆರ್ಡರ್‌ ಮಾಡಿದೆ. ಡೆಲಿವರಿ ಮಾಡುವ ಹುಡುಗ ಆರ್ಡರ್‌ ತೆಗೆದುಕೊಂಡ. ಆದರೆ ಆತ ನಾನಿರುವ ಪ್ರದೇಶಕ್ಕೆ ಬರಲು ತುಂಬಾ ಸೋಮಾರಿಯಾಗಿದ್ದ. ಹೀಗಾಗಿ ಆತ ಡೆಲಿವರಿ ಮಾಡುವ ಆಪ್‌ ಆದ ಡುಂಜೊ ಬುಕ್ ಮಾಡಿ ಅದರ ಮೂಲಕ ನನಗೆ ಕಾಫಿ ಕಳುಹಿಸಿದ, ಇಷ್ಟೇ ಅಲ್ಲೇ ಕರೆ ಮಾಡಿದ ಆತ ಬೈಯ್ಯಾ ನಾನು ನಿಮಗೆ ಕಾಫಿಯನ್ನು ಡುಂಜೊ ಮಾಡಿದೆ. ನನಗೆ ದಯವಿಟ್ಟು ಫೈವ್‌ಸ್ಟಾರ್ ರೇಟಿಂಗ್ ನೀಡಿ ಎಂದು ಕೇಳಿದ ಎಂದು ಓಂಕಾರ್ ಜೋಷಿ ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಪ್ರೇಮಿಗಳ ಜಗಳದ ಮಧ್ಯೆ ಬಂದು ಯುವತಿಗೆ ಸರಿಯಾಗಿ ಬಾರಿಸಿದ ಸ್ವಿಗ್ಗಿ ಬಾಯ್

ಸ್ವಿಗ್ಗಿ ಡೆಲಿವರಿ ಯುವಕನ ವರ್ತನೆಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇತ್ತ ಡುಂಜೊ ಬಾಯ್ ಇ-ಬೈಕ್ ಸರ್ವಿಸ್ ನೀಡುವ ಯುಲು ಆಪ್‌ ಮೂಲಕ ಬೈಕ್ ಬುಕ್ ಮಾಡಿ ಕಾಫಿ ಡೆಲಿವರಿ ಮಾಡಿರಬಹುದು ಎಂಬ ಕಾಮೆಂಟ್ ಬಂದಿದೆ. 


ಡೆಲಿವರಿ ಬಾಯ್‌ಗಳು ಮಾನವೀಯತೆ ತೋರಿದ ಹಲವ ನಿದರ್ಶನಗಳು ಕೂಡ ನಮ್ಮಲಿವೆ. ಕಳೆದ ಮಾರ್ಚ್‌ನಲ್ಲಿ ಯುವತಿಯೊಬ್ಬರು ಡೆಲಿವರಿ ಬಾಯ್ ಮಾಡಿದ ಸಹಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಮುಂಬೈ ಮೂಲದ ಅಕ್ಷಿತಾ ಚಂಗನ್‌ (Akshita Changan) ಹಾಗೂ ಅವರ ಸಹೋದರ ಸ್ವಿಗ್ಗಿ ಡೆಲಿವರಿ ಬಾಯ್‌ನಿಂದ ಸಹಾಯ ಪಡೆದವರಾಗಿದ್ದು, ಅವರು ತಮಗೆ ಸಹಾಯ ಮಾಡಿದ ಯುವಕನ ಮಾನವೀಯ ಕಾರ್ಯವನ್ನು ಶ್ಲಾಘಿಸುವ ಸಲುವಾಗಿ ಲಿಂಕ್ಡಿನ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದರು. ಮಾರ್ಚ್‌ಗೂ ಒಂದು ತಿಂಗಳ ಹಿಂದೆ ನಡೆದ ಘಟನೆ ಅದಾಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಡೆಲಿವರಿ ಬಾಯ್ ರೋಷನ್ ದಾಲ್ವಿ (Roshan Dalvi) ತಮಗೆ ಹೇಗೆ ಸಹಾಯ ಮಾಡಿದ ಎಂಬುದನ್ನು ಅಕ್ಷಿತಾ ಬರೆದುಕೊಂಡಿದ್ದಾರೆ. 


ಸೈಕಲ್‌ನಲ್ಲಿ ಫುಡ್ ಡೆಲಿವರಿ ಮಾಡುತ್ತಿರುವ Zomato ಡಲಿವರಿ ಬಾಯ್‌, ಬೈಕ್ ಕೊಡಿಸಲು ಮುಂದಾದ ನೆಟ್ಟಿಗರು

click me!