ಬೆಂಗಳೂರು: ನೀವು ರಸ್ಲಿಂಗ್ ಪ್ರಿಯರ WWE ಯಲ್ಲಿ ನೀವು ಮಹಿಳಾ ರಸ್ಲರ್‌ಗಳು ಹೊಡೆದಾಡುವುದನ್ನು ನೋಡಿರಬಹುದು. ಬಹುಶ ಈಗ ತೋರಿಸುವ ಈ ಎರಡು ವಿಡಿಯೋಗಳನ್ನು ನೋಡಿದರೆ ನಿಮಗೆ ಮಹಿಳಾ ರಸ್ಲರ್‌ಗಳ ನೆನಪಾಗಬಹುದು. ಏಕೆಂದರೆ ನಮ್ ಹುಡ್ಗೀರ್ ಇತ್ತೀಚೆಗೆ ನಾವು ಯಾರಿಗೂ ಕಡಿಮೆ ಇಲ್ಲ ಅಂತ ಹಾದಿ ಬೀದಿಲಿ ಹೊಡೆದಾಡಿಕೊಳ್ತಿದ್ದಾರೆ. ಒಂದು ಕಡೆ ಕಾಲೇಜು ಹುಡುಗಿಯರು ಹಾಗೂ ಮತ್ತೊಂದು ಕಡೆ ಇಬ್ಬರು ಮಹಿಳೆಯರು ಪರಸ್ಪರ ಹೊಡೆದಾಡುತ್ತಿರುವ ವಿಡಿಯೋಗಳು ಇಂಟರ್‌ನೆಟ್‌ಗೆ ಕಿಚ್ಚು ಹಚ್ಚಿದೆ.
ಮೊದಲಿಗೆ ಬೆಂಗಳೂರಿದ್ದೆನ್ನಲ್ಲಾದ ವಿಡಿಯೋ (Viral Video) ಬಗ್ಗೆ ನೋಡೋಣ, ಇದರಲ್ಲಿ ಹುಡುಗಿಯರಿಬ್ಬರು ಮೊದಲಿಗೆ ಬಿರುಸಿನ ಕಾವೇರಿದ ವಾಗ್ವಾದದಲ್ಲಿ ತೊಡಗುತ್ತಾರೆ. ಮಾತಿನ ಚಕಮಕಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಅವರಲ್ಲೇ ಒಬ್ಬಳು ಹುಡುಗಿ ಇನ್ನೊಬ್ಬಳ ಕೆನ್ನೆಗೆ ರಫ್ ಅಂತ ಬಾರಿಸಿ ಬಿಡುತ್ತಾಳೆ. ಊಹಿಸದೇ ಬಿದ್ದ ಏಟಿಗೆ ಆಕೆ ಕೆರಳಿದ ಸಿಂಹದಂತಾಗಿದ್ದು, ಇಬ್ಬರು ಪರಸ್ಪರ ಎಳೆದಾಡಿಕೊಂಡು ಅತ್ತಿತ್ತ ದೂಡಿಕೊಂಡು ಕೈ ಕೈ ಮಿಲಾಯಿಸಿಕೊಂಡು ಜಗಳ ಮಾಡುತ್ತಾರೆ. ಅಲ್ಲಿ ಬೇರೆ ವಿದ್ಯಾರ್ಥಿಗಳು ಸಾಕಷ್ಟು ಜನರಿದ್ದು, ಯಾರೊಬ್ಬರೂ ಕೂಡ ಇವರ ಜಗಳ ಬಿಡಿಸಲು ಬಂದಿಲ್ಲ. ಅದಕ್ಕೆ ಬದಲು ಕೆಲವರು ಶಿಳ್ಳೆ ಹೊಡೆದು ಬೊಬ್ಬೆ ಹಾಕುವ ಮೂಲಕ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಯಾರು ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಕ್ಕೆ (Social Media) ಹಾಕಿದ್ದಾರೆ.
ಈ ವಿಡಿಯೋ ಬೆಂಗಳೂರಿನ (Bengaluru) ಪ್ರತಿಷ್ಠಿತ ಕಾಲೇಜು ಎನಿಸಿದ್ದ ದಯಾನಂದ್ ಸಾಗರ್ ಇಂಜಿನಿಯರಿಂಗ್ ಕಾಲೇಜಿನ (Dayananda Sagar College of Engineering) ವಿಡಿಯೋ ಎಂದು ಈ ವಿಡಿಯೋ ಪೋಸ್ಟ್ ಮಾಡಿದಾಗ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾನೆ. ಈ ವಿಡಿಯೋಗೆ ಸಾಕಷ್ಟು ಜನ ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಯಾರು ಯಾಕೆ ಈ ಹೊಡೆದಾಟವನ್ನು ನಿಲ್ಲಿಸುತ್ತಿಲ್ಲ. ಯಾಕೆಂದರೆ ಎಲ್ಲರಿಗೂ ಮಜಾ ಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಒಬ್ಬನಿಗಾಗಿ ಇಬ್ಬರು ಹುಡುಗಿಯರ ಬೀದಿ ಜಗಳ, ರಂಪಾಟ ನೋಡಿ ಕಾಲ್ಕಿತ್ತ ಬಾಯ್‌ಫ್ರೆಂಡ್!
ಹಾಗೆಯೇ ಇನ್ನೊಂದು ವಿಡಿಯೋದಲ್ಲಿ( ಮಹಿಳೆಯರಿಬ್ಬರು ಜಿಮ್‌ನಲ್ಲಿ ಹೊಡೆದಾಡುತ್ತಿದ್ದಾರೆ. ಜಿಮ್‌ನ ಉಪಕರಣವೊಂದರ ವಿಚಾರವಾಗಿ ಮಹಿಳೆಯರಿಬ್ಬರ ಮಧ್ಯೆ ಹೊಡೆದಾಟ ಶುರುವಾಗಿದೆ. ಇಲ್ಲಿ ಸ್ಮಿತ್ ಮೆಷಿನ್‌ನಲ್ಲಿ ಕುಳಿತುಕೊಂಡು ಒಬ್ಬಳು ಜಿಮ್ ಮಾಡುತ್ತಿದ್ದು, ಅವಳು ಎದ್ದು ಹೋಗುತ್ತಿದ್ದಂತೆ ಅಲ್ಲೇ ಕಾಯುತ್ತಿದ್ದ ಒಬ್ಬಳು ಅದರ ಮೇಲೆ ಕೂರಲು ಯತ್ನಿಸಬೇಕಾದರೆ ಇನ್ನೊಬ್ಬಳು ಬಂದು ಆಕೆಯನ್ನು ತಳ್ಳಿ ಆ ಮೆಷಿನ್‌ನಲ್ಲಿ ಕೂರಲು ಯತ್ನಿಸುತ್ತಾಳೆ. ಈ ವೇಳೆ ಇಬ್ಬರಿಗೂ ಕಿತ್ತಾಟ ಶುರು ಆಗಿದೆ. ಈ ಜಗಳ ಎಷ್ಟರ ಮಟ್ಟಿಗೆ ಬಿಸಿಯೇರಿತ್ತೆಂದರೆ ಇಬ್ಬರು ಪರಸ್ಪರ ಕೂದಲನ್ನು ಹಿಡಿದುಕೊಂಡು ಎಳೆದಾಡಿದ್ದು, ಇಬ್ಬರನ್ನು ಬಿಡಿಸಲು ಜಿಮ್‌ನಲ್ಲಿದ್ದ ಇನ್ನಿಬ್ಬರು ಯುವತಿಯರು ಓಡಿ ಬರಬೇಕಾಯಿತು. ಅದರೂ ಒಬ್ಬರು ಕೂಡ ಸುಲಭವಾಗಿ ಒಬ್ಬರನ್ನೊಬ್ಬರು ಬಿಡಲು ಸಿದ್ಧರಿರಲಿಲ್ಲ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಸಾಕಷ್ಟು ಕಾಮೆಂಟ್‌ಗಳು ಬಂದಿವೆ.
ನಡುರಸ್ತೆಯಲ್ಲಿ ಕೂದಲು ಎಳೆದುಕೊಂಡು ಕಿತ್ತಾಡಿದ ಯುವತಿಯರು, ವಿಡಿಯೋ ವೈರಲ್
ನನಗೆ ಹುಡುಗಿಯರು ಕಿತ್ತಾಡುವುದನ್ನು ನೋಡಲು ಖುಷಿ ಎನಿಸುತ್ತಿದೆ. ಆದರೆ ಬರೀ ಕೂದಲಿಡಿದು ಎಳೆದಾಡುವ ಬದಲು ಬೇರೆ ರೀತಿಯ ಸ್ಟಂಟ್ ಮಾಡ್ಬಹುದಲ್ಲ ಎಂದು ಒಬ್ಬ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾನೆ. ಈ ಎರಡೂ ವಿಡಿಯೋಗಳನ್ನು ಸಾಕಷ್ಟು ಜನ ರಿಟ್ವಿಟ್ ಮಾಡಿದ್ದಾರೆ. ಒಟ್ಟಿನಲ್ಲಿ ಮಹಿಳೆಯರ ಕಿತ್ತಾಟದ ವಿಡಿಯೋ ಇಂಟರ್‌ನೆಟ್‌ನಲ್ಲಿ ಟ್ರೆಂಡ್ ಸೃಷ್ಟಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ